ರಾಜ್ಯದ ಟೂರಿಸಂ ವಲಯದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ ಮೂಲಕ ನೀವು ದೇಶ-ವಿದೇಶಗಳಿಗೆ ಭೇಟಿ ಮಾಡಿ ಎಂಜಾಯ್ ಮಾಡಿರಬಹುದು. ಆದರೆ ಅದರ ಹಿನ್ನೆಲೆ, ವಿಶೇಷತೆ, ಪ್ರವಾಸಿಗರಿಗೆ ಅಡಿಗಾಸ್ ಯಾತ್ರಾದಲ್ಲಿ ಮಾತ್ರ ಸಿಗುವ ವಿಶೇಷವಾದ ಆತಿಥ್ಯ, ಸೇವೆಗಳು, ಟೂರ್ ಪ್ಯಾಕೇಜ್‌ಗಳ ಬಗ್ಗೆ ಗೊತ್ತಿದ್ಯಾ? ಅವೆಲ್ಲವನ್ನೂ ಈಗ ಸಂಪೂರ್ಣವಾಗಿ ತಿಳಿಯೋಣ.
ಇದುವರೆಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ಕನ್ನಡಿಗರು ಅಡಿಗಾಸ್ ಯಾತ್ರಾ ಮೂಲಕ ದೇಶ-ವಿದೇಶಗಳನ್ನು ಸಂದರ್ಶಿಸಿ ಸಂತೃಪ್ತಿಯಿಂದ ಮೆಚ್ಚುಗೆ ವ್ಯಕ್ತಪಡಿಸಿರುವುದು ಸಂಸ್ಥೆಯ ಅದ್ಭುತ ಸಾಧನೆಯಾಗಿದೆ. 138 ತಾಣಗಳು, 513 ಟೂರ್‌ಗಳು, 7 ಮಾದರಿಯ ಟೂರ್ ವಿಧಗಳು ಅಡಿಗಾಸ್ ಯಾತ್ರಾದ ಯಶಸ್ವಿ ಮೈಲುಗಲ್ಲುಗಳಾಗಿವೆ. ಸ್ವತಃ ಸಂಸ್ಥೆಯ ಮಾಲೀಕರಾದ ನಾಗರಾಜ್ ಅಡಿಗರು ಅಪ್ಪಟ ಪ್ರವಾಸಿಗರಾಗಿರುವುದರಿಂದ ಮೂರು ದಶಕಗಳಲ್ಲಿ ಇವೆಲ್ಲವುಗಳೂ ಸಾಧ್ಯವಾಗಿದೆ.
ವಿಶ್ವ ಪ್ರವಾಸ ಬಾಲ್ಯದ ಕನಸು
ಕುಂದಾಪುರದ ಕೋಟೇಶ್ವರ ಬಳಿಯ ಕಟ್ಕೇರೆ ಮೂಲದ ನಾಗರಾಜ್ ಅಡಿಗ ಅವರು ಕಿರಿಯ ವಯಸ್ಸಿನಲ್ಲಿಯೇ ದೇಶ-ವಿದೇಶಗಳನ್ನು ವೀಕ್ಷಿಸಬೇಕು ಎಂದು ನಿರ್ಧಾರ ಕೈಗೊಂಡಿದ್ದರು. ಅದಕ್ಕೊಂದು ವಿಶೇಷ ಹಿನ್ನೆಲೆಯೂ ಇತ್ತು. ಈ ದೇಶದ ಇತಿಹಾಸವನ್ನು ಅವರು ಓದಿಕೊಂಡಿದ್ದರು. ವೀರ ಸಾವರ್ಕರ್ ಅಂಡಮಾನಿಗೆ ಹೋಗಿದ್ದು, ಸ್ವಾಮಿ ವಿವೇಕಾನಂದರು ಅಮೆರಿಕದ ಶಿಕಾಗೊ ನಗರಕ್ಕೆ ತೆರಳಿದ್ದು, ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮೊದಲಾದ ಸ್ವಾತಂತ್ರ್ಯ ವೀರರ ಭವ್ಯ ಚರಿತ್ರೆಯಿಂದ ಪ್ರಭಾವಿತರಾಗಿದ್ದ ನಾಗರಾಜ್ ಅಡಿಗರು, ಸ್ವತಃ ಟ್ರಾವೆಲ್ ಮಾಡುವುದರ ಜತೆಗೆ ಇದನ್ನೇ ತಮ್ಮ ಉದ್ಯಮ ಮತ್ತು ವ್ಯವಹಾರವನ್ನಾಗಿಸಿಕೊಳ್ಳಬೇಕು ಎಂದು ಸಂಕಲ್ಪಿಸಿದರು. ಇದರ ಫಲಶ್ರುತಿಯೇ ಇಂದು ನಾಡಿನ ಮನೆಮಾತಾಗಿರುವ ಅಡಿಗಾಸ್ ಯಾತ್ರಾ ಟ್ರಾವೆಲ್ ಸಂಸ್ಥೆ.

ರೂಪುಗೊಂಡಿದೆ ಹೊಸ ಲಾಂಛನ
ಇದೀಗ ಅಡಿಗಾಸ್ ಹೊಸ ಲಾಂಛನ ರೂಪಿಸಿದೆ. ಪ್ರವಾಸೋದ್ಯಮ ಕುರಿತ ವಿಶೇಷ ನ್ಯೂಸ್ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್ ಸಹಿತ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು ಪ್ರವಾಸಿಗರ ಮನಸೂರೆಗೊಳ್ಳಲು ಸಜ್ಜಾಗಿವೆ.
32 ವರ್ಷಗಳ ಸಮೃದ್ಧ ಅನುಭವದ ಜತೆಗೆ, ಕೇಂದ್ರ ಸರಕಾರದಿಂದ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ‘ಅತ್ಯಂತ ಅನುಭವಿ ಸೇವಾ ಪೂರೈಕೆದಾರ’ ಎಂಬ ಮಾನ್ಯತೆಯನ್ನು ಪಡೆದಿರುವುದು ಅಡಿಗಾಸ್ ಯಾತ್ರಾದ ವಿಶೇಷತೆಯಾಗಿದೆ. ಪ್ರವಾಸಿಗರಿಗೆ ಪ್ರವಾಸದ ಸಂದರ್ಭದಲ್ಲಿ ಅತ್ಯಂತ ಗುಣಮಟ್ಟದ ಆಹಾರ-ವಸತಿ-ಸಾರಿಗೆ, ಗೈಡ್, ಸ್ಥಳ ಪರಿಚಯದ ಸೇವೆಯನ್ನು ಒದಗಿಸುವ ಮೂಲಕ ಪ್ರವಾಸವನ್ನು ರಮಣೀಯಗೊಳಿಸುವುದು ಅಡಿಗಾಸ್ ಯಾತ್ರಾದ ವೈಶಿಷ್ಟ್ಯ. ಈಗ ಕಾರ್ಯನಿರ್ವಹಣಾಧಿಕಾರಿ ಹಾಗೂ ನಿರ್ದೇಶಕರಾಗಿ ಕಂಪನಿಯನ್ನು ಆಶಾ ನಾಗರಾಜ ಅಡಿಗ ಅವರು ನಿರ್ವಹಿಸುತ್ತಿದ್ದಾರೆ.
ಅಡಿಗಾಸ್ ಯಾತ್ರಾ ಎಲ್ಲರಿಗೂ ಇಷ್ಟ ಯಾಕೆ?
ಯುರೋಪ್-ಸಿಂಗಾಪುರ, ಮಲೇಷ್ಯಾ ಮೊದಲಾದ ವಿದೇಶಿ ಪ್ರವಾಸಗಳಿಗೆ ಅಡಿಗಾಸ್ ಯಾತ್ರಾವನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕು? ಎಂಬ ಪ್ರಶ್ನೆಗೆ ಪ್ರಮುಖ 10 ಉತ್ತರಗಳನ್ನು ನೋಡೋಣ.
- ಹಿರಿಯ ನಾಗರಿಕರನ್ನೂ ಗಮನದಲ್ಲಿಟ್ಟುಕೊಂಡು ತಯಾರಿಸುವ ವೇಳಾಪಟ್ಟಿ.
- 32 ವರ್ಷಗಳ ಸಮಗ್ರ ಅನುಭವ.
- ಯಾವುದೇ ಧಾವಂತ ಇಲ್ಲದ ಟೂರ್ ಪ್ರೋಗ್ರಾಮ್.
- ಐಷಾರಾಮಿ 4 ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ
- ಸುಖಾಸೀನ ಬಸ್‌ಗಳಲ್ಲಿ ಪ್ರಯಾಣ
- ಮೊದಲೇ ಎಲ್ಲ ಎಂಟ್ರಿ ಟಿಕೆಟ್‌ಗಳು ರಿಸರ್ವ್ ಆಗುವುದರಿಂದ ಪ್ರವಾಸಿ ತಾಣಗಳಲ್ಲಿ, ರೆಸ್ಟೊರೆಂಟ್‌ಗಳಲ್ಲಿ ಸರದಿ ನಿಲ್ಲುವ ಅಗತ್ಯವೂ ಇರುವುದಿಲ್ಲ.
- ಕನ್ನಡ ಬಲ್ಲ ಅನುಭವಿ ಟೂರ್ ಮ್ಯಾನೇಜರ್ ಜತೆಯಲ್ಲಿ ಇರುತ್ತಾರೆ.
- ನೋಡಲೇಬೇಕಾದ ಪ್ರವಾಸೀ ತಾಣಗಳು, ಪ್ರಸಿದ್ಧ ತಾಣಗಳ ಮಾಹಿತಿ.
- ವೀಸಾ, ವಿಮೆ, ಪ್ರವೇಶ ಶುಲ್ಕ, ಡ್ರೈವರ್, ಗೈಡ್ ಟಿಪ್ಸ್, ಪ್ರಯಾಣ ವಿಮೆ ಎಲ್ಲವೂ ಒಳಗೊಂಡಿರುವ ವಿಶೇಷ ರಿಯಾಯಿತಿ ದರ.
- ಕನ್ನಡಿಗರಿಂದ ಕನ್ನಡಿಗರಿಗೆ ಕಟ್ಟಿರುವ ಟ್ರಾವೆಲ್ ಸಂಸ್ಥೆ. ಕನ್ನಡಿಗರೇ ಸಹ ಪ್ರಯಾಣಿಕರಾಗಿರುವುದರಿಂದ ಭಾಷೆ, ಸಂಸ್ಕೃತಿ, ಆಹಾರಗಳಲ್ಲಿ ಸಾಮ್ಯತೆ ಇರುವುದರಿಂದ ಪ್ರವಾಸ ಸ್ಮರಣೀಯವಾಗಿರುತ್ತದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ.

ವೈವಿಧ್ಯಮಯ ಟೂರ್ ಪ್ಯಾಕೇಜ್!
ಈಗ ಅಡಿಗಾಸ್ ಯಾತ್ರಾದ ಟೂರ್ ಪ್ಯಾಕೇಜ್‌ಗಳ ಸಂಕ್ಷಿಪ್ತ ವಿವರಗಳನ್ನು ನೋಡೋಣ. ಭಾರತದ ದೇಶೀಯ ಪ್ರವಾಸದಲ್ಲಿ ಕರ್ನಾಟಕ, ಅಂಡಮಾನ್, ರಾಜಸ್ಥಾನ, ಒಡಿಶಾ, ಉತ್ತರಪ್ರದೇಶ, ಮೇಘಾಲಯ, ಮಧ್ಯಪ್ರದೇಶ, ಕೇರಳ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್, ದಿಲ್ಲಿ, ಸಿಕ್ಕಿಂ, ಡಾರ್ಜಿಲಿಂಗ್, ಗುಜರಾತ್, ಗೋವಾ, ಅಸ್ಸಾಂ-ಮೇಘಾಲಯ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್, ಮಣಿಪುರ, ತಮಿಳುನಾಡು, ತೆಲಂಗಾಣ, ತ್ರಿಪುರ, ಜಾರ್ಖಂಡ್, ಪಶ್ಚಿಮ ಬಂಗಾಳಕ್ಕೆ ಅಡಿಗಾಸ್ ಯಾತ್ರಾ ಪ್ರವಾಸ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಭಾರತದಲ್ಲಿ ಧಾರ್ಮಿಕ ಮಹತ್ವದ ಪವಿತ್ರ ತೀರ್ಥಕ್ಷೇತ್ರಗಳಿಗೆ ಪ್ರಯಾಣ ಮುಖ್ಯವಾಗಿದೆ. ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆಯ ಶ್ರೀರಾಮ ದೇವಸ್ಥಾನದ ದರ್ಶನವನ್ನೂ ಅಡಿಗಾಸ್ ಯಾತ್ರಾ ಮೂಲಕ ಪಡೆಯಬಹುದು.
ಕಾಶಿ-ಗಯಾ-ಪ್ರಯಾಗದ ತೀರ್ಥಯಾತ್ರೆಯನ್ನು ಅನೇಕ ಮಂದಿ ಮಾಡುತ್ತಾರೆ. ಈ ಪುಣ್ಯ ಕ್ಷೇತ್ರಗಳಲ್ಲಿ ಪಿತೃ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಕ್ರಮಬದ್ಧವಾಗಿ ಮಾಡಲು ಬಯಸುವವರಿಗೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು. ಕನ್ನಡದ ಪುರೋಹಿತರನ್ನೂ ಒದಗಿಸಲಾಗುವುದು.
ಉತ್ತರಾಖಂಡ್‌ನ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಲು ಬಯಸುವವರಿಗೂ ಅಡಿಗಾಸ್ ಯಾತ್ರಾ ಪ್ರವಾಸವನ್ನು ಹಮ್ಮಿಕೊಂಡಿದೆ. ನುರಿತ ಅಡುಗೆ ಸಿಬ್ಬಂದಿ ಕೂಡ ಜತೆಗೆ ಇರುವುದರಿಂದ ಊಟೋಪಚಾರಗಳಲ್ಲಿ ಕೂಡ ಅನುಕೂಲಕರವಾಗಿರುತ್ತದೆ.

ಅಂತಾರಾಷ್ಟ್ರೀಯ ಪ್ರವಾಸ ಪ್ಯಾಕೇಜ್
ಅಂತಾರಾಷ್ಟ್ರೀಯ ಪ್ರವಾಸ ಕಾರ್ಯಕ್ರಮಗಳೂ ವೈವಿಧ್ಯಮಯವಾಗಿರುತ್ತವೆ. ನೆರೆಹೊರೆಯ ಭೂತಾನ್, ಶ್ರೀಲಂಕಾ, ನೇಪಾಳ ದೇಶಗಳಿಂದ ಆರಂಭಿಸಿ, ಇಂಡೊನೇಷ್ಯಾ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಸಿಂಗಾಪುರ, ದುಬೈ, ಆಸ್ಟ್ರೇಲಿಯಾ, ಈಜಿಪ್ಟ್, ಯುರೋಪ್ ಮೊದಲಾದ ವಿದೇಶಿ ತಾಣಗಳಿಗೆ ಅಡಿಗಾಸ್ ಯಾತ್ರಾ ತನ್ನ ಟೂರ್ ಪ್ಯಾಕೇಜ್‌ಗಳನ್ನು ಹಮ್ಮಿಕೊಳ್ಳುತ್ತದೆ.
ನೀವು ಕೂಡ ಕುಟುಂಬದವರೊಡನೆ, ಬಂಧುಗಳು, ಸ್ನೇಹಿತರೊಡನೆ ದೇಶ-ವಿದೇಶಗಳ ಪ್ರವಾಸವನ್ನು ಚೆನ್ನಾಗಿ ಎಂಜಾಯ್ ಮಾಡಲು, ವೈವಿಧ್ಯಮಯ ಅನುಭವವನ್ನು ಪಡೆಯಲು ಅಡಿಗಾಸ್ ಯಾತ್ರಾದ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ: 7022259008
ಅಡಿಗಾಸ್ ಯಾತ್ರಾ ವೆಬ್ ಸೈಟ್ ಐಡಿ: www.adigasyatra.com
