ಅಡಿಗಾಸ್ ಯಾತ್ರಾ

ಅಡಿಗಾಸ್‌ ಯಾತ್ರಾ ಅದ್ಧೂರಿ 32ನೇ ವಾರ್ಷಿಕೋತ್ಸವ; ಕಿಕ್ಕಿರಿದ ಪ್ರವಾಸಿಗರು

ಬೆಂಗಳೂರು: ಪ್ರವಾಸೋದ್ಯಮ ವಲಯದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯ 32ನೇ ಅದ್ಧೂರಿ ವಾರ್ಷಿಕೋತ್ಸವ, ನೂತನ ಲಾಂಛನ ಅನಾವರಣ, ಅಡಿಗಾಸ್‌ ಯಾತ್ರಾ ನ್ಯೂಸ್‌ ವೆಬ್‌ಸೈಟ್‌ ಮತ್ತು ನೂತನ ಯೂಟ್ಯೂಬ್‌ ಚಾನೆಲ್‌ ಬಿಡುಗಡೆ ಕಾರ್ಯಕ್ರಮ (Adigas Yatra’s 32nd Anniversary) ಭಾನುವಾರ ಸಂಭ್ರಮದಿಂದ ನಡೆಯಿತು.

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಮೈಸೂರು ಬ್ಯಾಂಕ್‌ ಸಮೀಪ ಎಫ್‌ಕೆಸಿಸಿಐ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಕಿಕ್ಕಿರಿದು ನೆರೆದಿದ್ದರು. ಸಭಾಂಗಣದ ಒಳಗೆ ಜಾಗ ಸಾಲದಿದ್ದುದರಿಂದ ಹೊರಾಂಗಣದಲ್ಲೂ ಜನ ನಿಂತು ಗಣ್ಯರ ಭಾಷಣಗಳನ್ನು ಆಲಿಸಿದರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ, ಹರಿಹರದ ಹರಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ, ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಾಣಿ ಮತ್ತು ಪ್ರವಾಸಿ ಪ್ರಪಂಚದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌, ಖ್ಯಾತ ಅಭಿನೇತ್ರಿ ಅದಿತಿ ಪ್ರಭುದೇವ, ಕರ್ನಾಟಕ ರಾಜ್ಯ ಟ್ರಾವೆಲ್‌ ಆಪರೇಟರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ಭಾಗವಹಿಸಿದ್ದರು. ಅಡಿಗಾಸ್‌ ಯಾತ್ರಾದ ಸಂಸ್ಥಾಪಕ ಕೆ.ನಾಗರಾಜ ಅಡಿಗ ಹಾಗೂ ನಿರ್ದೇಶಕಿ ಆಶಾ ಎನ್.‌ ಅಡಿಗ ಅವರು ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಸಂಗೀತ, ಮನರಂಜನೆಯ ಕಾರ್ಯಕ್ರಮಗಳು ನಡೆಯಿತು.

ಅದೃಷ್ಟಶಾಲಿ ಪ್ರವಾಸಿಗರಿಗೆ ವಿದೇಶ ಪ್ರವಾಸ:

ಸಮಾರಂಭಕ್ಕೆ ಆಗಮಿಸಿದ್ದ ಪ್ರವಾಸಿಗರಲ್ಲಿ ಮೂವರು ಅದೃಷ್ಟಶಾಲಿ ಪ್ರವಾಸಿಗರನ್ನು ಲಕ್ಕಿಡಿಪ್‌ ಮೂಲಕ ಆಯ್ಕೆ ಮಾಡಲಾಯಿತು. ಮೊದಲ ಬಹುಮಾನವಾಗಿ ಜೋರ್ಡಾನ್‌ ಪ್ರವಾಸ, ಎರಡನೆಯದಾಗಿ ಮಲೇಷ್ಯಾ ಪ್ರವಾಸ ಮತ್ತು ಮೂರನೇ ಬಹುಮಾನವಾಗಿ ರಾಜಸ್ಥಾನ ಪ್ರವಾಸವನ್ನು ಘೋಷಿಸಲಾಯಿತು.

ಕಳೆದ 31 ವರ್ಷಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರಿಗೆ ದೇಶ-ವಿದೇಶಗಳ ಪ್ರವಾಸಿ ತಾಣಗಳಿಗೆ ಆರಾಮದಾಯಕ, ಸುವ್ಯವಸ್ಥಿತ ಪ್ರವಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಅಡಿಗಾಸ್‌ ಯಾತ್ರಾಗೆ ಈಗ 32ನೇ ವರ್ಷದ ಸಂಭ್ರಮ. ಕಾರ್ಯಕ್ರಮದಲ್ಲಿ ಅಡಿಗಾಸ್‌ ಯಾತ್ರಾದ ಸ್ಥಾಪಕ ನಾಗರಾಜ್‌ ಅಡಿಗ ಅವರು ಗಣ್ಯರನ್ನು ಸ್ವಾಗತಿಸಿದರು. ಸಿಇಒ ಆಶಾ ನಾಗರಾಜ್ ಅಡಿಗ ಅವರು ವಂದಿಸಿದರು.

ಅಡಿಗಾಸ್‌ ಯಾತ್ರಾದ ಪ್ರವಾಸ ಕಾರ್ಯಕ್ರಮಗಳಿಗೆ ಸಂಪರ್ಕಿಸಿ: Contact: 9449478944 / 7022259008 / 080-26616678

ಅಡಿಗಾಸ್‌ ಯಾತ್ರಾ ವಾರ್ಷಿಕೋತ್ಸವದ ಸಂಭ್ರಮದ ಕ್ಷಣಗಳು

Related posts

ಅಡಿಗಾಸ್‌ ಯಾತ್ರಾದಿಂದ ಬಂಪರ್‌ ಕೊಡುಗೆ, ಪ್ರವಾಸಿಗರಿಗೆ ಭಾರಿ ಡಿಸ್ಕೌಂಟ್‌ ಆಫರ್!

Adigas Yatra

ADIGAS YATRA: ಗುಜರಾತ್‌ನ “ರೋಡ್‌ ಆಫ್‌ ಹೆವೆನ್ಸ್‌ʼ ನೀವೂ ವೀಕ್ಷಿಸಿ! ರಣ್‌ ಆಫ್‌ ಕಛ್‌ ಪ್ರವಾಸಕ್ಕೆ ಕೆಲವೇ ಸೀಟ್‌ ಲಭ್ಯ!

Adigas Yatra

Hiring: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page