ಟ್ರಾವೆಲ್ ಟಿಪ್ಸ್

ಕಡಿಮೆ ಬಜೆಟ್‌ನಲ್ಲಿ ವಿದೇಶ ಪ್ರವಾಸ ಮಾಡೋದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸ ಅಷ್ಟೊಂದು ದುಬಾರಿ ಅನ್ನೋ ಕಲ್ಪನೆ ನಿಧಾನವಾಗಿ ಬದಲಾಗುತ್ತಿದೆ. ಸರಿಯಾದ ಯೋಜನೆ ಮತ್ತು ಕೆಲವು ಸ್ಮಾರ್ಟ್‌ ಟ್ರಾವೆಲ್ ಟಿಪ್ಸ್‌ ಪಾಲಿಸಿದರೆ ಕಡಿಮೆ ಬಜೆಟ್‌ನಲ್ಲೂ ವಿದೇಶ ಪ್ರವಾಸವನ್ನು ಸುಲಭವಾಗಿ ಅನುಭವಿಸಬಹುದು. ಈ ನಿಟ್ಟಿನಲ್ಲಿ ನಿಮಗೆ ಕಡಿಮೆ ಬಜೆಟ್‌ನಲ್ಲಿ ಫಾರಿನ್‌ ಟ್ರಿಪ್‌ ಪ್ಲಾನ್‌ ಮಾಡಲು ಬೇಕಿರುವ ಸರಳ ಟಿಪ್ಸ್‌ಗಳು ಇಲ್ಲಿವೆ.

ಅಡ್ವಾನ್ಸ್ ಪ್ಲಾನಿಂಗ್‌ ಮಾಡಿ

ವಿದೇಶ ಪ್ರವಾಸವನ್ನು ಕಡಿಮೆ ಖರ್ಚಿನಲ್ಲಿ ಮಾಡಲು ಮೊದಲ ಹೆಜ್ಜೆ ಅಂದ್ರೆ ಮುಂಚಿತ ಯೋಜನೆ. 2-3 ತಿಂಗಳು ಮೊದಲು ಫ್ಲೈಟ್ ಟಿಕೆಟ್ ಬುಕ್ ಮಾಡಿದರೆ ಕಡಿಮೆ ದರದಲ್ಲಿ ಸಿಗುತ್ತದೆ. ಸೀಸನ್ ಹೊರತಾಗಿ ಅಂದ್ರೆ ಆಫ್‌-ಸೀಸನ್‌ನಲ್ಲಿ ಪ್ರಯಾಣ ಮಾಡಿದರೆ ಖರ್ಚು ಇನ್ನಷ್ಟು ಕಡಿಮೆ ಆಗುತ್ತದೆ.

ಆದಷ್ಟು ಕಡಿಮೆ ಖರ್ಚಿನ ದೇಶಗಳನ್ನೇ ಆಯ್ಕೆ ಮಾಡಿ

ಎಲ್ಲ ದೇಶಗಳು ದುಬಾರಿ ಇರೋದಿಲ್ಲ. ಉದಾಹರಣೆಗೆ ಥಾಯ್ಲೆಂಡ್‌, ವಿಯೆಟ್ನಾಂ, ಇಂಡೋನೇಷಿಯಾ ಅಂತಹ ದೇಶಗಳು ಕಡಿಮೆ ಬಜೆಟ್‌ನಲ್ಲಿ ಪ್ರವಾಸ ಮಾಡಲು ಸೂಕ್ತವಾಗಿವೆ. ಈ ವಿದೇಶ ಪ್ರವಾಸಗಳು ಅದ್ಭುತ ಅನುಭವಗಳನ್ನು ಕೊಡುವುದು ನಿಶ್ಚಿತ.

ಬಜೆಟ್ ಸ್ಟೇ ಆಯ್ಕೆ ಮಾಡಿದರೆ ಉತ್ತಮ

ಹೋಟೆಲ್‌ಗಳ ಬದಲು ಹೋಮ್‌-ಸ್ಟೇ, ಟೂರಿಸ್ಟ್‌ ಹಾಸ್ಟೆಲ್ ಅಥವಾ ಬಜೆಟ್ ಹೋಟೆಲ್‌ಗಳನ್ನು ಆಯ್ಕೆ ಮಾಡಿದರೆ ಖರ್ಚು ಕಡಿಮೆ ಆಗುತ್ತದೆ. ಆನ್‌ಲೈನ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆಫರ್‌ಗಳನ್ನು ಪರಿಶೀಲಿಸಿ. ಇವುಗಳನ್ನು ಮುಂಗಡ ಕಾಯ್ದಿರಿಸಿಕೊಳ್ಳಬಹುದು.

ಸ್ಥಳೀಯ ಆಹಾರ ಸೇವಿಸಿ

ಪ್ರಮುಖ ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದಕ್ಕಿಂತ ಸ್ಥಳೀಯ ಸ್ಟ್ರೀಟ್ ಫುಡ್ ಅಥವಾ ಸಣ್ಣ ಹೋಟೆಲ್‌ಗಳಲ್ಲಿ ಊಟ ಮಾಡಿದರೆ ಖರ್ಚು ಕಡಿಮೆ ಆಗುತ್ತದೆ. ಜೊತೆಗೆ ಸ್ಥಳೀಯ ಖಾದ್ಯಗಳ ರುಚಿಯನ್ನು ಅನುಭವಿಸಬಹುದು. ಅಂದಹಾಗೆ ಥಾಯ್ಲೆಂಡ್‌, ವಿಯೆಟ್ನಾಂ, ಇಂಡೋನೇಷಿಯಾ ಅಂತಹ ದೇಶಗಲ್ಲಿ ಸ್ಟ್ರೀಟ್‌ ಫುಡ್‌ ಕೂಡ ನೀಟ್‌ ಅಂಡ್‌ ಕ್ಲೀನ್‌ ಹಾಗೂ ಟೇಸ್ಟಿಯಾಗಿಯೂ ಇರುತ್ತೆ.

ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಿರಿ

ಟ್ಯಾಕ್ಸಿ ಬದಲು ಮೆಟ್ರೋ, ಬಸ್ ಅಥವಾ ರೈಲು ಬಳಸಿದರೆ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಬಹುದು. ಬಹುತೇಕ ದೇಶಗಳಲ್ಲಿ ಟ್ರಾವೆಲ್ ಕಾರ್ಡ್ ವ್ಯವಸ್ಥೆ ಇದೆ. ಇದರ ಸದ್ಬಳಕೆ ಮಾಡಿದರೆ ನಿಮ್ಮ ಜೇಬಿನ ಹೊರೆ ಕಡಿಮೆಯಾಗುತ್ತದೆ.

ಆಫರ್‌ಗಳು ಮತ್ತು ಡಿಸ್ಕೌಂಟ್‌ಗಳನ್ನು ಬಳಸಿ

ಫ್ಲೈಟ್‌, ಹೋಟೆಲ್ ಮತ್ತು ಟೂರ್ ಪ್ಯಾಕೇಜ್‌ಗಳ ಮೇಲೆ ಸಿಗುವ ಆಫರ್‌ಗಳನ್ನು ಬಳಸಿಕೊಳ್ಳಿ. ಟ್ರಾವೆಲ್ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ವಿಶೇಷ ಡೀಲ್‌ಗಳು ಲಭ್ಯವಿರುತ್ತವೆ.

ಲಗೇಜ್ ಕಡಿಮೆ ಇಡಿ

ಅತಿಯಾಗಿ ಲಗೇಜ್ ತೆಗೆದುಕೊಂಡರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಗತ್ಯವಿರುವ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿ. ಅಂದಹಾಗೆ ಥಾಯ್ಲೆಂಡ್‌, ವಿಯೆಟ್ನಾಂ, ಇಂಡೋನೇಷಿಯಾ ಅಂತಹ ದೇಶಗಳು ಶಾಪಿಂಗ್‌ಗೆ ಹೆಸರುವಾಸಿ. ಇಲ್ಲಿಂದ ಕಡಿಮೆ ಬಟ್ಟೆಗಳನ್ನು ಕೊಂಡೊಯ್ದರೆ ಅಲ್ಲಿಂದ ಹೊಸ ಬಟ್ಟೆಗಳನ್ನು ಯಾವುದೇ ಓವರ್‌ ವೇಟ್‌ ಚಾರ್ಜಸ್‌ ಇಲ್ಲದೆ ಮನೆಗೆ ತರಬಹುದು.

ಟ್ರಾವೆಲ್ ಇನ್ಶುರನ್ಸ್ ತೆಗೆದುಕೊಳ್ಳಿ

ಅಪ್ರತೀಕ್ಷಿತ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ಟ್ರಾವೆಲ್ ಇನ್ಶುರನ್ಸ್ ಉಪಯುಕ್ತ. ಇದು ಭವಿಷ್ಯದ ದೊಡ್ಡ ಖರ್ಚನ್ನು ತಪ್ಪಿಸುತ್ತದೆ. ಯಾವುದಕ್ಕೂ ಮುಂಜಾಗ್ರತೆ ಮುಖ್ಯ ಅಲ್ಲವೆ?

ಸರಿಯಾದ ಟೂರ್ ಪ್ಯಾಕೇಜ್ ಆಯ್ಕೆ ಮಾಡಿ

ವಿಶ್ವಾಸಾರ್ಹ ಟ್ರಾವೆಲ್ ಸಂಸ್ಥೆಗಳ ಮೂಲಕ ಪ್ಯಾಕೇಜ್ ಬುಕ್ ಮಾಡಿದರೆ ಟ್ರಾನ್ಸ್‌ಪೋರ್ಟ್‌, ಹೋಟೆಲ್ ಮತ್ತು ಸ್ಥಳೀಯ ಟೂರ್ ಆಲ್‌ ಇನ್‌ ಒನೆಎ ಕಡಿಮೆ ದರದಲ್ಲಿ ಸಿಗುತ್ತದೆ.

ಒಟ್ಟಾರೆ ಕಡಿಮೆ ಬಜೆಟ್‌ನಲ್ಲಿ ವಿದೇಶ ಪ್ರವಾಸ ಮಾಡುವುದು ಅಸಾಧ್ಯವೇನಲ್ಲ. ಸರಿಯಾದ ಯೋಜನೆ, ಖರ್ಚಿನ ನಿಯಂತ್ರಣ ಮತ್ತು ಸ್ಮಾರ್ಟ್ ಆಯ್ಕೆಗಳು ಮಾಡಿದರೆ ಕಡಿಮೆ ಹಣದಲ್ಲಿ ಉತ್ತಮ ಅನುಭವ ಪಡೆಯಬಹುದು. ನಿಮ್ಮ ಕನಸಿನ ವಿದೇಶ ಪ್ರವಾಸವನ್ನು ಈಗಲೇ ಯೋಜಿಸಿ, ಹೊಸ ದೇಶಗಳನ್ನು ಅನ್ವೇಷಿಸಿ!

ನೀವು ಕೂಡ ಬಜೆಟ್‌ ಫ್ರೆಂಡ್ಲಿ ಫಾರಿನ್‌ ಟ್ರಿಪ್‌ ಪ್ಲಾನ್‌ ಮಾಡ್ತಿದ್ರೆ, ಈಗಲೇ ಸಂಪರ್ಕಿಸಿ ಸಂಪರ್ಕಿಸಿ, ಅಡಿಗಾಸ್‌ ಯಾತ್ರಾ ಮೊಬೈಲ್-‌ 93641 04366/ 70222 59007/ 70222 59008. ವೆಬ್‌ ಸೈಟ್‌ https://www.adigasyatra.com

Related posts

ವಿದೇಶ ಪ್ರವಾಸದ ವೇಳೆ ಟ್ರಾವೆಲ್ ಇನ್ಶೂರೆನ್ಸ್ ಏಕೆ ಮುಖ್ಯ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

Adigas Yatra

2026ರ ಟ್ರೆಂಡಿಂಗ್ ವಿದೇಶ ಪ್ರವಾಸಿ ತಾಣಗಳು: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ

Adigas Yatra

Adigas Yatra: ಸಿಂಗಾಪುರ ಪ್ರವಾಸಕ್ಕೆ ಹೋಗುವವರು ತಿಳಿದುಕೊಳ್ಳಬೇಕಾದ 10 ಮುಖ್ಯ ವಿಷಯಗಳು!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page