ಬೆಂಗಳೂರು: ಪ್ರಪಂಚದ ಅತ್ಯಂತ ಸುಂದರ ದೇಶಗಳ ಪಟ್ಟಿಯಲ್ಲಿ ಸದಾ ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುವ ದೇಶವೇ New Zealand. ಹಸಿರು ಪರ್ವತಗಳು, ಹಿಮ ಮುಚ್ಚಿದ ಶಿಖರಗಳು, ನೀಲಿ ಸರೋವರಗಳು, ಸಾಹಸ ಕ್ರೀಡೆಗಳು, ಸ್ವಚ್ಛ ನಗರಗಳು ಮತ್ತು ಮನಮೋಹಕ ಪ್ರಕೃತಿ ಸೌಂದರ್ಯ, ಇವೆಲ್ಲವೂ ಸೇರಿ ನ್ಯೂಜಿಲೆಂಡ್ ಅನ್ನು ಪ್ರವಾಸಿಗರ ಕನಸಿನ ತಾಣವನ್ನಾಗಿ ಮಾಡಿವೆ.
ಪ್ರಕೃತಿ ಪ್ರಿಯರು, ಸಾಹಸ ಪ್ರವಾಸಿಗರು, ಹನಿಮೂನ್ ಜೋಡಿಗಳು ಅಥವಾ ಕುಟುಂಬ ಸಮೇತರಾಗಿ ಶಾಂತ ವಾತಾವರಣದಲ್ಲಿ ಸಮಯ ಕಳೆಯಲು ಬಯಸುವವರು — ಎಲ್ಲರಿಗೂ ನ್ಯೂಜಿಲೆಂಡ್ ಅತ್ಯುತ್ತಮ ಆಯ್ಕೆ.
ನ್ಯೂಜಿಲೆಂಡ್ ಏಕೆ ವಿಶೇಷ?
ನ್ಯೂಜಿಲೆಂಡ್ ದೇಶವು ಎರಡು ಪ್ರಮುಖ ದ್ವೀಪಗಳನ್ನು ಹೊಂದಿದೆ, ನಾರ್ತ್ ಐಲೆಂಡ್ ಮತ್ತು ಸೌತ್ ಐಲೆಂಡ್. ಈ ಎರಡೂ ದ್ವೀಪಗಳಲ್ಲಿ ಪ್ರಕೃತಿಯ ವೈವಿಧ್ಯತೆ ತುಂಬಿಕೊಂಡಿದೆ.
ಒಂದೆಡೆ ಹಿಮಪರ್ವತಗಳು, ಮತ್ತೊಂದೆಡೆ ಸಮುದ್ರ ತೀರಗಳು, ಒಂದು ಕಡೆ ಹಸಿರು ಕಾಡುಗಳು, ಇನ್ನೊಂದು ಕಡೆ ಅಗ್ನಿಪರ್ವತ ಪ್ರದೇಶಗಳು — ಒಂದೇ ದೇಶದಲ್ಲಿ ಇಷ್ಟೊಂದು ವೈವಿಧ್ಯತೆಯನ್ನು ಕಾಣುವುದು ಅಪರೂಪ.

ಕಣ್ಣಿಗೆ ಹಬ್ಬವಾಗುವ ಪ್ರಕೃತಿ ಸೌಂದರ್ಯ
ನ್ಯೂಜಿಲೆಂಡ್‌ನ ಪ್ರತಿಯೊಂದು ಸ್ಥಳವೂ ಪೋಸ್ಟ್‌ಕಾರ್ಡ್ ಮಾದರಿಯ ದೃಶ್ಯಗಳನ್ನು ನೀಡುತ್ತದೆ.
ಭೇಟಿ ಕೊಡಲೇಬೇಕಾದ ಪ್ರಮುಖ ಸ್ಥಳಗಳು:
Queenstown – ಸಾಹಸ ಕ್ರೀಡೆಗಳ ರಾಜಧಾನಿ
Auckland – ಆಧುನಿಕ ನಗರ ಮತ್ತು ಸಮುದ್ರ ತೀರದ ಸೌಂದರ್ಯ
Milford Sound – ಜಗತ್ತಿನ ಅತ್ಯಂತ ಸುಂದರ ಫಿಯೋರ್ಡ್‌ಗಳಲ್ಲಿ ಒಂದು
Rotorua – ಗೀಸರ್‌ಗಳು ಮತ್ತು ಜಿಯೋಥರ್ಮಲ್ ಅದ್ಭುತಗಳು
Mount Cook – ನ್ಯೂಜಿಲೆಂಡ್‌ನ ಅತಿ ಎತ್ತರದ ಪರ್ವತ

ಸಾಹಸ ಪ್ರವಾಸಿಗರ ಸ್ವರ್ಗ
ಸಾಹಸ ಕ್ರೀಡೆಗಳನ್ನು ಇಷ್ಟಪಡುವವರಿಗೆ ನ್ಯೂಜಿಲೆಂಡ್ ಒಂದು ಪ್ಯಾರಡೈಸ್ ಎಂದೇ ಹೇಳಬಹುದು.
ಇಲ್ಲಿ ನೀವು:
- Bungy Jumping
- Sky Diving
- Jet Boating
- Glacier Hiking
- River Rafting
- Helicopter Rides
ಹೀಗೆ ಅನೇಕ ಅಡ್ವೆಂಚರ್ ಚಟುವಟಿಕೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಕ್ವೀನ್ಸ್ ಟೌನ್ ನಗರವನ್ನು ‘ಅಡ್ವೆಂಚರ್ ಕ್ಯಾಪಿಟಲ್ ಆಫ್ ಸಿ ವರ್ಲ್ಡ್’ ಎಂದು ಕರೆಯಲಾಗುತ್ತದೆ.
ಹನಿಮೂನ್ ಮತ್ತು ಫ್ಯಾಮಿಲಿ ಟ್ರಿಪ್‌ಗೆ ಬೆಸ್ಟ್
ನಿಶ್ಶಬ್ದ ಪ್ರಕೃತಿ, ಐಶಾರಾಮಿ ವಸತಿ, ರೊಮಾಂಟಿಕ್ ಲೇಕ್ ವ್ಯೂ ಮತ್ತು ನೆಮ್ಮದಿಯ ವಾತಾವರಣ ನ್ಯೂಜಿಲೆಂಡ್‌ನ್ನು ಹನಿಮೂನ್ ಜೋಡಿಗಳ ಫೇವರಿಟ್ ತಾಣವನ್ನಾಗಿ ಮಾಡಿವೆ.
ಕುಟುಂಬ ಸಮೇತ ಹೋಗುವವರಿಗೂ ಇದು ಸುರಕ್ಷಿತ ಮತ್ತು ಸುಂದರ ದೇಶ. ಸ್ವಚ್ಛತೆ, ಉತ್ತಮ ರಸ್ತೆ ವ್ಯವಸ್ಥೆ ಮತ್ತು ಸ್ನೇಹಪ್ರಿಯ ಸ್ಥಳೀಯರಿಂದ ಪ್ರವಾಸವನ್ನು ಇನ್ನಷ್ಟು ಸುಖಕರವಾಗಿಸುತ್ತವೆ.

ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳ ನೆಚ್ಚಿನ ತಾಣ
ನ್ಯೂಜಿಲೆಂಡ್ ದೇಶದ ಪ್ರಕೃತಿ ಸೌಂದರ್ಯವೇ ಅನೇಕ ಸಿನಿಮಾಗಳ ಶೂಟಿಂಗ್ ತಾಣವೂ ಹೌದು. ವಿಶೇಷವಾಗಿ ಹಲವಾರು ಆಸ್ಕರ್ ಗೆದ್ದ ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾದ ಹಲವಾರು ದೃಶ್ಯಗಳು ಇಲ್ಲಿ ಚಿತ್ರೀಕರಿಸಲಾಗಿದೆ. ಹೀಗಾಗಿ ಸಿನಿಮಾ ಪ್ರಿಯರು ಕೂಡ ನ್ಯೂಜಿಲೆಂಡ್‌ಗೆ ಭೇಟಿ ನೀಡಲು ಆಸಕ್ತಿ ತೋರುತ್ತಾರೆ.
ಭಾರತೀಯ ಪ್ರವಾಸಿಗರಿಗೆ ಸೂಕ್ತ ಸಮಯ ಯಾವುದು?
ನವೆಂಬರ್‌ನಿಂದ ಏಪ್ರಿಲ್ ತನಕದ ಸಮಯ ನ್ಯೂಜಿಲೆಂಡ್‌ಗೆ ಭೇಟಿ ನೀಡಲು ಅತ್ಯುತ್ತಮ. ಈ ಅವಧಿಯಲ್ಲಿ ಹವಾಮಾನ ಸುಂದರವಾಗಿದ್ದು ಸೈಟ್‌ಸೀಯಿಂಗ್ ಮತ್ತು ಸಾಹಸೀ ಚಟುವಟಿಕೆ ಮಾಡಲು ಸೂಕ್ತವಾಗಿರುತ್ತದೆ. ಹಿಮಪರ್ವತ ಮತ್ತು ಹಿಮದಲ್ಲಿನ ಆಟಗಳನ್ನು ಅನುಭವಿಸಬೇಕೆಂದರೆ ಜೂನ್‌ನಿಂದ ಆಗಸ್ಟ್ ಕಾಲ ಉತ್ತಮ ಆಯ್ಕೆ.

ನ್ಯೂಜಿಲೆಂಡ್ ಪ್ರವಾಸದ ಪ್ರಮುಖ ಆಕರ್ಷಣೆಗಳು
- ವಿಶ್ವದ ಅತ್ಯಂತ ಸ್ವಚ್ಛ ದೇಶಗಳಲ್ಲಿ ಒಂದು
- ಪ್ರಕೃತಿ ಮತ್ತು ಸಾಹಸದ ಅದ್ಭುತ ಸಂಯೋಜನೆ
- ಫ್ಯಾಮಿಲಿ, ಕಪಲ್ ಮತ್ತು ಒಂಟಿಗರಿಗೂ ಸೂಕ್ತ
- ಅತ್ಯುತ್ತಮ ರೋಡ್ ಟ್ರಿಪ್ ಅನುಭವ
- ಇನ್‌ಸ್ಟಾಗ್ರಾಮ್‌ಗೆ ಹೇಳಿ ಮಾಡಿಸಿದ ತಾಣ
ಪ್ರಕೃತಿಯ ಮಡಿಲಿನಲ್ಲಿ ಕೆಲ ದಿನಗಳನ್ನು ಕಳೆಯಬೇಕು, ನಗರ ಜೀವನದ ಗದ್ದಲದಿಂದ ದೂರವಾಗಬೇಕು, ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕಲೆಹಾಕಬೇಕು ಅನ್ನೋವರಿಗಂತೂ ನ್ಯೂಜಿಲೆಂಡ್ ಪ್ರವಾಸ ಒಂದು ಕನಸಿನ ಅನುಭವವಾಗಬಹುದು.
ಅಡಿಗಾಸ್ ಯಾತ್ರಾ ಪ್ಯಾಕೇಜ್ ಪ್ರವಾಸ
ನೀವು ಕೂಡ ನ್ಯೂಜಿಲೆಂಡ್ ಪ್ಯಾಕೇಜ್ ಪ್ರವಾಸ ಏನಾದ್ರು ಹುಡುಕ್ತಾ ಇದ್ರೆ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಬಹುದು. ಇಲ್ಲಿ ನಿಮ್ಮ ಆದ್ಯತೆಗೆ ತಕ್ಕಂತಹ ಪ್ಯಾಕೇಜ್ ಮತ್ತು ಕಸ್ಟಮ್ ಟ್ರಿಪ್ ಪ್ಲಾನ್‌ಗಳು ಲಭ್ಯವಿದೆ.
ಸಂಪರ್ಕ:
📞 7022259008 /9449478944 / 080-26616678
🌐 Website: www.adigasyatra.com
ಅಡಿಗಾಸ್ ಯಾತ್ರಾ – ನಿಮ್ಮ ಪ್ರಯಾಣದ ನಂಬಿಕೆಯ ಸಂಗಾತಿ. ✈️🌍
