ಟ್ರಾವೆಲ್ ಟಿಪ್ಸ್

2026ರ ಟ್ರೆಂಡಿಂಗ್ ವಿದೇಶ ಪ್ರವಾಸಿ ತಾಣಗಳು: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ

ಬೆಂಗಳೂರು: 2026ರಲ್ಲಿ ವಿದೇಶ ಪ್ರವಾಸ ಮಾಡಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಈ ವರ್ಷದ ಟ್ರೆಂಡಿಂಗ್ ಡೆಸ್ಟಿನೇಷನ್‌ಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಪ್ರಕೃತಿ ಸೌಂದರ್ಯ, ನೈಟ್‌ ಲೈಫ್‌, ಸಂಸ್ಕೃತಿ ಮತ್ತು ಕಡಿಮೆ ಬಜೆಟ್ ಹಾಗೂ ಆಲ್‌ ಇನ್‌ ಒನ್‌ ಅನುಭವ ನೀಡುವ ಕೆಲವು ದೇಶಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.

ಥಾಯ್ಲೆಂಡ್‌

ನೈಟ್‌ ಲೈಫ್‌, ಬೀಚ್‌ಗಳು ಮತ್ತು ಬಜೆಟ್ ಫ್ರೆಂಡ್ಲಿ ಟೂರ್‌ಗಾಗಿ ಥಾಯ್ಲೆಂಡ್‌ 2026ರಲ್ಲಿ ಕೂಡ ಟ್ರೆಂಡಿಂಗ್‌ನಲ್ಲಿದೆ. ಬ್ಯಾಂಕಾಕ್‌, ಪಟ್ಟಾಯ ಮತ್ತು ಫುಕೇಟ್‌ ಪ್ರಮುಖ ಆಕರ್ಷಣೆ ಆಗಿದೆ.

ಮಾಲ್ಡೀವ್ಸ್‌

ಭಾರತೀಯರಿಗೆ ಹನಿಮೂನ್ ಮತ್ತು ಲಕ್ಸುರಿ ಪ್ರವಾಸಕ್ಕೆ ಮಾಲ್ಡೀವ್ಸ್‌ ಅತ್ಯುತ್ತಮ ಆಯ್ಕೆ. ನೀಲಿ ಸಮುದ್ರ ಮತ್ತು ವಾಟರ್ ವಿಲ್ಲಾಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ಸಿಂಗಾಪುರ

ಕ್ಲೀನ್ ಸಿಟಿ, ಥೀಮ್ ಪಾರ್ಕ್‌ಗಳು ಮತ್ತು ಶಾಪಿಂಗ್‌ಗೆ ಪ್ರಸಿದ್ಧ. ಯುನಿವರ್ಸಲ್ ಸ್ಟುಡಿಯೋಸ್‌, ಮೆರ್ಲಿಯನ್ ಪಾರ್ಕ್‌ ಪ್ರಮುಖ ತಾಣಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಲೇ ಇವೆ.

ದುಬೈ

ಲಕ್ಸುರಿ, ಡೆಸರ್ಟ್ ಸಫಾರಿ ಮತ್ತು ಬುರ್ಜ್ ಖಲೀಫಾ ವೀಕ್ಷಣೆಗೆ ದುಬೈ ಅತ್ಯಂತ ಜನಪ್ರಿಯ ತಾಣವಾಗಿದೆ. ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರು ದುಬೈ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ವಿಯೇಟ್ನಾಂ

ಕಡಿಮೆ ಬಜೆಟ್‌ನಲ್ಲಿ ಸುಂದರ ಪ್ರವಾಸ ಮಾಡಲು ವಿಯೆಟ್ನಾಂ ಸೂಕ್ತ. ಹಾಲೋಂಗ್ ಬೇ ಮತ್ತು ಹನೋಯ್ ಇಲ್ಲಿನ ಪ್ರಮುಖ ತಾಣಗಳು.

ಸ್ವಿಟ್ಜರ್‌ಲೆಂಡ್‌

ಪ್ರಕೃತಿ ಸೌಂದರ್ಯ, ಹಿಮಪರ್ವತಗಳು ಮತ್ತು ರೊಮ್ಯಾಂಟಿಕ್ ವಾತಾವರಣಕ್ಕಾಗಿ ಸ್ವಿಟ್ಜರ್‌ಲೆಂಡ್‌ ಪ್ರಸಿದ್ಧ. ಇದು ಹಲವು ಪ್ರವಾಸಿಗರ ಕನಸಿನ ತಾಣ ಕೂಡ ಆಗಿದೆ.

ಇಂಡೋನೇಷ್ಯಾ

ಇಂಡೋನೇಷ್ಯಾದ ಬಾಲಿ ದ್ವೀಪ, ದೇವಸ್ಥಾನಗಳು ಮತ್ತು ಸುಂದರ ಬೀಚ್‌ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಪ್ರಮುಖವಾಗಿ ಭಾರತೋಯರು ಇಲ್ಲಿಗೆ ಭೇಟಿ ನೀಡುವುದು ಹೆಚ್ಚು.

ವಿದೇಶ ಪ್ರವಾಸಕ್ಕೆ ಟ್ರಾವೆಲ್ ಟಿಪ್ಸ್‌

  • ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ
  • ವೀಸಾ ನಿಯಮಗಳನ್ನು ಪರಿಶೀಲಿಸಿ
  • ಬಜೆಟ್ ಪ್ಲ್ಯಾನ್ ಮಾಡಿ
  • ಟ್ರಾವೆಲ್ ಇನ್ಶುರನ್ಸ್ ತೆಗೆದುಕೊಳ್ಳಿ

2026ರಲ್ಲಿ ವಿದೇಶ ಪ್ರವಾಸಕ್ಕೆ ಈ ದೇಶಗಳು ಅತ್ಯಂತ ಟ್ರೆಂಡಿಂಗ್ ಆಗಿದ್ದು, ಪ್ರತಿ ದೇಶವೂ ವಿಭಿನ್ನ ಅನುಭವ ನೀಡುತ್ತದೆ. ನಿಮ್ಮ ಬಜೆಟ್ ಮತ್ತು ಆಸಕ್ತಿಗೆ ಅನುಗುಣವಾಗಿ ಸರಿಯಾದ ತಾಣವನ್ನು ಆಯ್ಕೆ ಮಾಡಿ ಮೆರೆಯಲಾಗದಂತಹ ಟ್ರಿಪ್ ಪ್ಲ್ಯಾನ್ ಮಾಡಿ.

ವಿದೇಶ ಪ್ರವಾದ ಬಜೆಟ್‌ ಪ್ಯಾಕೇಜ್‌ಗಳ ಬಗ್ಗೆ ತಿಳಿಯಲು ಈಗಲೇ ಸಂಪರ್ಕಿಸಿ ಸಂಪರ್ಕಿಸಿ, ಅಡಿಗಾಸ್‌ ಯಾತ್ರಾ ಮೊಬೈಲ್-‌ 93641 04366/ 70222 59007/ 70222 59008. ವೆಬ್‌ ಸೈಟ್‌ https://www.adigasyatra.com

Related posts

ಮಲೇಷ್ಯಾ ಪ್ರವಾಸದಲ್ಲಿ ನೋಡಲೇಬೇಕಾದ ಟಾಪ್ 10 ಸ್ಥಳಗಳು

Adigas Yatra

ಥಾಯ್ಲೆಂಡ್‌ ವೀಸಾ ನಿಯಮದಲ್ಲಿ ಬದಲಾವಣೆ: ನಿಮ್ಮ ಮುಂದಿನ ಟ್ರಿಪ್‌ ಪ್ಲಾನ್‌ ಹೀಗಿರಲಿ!

Adigas Yatra

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರೇ ಈ 9 ಸಂಗತಿ ತಿಳಿದಿರಿ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page