ಪ್ರಪಂಚ ಸುತ್ತಾಟ

ಅಡಿಗಾಸ್‌ ಯಾತ್ರಾದಿಂದ ಸಿಂಗಾಪುರ-ಮಲೇಷ್ಯಾ-ಥಾಯ್ಲೆಂಡ್‌ ಪ್ರವಾಸ – ಕಂಪ್ಲೀಟ್‌ ಮಾಹಿತಿ ಇಲ್ಲಿದೆ!

ಬೆಂಗಳೂರು: ನೀವು ಸಿಂಗಾಪುರ ಸಿಟಿಯ ಸೊಬಗು, ಕೇಬಲ್‌ ಕಾರ್‌ ಟೂರ್‌, ನೈಟ್‌ ಸಫಾರಿ, ಮಲೇಷ್ಯಾದ ಚಾಕೊಲೇಟ್‌, ಮುರುಗನ್‌ ದೇವಾಲಯ, ಥೀಮ್‌ ಪಾರ್ಕ್‌, ಥಾಯ್ಲೆಂಡ್‌ನ ನೈಟ್‌ ಲೈಫ್‌ ಸೊಬಗನ್ನು ಆನಂದಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲಿದೆ ಗುಡ್‌ ನ್ಯೂಸ್!

ರಾಜ್ಯದ ಪ್ರತಿಷ್ಠಿತ ಹಾಗೂ ಕೇಂದ್ರ ಸರಕಾರದಿಂದ‌ ‘ಅನುಭವಿ ಸೇವಾ ಪೂರೈಕೆದಾರ’ ಮಾನ್ಯತೆ ಗಳಿಸಿರುವ ಅಡಿಗಾಸ್‌ ಯಾತ್ರಾ ಸಂಸ್ಥೆಯು ಈ ವಿಶೇಷ ಪ್ರವಾಸ ಕಾರ್ಯಕ್ರಮವನ್ನು ನಿಮಗಾಗಿ ಆಯೋಜಿಸಿದೆ. ಮಾರ್ಚ್‌ 20 ರಿಂದ ಆರಂಭವಾಗಲಿರುವ, 12 ದಿನಗಳ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಅತ್ಯಾಕರ್ಷಕ ಅನುಭವವನ್ನು ನಿಮ್ಮದಾಗಿಸಬಹುದು. ಮಲೇಷ್ಯಾ-ಥಾಯ್ಲೆಂಡ್‌ ನಲ್ಲಿ ಭಾರತೀಯರಿಗೆ 2026ರಲ್ಲಿ ವೀಸಾ ಫ್ರೀ ಪ್ರವೇಶವನ್ನು ಕಲ್ಪಿಸಿರುವುದರಿಂದ ಪ್ರವಾಸಿಗರಿಗೆ ಅನುಕೂಲವಾಗಿದೆ ಎಂದು ಅಡಿಗಾಸ್‌ ಯಾತ್ರಾದ ಸ್ಥಾಪಕರಾದ ಕೆ. ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.

ಸಿಂಗಾಪುರ ಸ್ವಾರಸ್ಯ

ವಿಶ್ವದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಯನ್ನು ಸಿಂಗಾಪುರ ಗಳಿಸಿದೆ. ಅದರ ಸೊಬಗು, ಆಧುನಿಕತೆ, ನೈರ್ಮಲ್ಯವನ್ನು ಕಂಡೇ ಅನುಭವಿಸಬೇಕು. ಅಲ್ಲಿನ ಗಾರ್ಡನ್ಸ್‌ ಬೈ ದ ಬೇ 260 ಎಕರೆಗಳಲ್ಲಿ ಹರಡಿದ್ದು, ಕಣ್ಮನ ಸೆಳೆಯುತ್ತದೆ. ಸೂಪರ್‌ ಟ್ರೀ ಲೈಟ್‌ ಶೊ ಕೂಡ ಪ್ರಸಿದ್ಧ. ಸಿಂಗಾಪುರಕ್ಕೆ ಆ ಹೆಸರು ಬರಲು ಕಾರಣವಾದ ಮರ್ಲಯನ್‌ (ಸಿಂಹದ ತಲೆ) ಪ್ರತಿಮೆ ಇರುವ ಸ್ಥಳ, ಸಿಂಗಾಪುರ ಮೃಗಾಲಯ, ಮುದ್ದಾದ ಪಾಂಡಾ, ಪೆಂಗ್ವಿನ್‌, ರೈನ್‌ ಫಾರೆಸ್ಟ್‌, ಯುನಿವರ್ಸಲ್ ಸ್ಟುಡಿಯೊ ವೀಕ್ಷಿಸಬಹುದು. ರಾತ್ರಿಯ ವೇಳೆ ನೈಟ್‌ ಸಫಾರಿಯ ಮೋಜು ಅನುಭವಿಸಬಹುದು. ಕೇಬಲ್‌ ಕಾರ್‌ಗಳ ಮೂಲಕ ರೋಚಕ ಪಯಣ ಬೆಳೆಸಬಹುದು.

ಮಲೇಷ್ಯಾ ವಿಶೇಷ

ಮಲೇಷ್ಯಾ 13 ರಾಜ್ಯಗಳು ಮತ್ತು 3 ಫೆಡರಲ್‌ ಪ್ರಾಂತ್ಯವನ್ನು ಒಳಗೊಂಡಿರುವ ದೇಶ. ಕೌಲಾಲಂಪುರದ ಸಮೀಪ ವಿಶ್ವ ಪ್ರಸಿದ್ಧ ಮುರುಗನ್‌ ದೇವಾಲಯವಿದೆ. 272 ಮೆಟ್ಟಿಲುಗಳನ್ನು ಏರಿ ದೇವಾಲಯ ತಲುಪಬಹುದು. 140 ಅಡಿ ಎತ್ತರದ ಮುರುಗನ್‌ ದೇವರ ಭವ್ಯ ವಿಗ್ರಹ ಇಲ್ಲಿದೆ. ಮಲೇಷ್ಯಾದ ಅವಳಿ ಗೋಪುರಗಳು, ರಾಜರ ಅರಮನೆ, ಕೇಬಲ್‌ ಕಾರ್‌, ಕ್ಯಾಸಿನೊ, ಪುತ್ರಜಯ ಆಡಳಿತಾತ್ಮಕ ಕಚೇರಿ ಸಂಕೀರ್ಣಗಳ ದರ್ಶನ ಅದ್ಭುತ ಅನುಭವ ನೀಡುತ್ತದೆ. ಮಲೇಷ್ಯಾದ ಚಾಕೊಲೇಟ್‌ ವಿಶ್ವವಿಖ್ಯಾತ, ಸ್ವಾದಿಷ್ಟಕರ.

ಥಾಯ್ಲೆಂಡ್‌ ನೈಟ್‌ ಲೈಫ್

ಥಾಯ್ಲೆಂಡ್‌ನಲ್ಲಿ ನೈಟ್‌ ಲೈಫ್‌ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ರಾಜಧಾನಿ ಬ್ಯಾಂಕಾಕ್‌ನಲ್ಲಿ ಸಫಾರಿ ಪಾರ್ಕ್‌ ಮತ್ತು ಮರೀನ್‌ ಪಾರ್ಕ್‌ ವೀಕ್ಷಿಸಬಹುದು. ಗೋಲ್ಡನ್‌ ಬುದ್ಧ ದೇವಾಲಯದಲ್ಲಿ ಬುದ್ಧನ ಭವ್ಯವಾದ ಚಿನ್ನದ ಪ್ರತಿಮೆ ಅತ್ಯಾಕರ್ಷಕವಾಗಿದೆ. 5.5 ಟನ್‌ ಬಂಗಾರದಲ್ಲಿ ಈ ವಿಗ್ರಹವನ್ನು ನಿರ್ಮಿಸಿರುವುದು ವಿಶೇಷ.

ಅಡಿಗಾಸ್‌ ಯಾತ್ರಾದಲ್ಲಿ ಕನ್ನಡ ಬಲ್ಲ ಮ್ಯಾನೇಜರ್‌ ಇರುತ್ತಾರೆ. ಜತೆಗೆ ಭಾರತೀಯ ಊಟೋಪಚಾರ ವ್ಯವಸ್ಥೆ ಒದಗಿಸಲಾಗುವುದು. ಫಿಕ್ಸೆಡ್‌ ಗ್ರೂಪ್‌ ಟೂರ್‌ ಮತ್ತು ಕಸ್ಟಮೈಸ್ಡ್‌ ಟೂರ್‌ ವ್ಯವಸ್ಥೆಯನ್ನೂ ಪ್ರವಾಸಿಗರಿಗೆ ಒದಗಿಸಲಾಗುವುದು ಎಂದು ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ, ಮೊಬೈಲ್-‌ 93641 04366/ 70222 59007/ 70222 59008. ವೆಬ್‌ ಸೈಟ್‌ https://www.adigasyatra.com

Related posts

13 ದಿನಗಳ ಆಸ್ಟ್ರೇಲಿಯಾ ಪ್ರವಾಸ – ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

10 ದಿನಗಳ ಸ್ಕಾಂಡಿನೇವಿಯನ್ ಪ್ರವಾಸ – ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

ಪ್ರಕೃತಿ, ಸಂಸ್ಕೃತಿ ಮತ್ತು ಸಮುದ್ರ ತೀರಗಳ ಅದ್ಭುತ ಸಂಗಮ: ಇದು ದ್ವೀಪ ರಾಷ್ಟ್ರ ಶ್ರೀಲಂಕಾ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page