ಅಡಿಗಾಸ್ ಯಾತ್ರಾ

‘ಅಡಿಗಾಸ್‌ ಯಾತ್ರಾ’ ಕರ್ನಾಟಕದ ಹೆಮ್ಮೆ: ಟ್ರಾವೆಲ್‌ ಆಪರೇಟರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮೆಚ್ಚುಗೆ

ಬೆಂಗಳೂರು: ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ದೇಶ-ವಿದೇಶಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಅದ್ಭುತ ಸೇವೆಯನ್ನು ಅಡಿಗಾಸ್‌ ಯಾತ್ರಾ ನೀಡಿರುವುದು ವಿಶೇಷ. ಕರಾವಳಿ ಮೂಲದ ಉದ್ಯಮಿ ನಾಗರಾಜ್‌ ಅಡಿಗ ಅವರು ಈ ಮೂಲಕ ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿದ್ದಾರೆ. ಅಡಿಗಾಸ್‌ ಯಾತ್ರಾ ಕರ್ನಾಟಕದ ಹೆಮ್ಮೆಯ ಟ್ರಾವೆಲ್‌ ಸಂಸ್ಥೆಯಾಗಿದೆ ಎಂದು‌ ಕರ್ನಾಟಕ ಟ್ರಾವೆಲ್‌ ಆಪರೇಟರ್ಸ್ ಅಸೋಸಿಯೇಶನ್‌ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಹೊಳ್ಳ ಅವರು ಹೇಳಿದರು.

ಕೇಂದ್ರ ಸರಕಾರವು ಅಡಿಗಾಸ್‌ ಯಾತ್ರಾಗೆ ಉತ್ತಮ ಸೇವಾ ಪೂರೈಕೆದಾರ ಎಂಬ ಮಾನ್ಯತೆ ನೀಡಿದೆ. ಅದರಂತೆಯೇ ಉತ್ತಮ ಸೇವೆ ನೀಡುವ ಮೂಲಕ ಆ ಹಿರಿಮೆಯನ್ನು ಅಡಿಗಾಸ್‌ ಯಾತ್ರಾ ಉಳಿಸಿಕೊಂಡಿರುವುದು ಗಮನಾರ್ಹ. ದೇಶೀಯ ಟೂರಿಸಂನಲ್ಲಿ ಅಡಿಗಾಸ್‌ ಅತ್ಯಂತ ಗುಣಮಟ್ಟ ಸೇವೆ ನೀಡಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ದೇಶದಲ್ಲಿ ಟೂರಿಸಂ ಕೈಗೆಟಕುವ ದರದಲ್ಲಿ ಜನ ಸಾಮಾನ್ಯರಿಗೆ ಸಿಗುವಂತಾಗಬೇಕು. ಇವತ್ತು ಥಾಯ್ಲೆಂಡ್‌, ಇಂಡೊನೇಷ್ಯಾಗೆ ಕಡಿಮೆ ದರದಲ್ಲಿ ಹೋಗಿ ಬರಬಹುದು. ಆದರೆ ನಮ್ಮದೇ ಸ್ಥಳೀಯ ತಾಣಗಳಿಗೆ ಅದಕ್ಕಿಂತ ಹೆಚ್ಚು ದುಬಾರಿಯಾಗುತ್ತದೆ. ಆದ್ದರಿಂದ ದೇಶೀಯ ಟೂರಿಸಂ ಅಗ್ಗವಾಗಬೇಕು ಎಂದರು.

ಅಡಿಗಾಸ್‌ ಯಾತ್ರಾ ಟ್ರಾವೆಲ್ ಸಂಸ್ಥೆಯ 32ನೇ ವಾರ್ಷಿಕೋತ್ಸವ, ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾವಿರಾರು ಪ್ರವಾಸಿಗರು ಬಂದಿರುವುದು ವಿಶೇಷ. ಇದು ಅಡಿಗಾಸ್‌ ಯಾತ್ರಾ ಸಂಸ್ಥೆಯ ಬಗ್ಗೆ ಪ್ರವಾಸಿಗರ ವಿಶೇಷ ಅಭಿಮಾನ ಇರುವುದಕ್ಕೆ ಸಾಕ್ಷಿಯಾಗಿದೆ ಎಂದು ರಾಧಾಕೃಷ್ಣ ಹೊಳ್ಳ ಅವರು ತಿಳಿಸಿದರು.

ರಾಜ್ಯ ಸರಕಾರ ಇತ್ತೀಚೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದೆ. ಇಂಡಿಯಾ ಟೂರಿಸಂನಿಂದ ಬೆಂಬಲ ಸಿಗುತ್ತಿದೆ. ಇವುಗಳ ಸದ್ಬಳಕೆ ಆಗಬೇಕಿದೆ ಎಂದು ರಾಧಾಕೃಷ್ಣ ಹೊಳ್ಳ ಅವರು ವಿವರಿಸಿದರು.

Related posts

Hiring: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ!

Adigas Yatra

ಅಡಿಗಾಸ್‌ ಯಾತ್ರಾದಿಂದ ಆಸ್ಟ್ರೇಲಿಯಾ ಪ್ರವಾಸದ ಸೂಪರ್‌ ಪ್ಯಾಕೇಜ್!‌

Adigas Yatra

ವಿದೇಶ ಸುತ್ತಲು ಸಾಧ್ಯವಾಗದಿದ್ರೆ ಸ್ವದೇಶ ನೋಡಿ: ಪ್ರವಾಸಿಗರಿಗೆ ಸೂಪರ್ ಆಫರ್‌ ಕೊಟ್ಟ ನಾಗರಾಜ್‌ ಅಡಿಗ

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page