ಅಡಿಗಾಸ್ ಯಾತ್ರಾಭಾರತ ಪ್ರವಾಸ

ವಿದೇಶ ಸುತ್ತಲು ಸಾಧ್ಯವಾಗದಿದ್ರೆ ಸ್ವದೇಶ ನೋಡಿ: ಪ್ರವಾಸಿಗರಿಗೆ ಸೂಪರ್ ಆಫರ್‌ ಕೊಟ್ಟ ನಾಗರಾಜ್‌ ಅಡಿಗ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ದೇಶದ ನಾಗರೀಕರಲ್ಲಿ ದೇಶದ ಹಿತಕ್ಕಾಗಿ ಕೆಲ ಮನವಿಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾದದ್ದು, ಮುಂದಿನ ಒಂದು ವರ್ಷ ಯಾವುದೇ ವಿದೇಶ ಪ್ರವಾಸ ಮಾಡಬೇಡಿ ಎಂದಿರುವುದು. ಇದು ಪ್ರವಾಸೋದ್ಯಮದ ಮೇಲೆ ಭಾರಿ ಹೊಡೆತ ನೀಡಿದೆ ಎನ್ನಲಾಗುತ್ತಿದೆ.

ಇದು ವಿದೇಶ ಪ್ರವಾಸ ಮಾಡಲು ಬಯಸುವವರಿಗೆ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದೆ. ಜೊತೆಗೆ ಟ್ರಾವೆಲ್‌ ಬಿಸಿನೆಸ್‌ ನೆಚ್ಚಿಕೊಂಡಿರುವ ಉದ್ಯಮಿಗಳಿಗೂ ದೊಡ್ಡ ಸಮಸ್ಯೆ ತಂದೊಡ್ಡಿದೆ.

ಈ ಕುರಿತು ಅಡಿಗಾಸ್‌ ಯಾತ್ರಾ ಸಂಸ್ಥೆಯ ಮುಖ್ಯಸ್ಥರು ಮತ್ತು ಪ್ರವಾಸೋದ್ಯಮ ವಲಯದ ತಜ್ಞರು ಆಗಿರುವ ನಾಗರಾಜ್‌ ಅಡಿಗ ಅವರು ಮಾತನಾಡಿ, “ಈಗ ವಿದೇಶ ಪ್ರವಾಸ ಮಾಡಬಹುದಾ? ಅನ್ನೋದು ಹಲವರ ಪ್ರಶ್ನೆ. ಅಂದಹಾಗೆ ಕಳೆದ ನಾಲ್ಕು ತಿಂಗಳಿಂದಲೇ ವಿದೇಶ ಪ್ರವಾಸ ಮಂಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳುವ ಮುಂಚೆಯೇ ಭಾರತದಲ್ಲಿ ಪ್ರವಾಸೋದ್ಯಮ ಮಂಕಾಗಿದೆ,” ಎಂದಿದ್ದಾರೆ.

“ಮಧ್ಯ ಪ್ರಾಚ್ಯದಲ್ಲಿನ ಯುದ್ಧದ ವಾತಾವರಣ ಪ್ರಮುಖ ವಿಮಾನ ಮಾರ್ಗಗಳಿಗೆ ಅಡಚಣೆ ತಂದೊಡ್ಡಿದೆ. ಎತಿಹಾದ್‌ ಮತ್ತು ಎಮಿರೇಟ್ಸ್‌ ತನ್ನ ಹಲವು ಬುಕಿಂಗ್‌ಗಳನ್ನು ರದ್ದು ಮಾಡಿರುವ ಕಾರಣ ವಿದೇಶ ಪ್ರಯಾಣ ಭಾರತದಲ್ಲೀಗ ಮಂಕಾಗಿದೆ. ಇದು ಅಚಾನಕ್ಕಾಗಿ ಬಂದಿರುವ ಸಮಸ್ಯೆಯೇನಲ್ಲ,” ಎಂದು ನಾಗರಾಜ್‌ ಅಡಿಗ ಅವರು ಹೇಳಿದ್ದಾರೆ.

ದೇಶಕ್ಕಾಗಿ ಕರೆ ನೀಡಿದ್ದಾರೆ, ಅದಕ್ಕೆ ಗೌರವಿಸಬೇಕು

ಪ್ರಧಾನ ಮಂತ್ರಿಗಳು ನೀಡುವ ಕರೆಗೆ ನಾವೆಲ್ಲಾ ಗೌರವಿಸಬೇಕು. ದೇಶದ ಹಿತಕ್ಕಾಗಿ ಅವರು ಹೇಳಿರುವುದು. ಪ್ರವಾಸೋದ್ಯಮ ಮುಖ್ಯ ಆದರೆ ಅದಕ್ಕಿಂತಲೂ ದೇಶ ಮುಖ್ಯ. ನಮ್ಮ ದೇಶದ ಭದ್ರತೆ ಮತ್ತು ಆರ್ಥಿಕತೆ ಬಹಳಾ ಪ್ರಮುಖ ಸಂಗತಿ. ಆ ನಿಟ್ಟಿನಲ್ಲಿ ಮೋದಿ ಅವರಿಗೆ ಬೆಂಬಲ ನೀಡಬೇಕು.

“ನಮ್ಮ ಪ್ರಧಾನಿಗಳು ಈ ಮೊದಲೇ ‘ವೋಕಲ್‌ ಫಾರ್‌ ಲೋಕಲ್‌’ ಅನ್ನೋ ಕರೆ ನೀಡಿದ್ದಾರೆ. ದೇಶದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಎಂದು ಪ್ರಚಾರ ಮಾಡಿದ್ದಾರೆ. ‘ಅಪ್ನಾ ದೇಶ್‌ ದೇಖೋ’ ಎಂದೆಲ್ಲಾ ಪ್ರವಾಸಿಗರನ್ನು ಪ್ರೇರೇಪಿಸಿದ್ದಾರೆ. ಹಿಂದೆಲ್ಲಾ ಪರೋಕ್ಷವಾಗಿ ವಿದೇಶ ಪ್ರವಾಸ ಬೇಡ ಅಂದಿದ್ರು, ಈಗ ನೇರವಾಗಿ ತಿಳಿಸಿದ್ದಾರೆ ಅಷ್ಟೆ,” ಎಂದು ನಾಗರಾಜ್‌ ಅಡಿಗ ಹೇಳಿದ್ದಾರೆ.

ಮೊದಲು ನಮ್ಮ ದೇಶವನ್ನು ನೋಡಿ

“ಹಿತ್ತಲ ಗಿಡ ಮದ್ದಲ್ಲ ಅನ್ನೋದು ನಮ್ಮವರ ಮನೋಭಾವ. ಏಕಂದ್ರೆ ನಮ್ಮ ದೇಶದಲ್ಲೇ ಹಲವು ಅದ್ಭುತ ಸ್ಥಳಗಳಿವೆ. ಉದಾಹರಣೆಗೆ ಜೋಗದ ಜಲಪಾತ, ಅಸ್ಸಾಂನ 7 ಸಿಸ್ಟರ್ಸ್‌ ಫಾಲ್ಸ್‌ ಅಂತಹ ಬಹಳಷ್ಟು ಸುಂದರ ಜಲಪಾತಗಳಿವೆ. ಆದರೆ, ಇದೇ ಮಾದರಿಯ ಜಲಪಾತಗಳನ್ನು ನೋಡಲು ಬೇರೆ ದೇಶಗಳಿಗೆ ಹೋಗಲು ಬಯಸುತ್ತೇವೆ. ನಮ್ಮ ದೇಶದಲ್ಲೂ ಅಷ್ಟೇ ‘ವ್ಹಾವ್‌’ ಅನುಭವ ಕೊಡಬಲ್ಲ ಅನೇಕ ಸ್ಥಳಗಳಿವೆ. ಮೊದಲು ನಮ್ಮ ದೇಶ ನೋಡಿ,” ಎಂದು ಅಡಿಗರು ಕರೆ ನೀಡಿದ್ದಾರೆ.

“ಅಂದಹಾಗೆ ನಮ್ಮಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಈ ವಿಚಾರದಲ್ಲಿ ನಮ್ಮ ದೇಶ ಸಾಕಷ್ಟು ಸುಧಾರಣೆ ಆಗಬೇಲು. ನಾನು ಈ ಕುರಿತಾಗಿ ಹಲವು ಬಾರಿ ಮಾತನಾಡಿದ್ದೇನೆ ಕೂಡ. ಥಾಯ್ಲೆಂಡ್‌ ಅಂತಹ ದೇಶದಲ್ಲಿ ಶೌಚಾಲಯಗಳಿಗೆ ಪ್ರಶಸ್ತಿ ಕೊಡಲಾಗುತ್ತದೆ. ಅಲ್ಲಿ ಮೂಲಭೂತ ಸೌಕರ್ಯಗಳಿಗೆ ಅಷ್ಟು ಆದ್ಯತೆ ನೀಡುತ್ತಾರೆ. ನಮ್ಮಲ್ಲಿ ಉತ್ತಮ ಜಲಪಾತಗಳಿದ್ದರೂ, ಮೂಲಭೂತ ಸೌಕರ್ಯ ಇರಲಿ ಅಲ್ಲಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಇದರ ಹೊರತಾಗಿಯೂ ನಮ್ಮ ದೇಶದಲ್ಲಿ ನೋಡಲು ಅತಿ ಸುಂದರ ತಾಣಗಳಿವೆ, ಸವಲತ್ತುಗಳು ಬೇಕಷ್ಟೆ,” ಎಂದಿದ್ದಾರೆ.

ದುಬೈನಲ್ಲಿ ಇರೋದು ನಮ್ಮ ದೇಶದಲ್ಲೇ ಇದೆ

“ಈಗೆಲ್ಲಾ ದುಬೈಗೆ ಹೋಗಿ ಅಲ್ಲಿ ಡೆಸರ್ಟ್‌ ಸಫಾರಿ ಮಾಡ್ತಾರೆ. ನಮ್ಮಲ್ಲಿ ಅದಕ್ಕಿಂತಲೂ ಉತ್ತಮ ಸ್ಥಳಗಳಿವೆ. ರಾಜಸ್ಥಾನಕ್ಕೆ ಹೋದರೆ ಡೆಸರ್ಟ್‌ ನೋಡೋದಲ್ಲ ಅಲ್ಲಿ ಕ್ಯಾಮೆಲ್‌ ರೈಡ್‌ ಮಾಡಬಹುದು. ಡೆಸರ್ಟ್‌ ಆಕ್ಟಿವಿಟೀಸ್‌ ಜೊತೆಗೆ ಕೋಟೆಗಳು ಮತ್ತು ಅಲ್ಲಿನ ಸಂಸ್ಕೃತಿ ಹಾಗೂ ಇತಿಹಾಸವನ್ನು ನೋಡುವ ಅವಕಾಶ ಸಿಗುತ್ತದೆ,” ಎಂದು ದೇಶೀಯ ಪ್ರವಾಸಕ್ಕೆ ಒತ್ತು ಕೊಡಲು ಇರುವ ಕಾರಣಗಳನ್ನು ನಾಗರಾಜ್‌ ಅಡಿಗರು ವಿವರಿಸಿದ್ದಾರೆ.

ನಮ್ಮದು ದೈವ ಭೂಮಿ

“ನಮ್ಮ ಇತಿಹಾಸ ಗಮನಿಸಿದರೆ ರಾಮಾಯಣ ಮಹಾಭಾರತದವರೆಗೆ ತಿಳಿಯಲು ನಮ್ಮಲ್ಲಿ ಸ್ಥಳಗಳಿವೆ. ವಿದೇಶಿ ತಾಣಗಳಿಗೆ ಈ ಮಟ್ಟದ ಇತಿಹಾಸವಿಲ್ಲ. ಭಗವತ್ಗೀತೆ ಬೋಧಿಸಿದ ಸ್ಥಳವನ್ನು ಶಂಕರಾಚಾರ್ಯರು ಗುರುತಿಸಿಕೊಟ್ಟಿದ್ದಾರೆ. ಚಾರ್‌ಧಾಮ್‌ ಯಾತ್ರಾದಲ್ಲಿ ದೈವಿಕ ಅನುಭವ ಪಡೆಯಬಹುದು. ಹಿಮಾಲಯದ ಹಿಮಾವೃತ ಪರ್ವತಗಳು, ಪವಿತ್ರ ನದಿಗಳು, ಇದು ದೇವ ಭೂಮಿ ಇಲ್ಲಿ ಅದ್ಭುತ ದೇವಾಲಯಗಳನ್ನು ಕಾಣಬಹುದು. ಸ್ವಚ್ಛತೆ ವಿಚಾರದಲ್ಲಿ ಮಾತ್ರ ವಿದೇಶಗಳು ಮುಂದು. ಆದರೆ, ಪ್ರಾಕೃತಿಕ ಸಂದರ್ಯ ಮತ್ತು ದೈವಿಕ ನೆಲೆಯಾಗಿ ಆಕರ್ಷಿಸುವುದು ನಮ್ಮ ದೇಶ ಮಾತ್ರ,” ಎಂದು ಅಡಿಗರು ಹೇಳಿದ್ದಾರೆ.

ವಿವಿಧತೆ ನಮ್ಮ ದೇಶದಲ್ಲಿ ತುಂಬಿದೆ

“ನಮ್ಮ ದೇಶದಲ್ಲಿ ವರ್ಷದ 365 ದಿನಗಳೂ ಪ್ರವಾಸ ಮಾಡಲು ಯೋಗ್ಯ ಇರುವಂತಹ ಸ್ಥಳಗಳಿವೆ. ಅಮರ್ನಾಥ ಯಾತ್ರವನ್ನು ಜೂನ್‌-ಜುಲೈನಲ್ಲಿ ಮಾಡಬೇಕು. ಕೇರಳದಲ್ಲಿ ಬೋಟ್‌ ಹೌಸ್ ಅನುಭವ ಪಡೆಯಬಹುದು. ಮಳೆಗಾಲದಲ್ಲಿ ಜೋಗ ನೋಡಬಹುದು. ಮಳೆ ನೋಡಲೆಂದೇ ಗೋವಾಗೆ ಹೋಗುವವರು ಇದ್ದಾರೆ. ಆಯಾ ಸೀಸನ್‌ಗೆ ಎಲ್ಲಿ ಎಲ್ಲಿ ಪ್ರವಾಸ ಮಾಡಬೇಕು ಅನ್ನೋದರ ಬಗ್ಗೆ ತಿಳುವಳಿಕೆ ಗಳಿಸಿಕೊಂಡರೆ ಸಾಕು. ನಮ್ಮ ದೇಶದಲ್ಲಿ ನೋಡಲು ಮತ್ತು ಅನುಭವಿಸಲು ಎಲ್ಲವೂ ಇದೆ,” ಎಂದಿದ್ದಾರೆ.

ಅಡಿಗಾಸ್‌ ಯಾತ್ರಾದಿಂದ ವಿಶೇಷ ಆಫರ್‌

“ಸದ್ಯದ ಪರಿಸ್ಥಿತಿಗಳಲ್ಲಿ ಎಲ್ಲೆಡೆ ಬೆಲೆ ಏರಿಕೆ ಇದೆ. ಎಲ್‌ಪಿಜಿ, ಸಿಎನ್‌ಜಿ, ಪೆಟ್ರೋಲ್‌ ಮತ್ತು ಡೀಸೆಲ್‌ ಎಲ್ಲದರ ಬೆಲೆಯೂ ಏರಿಕೆಯಾಗಿದೆ. ಗುಣಮಟ್ಟ ಕಡಿಮೆ ಮಾಡಬಾರದು ಎಂದರೆ ದರ ಏರಿಕೆ ಮಾಡಲೇ ಬೇಕಾಗುತ್ತದೆ. ಅನಿವಾರ್ಯ ಸ್ಥಿತಿಗಳಲ್ಲಿ ಬೆಲೆ ಏರಿಕೆ ಮಾಡಲೇಬೇಕು. ಹಿಂದಿನ ಬೆಲೆ ಇಟ್ಟು ಗುಣಮಟ್ಟ ಕಡಿಮೆ ಮಾಡಲು ನಾವು ಸಿದ್ಧರಿಲ್ಲ. ಗುಣಮಟ್ಟವೇ ನಮ್ಮ ಗುರುತು,” ಎಂದು ನಾಗರಾಜ್ ಅಡಿಗ ಹೇಳಿದ್ದಾರೆ.

“ತೈಲದ ದರ 3-4 ಪರ್ಸೆಂಟ್‌ ಹೆಚ್ಚಿರುವ ಕಾರಣ ಇದರ ಪ್ರಭಾವದಿಂದ ಬೇರೆ ಎಲ್ಲದರ ದರ ಏರಿಕೆ ಆಗುತ್ತಿದೆ. ಆದರೂ, ಮೇ 30ರ ಒಳಗೆ ದೇಶ ಮತ್ತು ವಿದೇಶ ಪ್ರವಾಸಗಳ ಯಾವುದೇ ಪ್ಯಾಕೇಜ್‌ ಬುಕ್‌ ಮಾಡಿಕೊಂಡರೂ ನಮ್ಮ ಸಂಸ್ಥೆ ಈಗಿನ ದರದಲ್ಲೇ ಪ್ಯಾಕೇಜ್‌ ನೀಡಲಿದ್ದೇವೆ. ಜೂನ್ 1ರಿಂದ ಈ ದರ ಬದಲಾಗಲಿದೆ. ಹೀಗಾಗಿ ಮೇ 30ರ ಒಳಗೆ ಬುಕ್‌ ಮಾಡಿದರೆ ಪ್ರಸಕ್ತ ದರವನ್ನೇ ಪರಿಗಣಿಸಲಿದ್ದೇವೆ. ಈಗ ಬುಕ್‌ ಮಾಡಿ ಮುಂದೆ ಈ ವರ್ಷ ಯಾವಾಗ ಬೇಕಾದರೂ ಪ್ರವಾಸ ಮಾಡಬಹುದು. ಜೂನ್ 1ರ ಬಳಿಕ ದರ ಅನಿವಾರ್ಯವಾಗಿ ಏರಿಕೆ ಆಗಲಿದೆ,” ಎಂದು ವಿಶೇಷ ಆಫರ್‌ ನೀಡಿದ್ದಾರೆ.

Related posts

ಅಮರನಾಥ – ವೈಷ್ಣೋದೇವಿ ಯಾತ್ರೆಗೆ ಅಡಿಗಾಸ್‌ ಯಾತ್ರಾದ ವಿಶೇಷ 8 ದಿನಗಳ ಪ್ಯಾಕೇಜ್‌!

Adigas Yatra

ಅಯೋಧ್ಯಾ – ಕಾಶಿ – ಗಯಾ ಯಾತ್ರೆಗೆ ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

Karnataka Budget 2026: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದಕ್ಕೆ ಅಡಿಗಾಸ್‌ ಯಾತ್ರಾ ಸ್ವಾಗತ

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page