ಬೆಂಗಳೂರು: ಹಿಮಾಲಯದ ಮಡಿಲಿನಲ್ಲಿರುವ ಡಾರ್ಜಿಲಿಂಗ್ ಮತ್ತು ಸಿಕ್ಕಿಂ, ಪ್ರಕೃತಿ ಪ್ರೇಮಿಗಳಿಗೆ ಮತ್ತು ಸಾಹಸಪ್ರಿಯರಿಗೆ ಸ್ವರ್ಗದಂತಿವೆ. ಬೇಸಗೆಯಲ್ಲಿ ಹೋಗಲೇಬೇಕಾದ ಪ್ರವಾಸಿ ತಾಣಗಳಿವು. ಪಶ್ಚಿಮ ಬಂಗಾಳದ ಉತ್ತರದ ತುದಿಯಲ್ಲಿರುವ ಡಾರ್ಜಿಲಿಂಗ್ ಪಟ್ಟಣ ಮತ್ತು ಪುರಸಭೆಯಾಗಿದೆ. ಚಹಾ ತೋಟಗಳು ಮತ್ತು ಬ್ರಿಟಿಷ್ ಕಾಲದ ವಾಸ್ತುಶಿಲ್ಪಕ್ಕೆ ಹೆಸರುವಾಸಿ.
ಪೂರ್ವ ಹಿಮಾಲಯದ ತಪ್ಪಲಿನಲ್ಲಿರುವ ಮನಮೋಹಕ ಡಾರ್ಜಿಲಿಂಗ್ ಸಮುದ್ರ ಮಟ್ಟದಿಂದ 2,045 ಮೀಟರ್ ಎತ್ತರದಲ್ಲಿದೆ. ಡಾರ್ಜಿಲಿಂಗ್‌ನ ಪಶ್ಚಿಮಕ್ಕೆ ನೇಪಾಳದ ಪೂರ್ವ ಪ್ರಾಂತ್ಯ, ಪೂರ್ವಕ್ಕೆ ಭೂತಾನ್, ಉತ್ತರಕ್ಕೆ ಭಾರತದ ಸಿಕ್ಕಿಂ ಮತ್ತು ಉತ್ತರಕ್ಕೆ ಚೀನಾದ ಟಿಬೆಟ್ ಇದೆ.
ಬಾಂಗ್ಲಾದೇಶವು ದಕ್ಷಿಣ ಮತ್ತು ಆಗ್ನೇಯಕ್ಕಿದೆ. ದಕ್ಷಿಣ ಮತ್ತು ನೈಋತ್ಯದಲ್ಲಿ ಪಶ್ಚಿಮ ಬಂಗಾಳದ ಹೆಚ್ಚಿನ ಭಾಗವಿದೆ.
ವಿಶ್ವದ ಮೂರನೇ ಅತಿ ದೊಡ್ಡ ಪರ್ವತ ಕಾಂಚನಜುಂಗಾ ಡಾರ್ಜಿಲಿಂಗ್‌ನ ಉತ್ತರದಲ್ಲಿದ್ದು, ನಿರ್ಮಲವಾದ ಹಗಲಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಕಾಂಚನಜುಂಗಾ ಪರ್ವತ ಶಿಖರವು ಚಿನ್ನದ ಬಣ್ಣಕ್ಕೆ ತಿರುಗುವ ಅದ್ಭುತ ದೃಶ್ಯವನ್ನು ಇಲ್ಲಿ ನೋಡಬಹುದು.

ಇನ್ನು ವಿಶಾಲವಾದ ಚಹಾ ತೋಟಗಳಿಗೆ ಭೇಟಿ ನೀಡಿ, ಡಾರ್ಜಿಲಿಂಗ್ ಚಹಾದ ರುಚಿ ಸವಿಯಬಹುದು. ಪ್ರಕೃತಿಯ ಸುಂದರ ಮಡಿಲಿನಲ್ಲಿರುವ ಸಿಕ್ಕಿಂ, ತನ್ನ ಸ್ವಚ್ಛತೆ, ಬೌದ್ಧ ಸಂಸ್ಕೃತಿ ಮತ್ತು ಹಿಮಚ್ಛಾದಿತ ಪ್ರದೇಶಗಳಿಗೆ ಪ್ರಸಿದ್ಧವಾಗಿದೆ.
ಸಿಕ್ಕಿಂನಲ್ಲಿರುವ ತ್ಸೋಂಗೊ ಸರೋವರವು ಸಮುದ್ರ ಮಟ್ಟದಿಂದ 12,400 ಅಡಿ ಎತ್ತರದಲ್ಲಿದೆ. ಈ ಸರೋವರವು ಚಳಿಗಾಲದಲ್ಲಿ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಇದರ ಹತ್ತಿರದಲ್ಲೇ ಬಾಬಾ ಮಂದಿರವಿದೆ. ಗ್ಯಾಂಗ್ಟಾಕ್ ನಿಂದ 40 ಕಿಲೋಮೀಟರ್ ದೂರದಲ್ಲಿದೆ. ಸರೋವರದ ಮೇಲ್ಮೈ ಋತುಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ವರ್ಣಗಳಿಗೆ ಬದಲಾಗುತ್ತದೆ.

ಗ್ಯಾಂಗ್ಟಾಕ್ ನಗರವು ಸಿಕ್ಕಿಂ ರಾಜ್ಯದ ರಾಜಧಾನಿ ನಗರವಾಗಿದೆ. ಪೂರ್ವ ಹಿಮಾಲಯ ಶ್ರೇಣಿಯಲ್ಲಿದೆ. ಸಿಕ್ಕಿಂ ರಾಜ್ಯದ ಜನ ನಿಬಿಡ ನಗರ. ಸಮುದ್ರಮಟ್ಟದಿಂದ 5,410 ಅಡಿ ಎತ್ತರದಲ್ಲಿದೆ. ಸಿಕ್ಕಿಂನ ಭುಟಿಯಾಸ್, ಲೆಪ್ಚಾಸ್, ಗೋರ್ಖಾಲಿಸ್ ಸಮುದಾಯದ ಜನತೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವರ್ಷ ಪೂರ್ತಿ ಸೌಮ್ಯ ಸಮ ಶೀತೋಷ್ಣ ಹವಾಮಾನ ಇರುವ ಪ್ರದೇಶ ಇದಾಗಿದೆ. ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ.

ಅಡಿಗಾಸ್ ಯಾತ್ರಾದಿಂದ ಪ್ರವಾಸಿಗರ ಅನುಕೂಲಕ್ಕಾಗಿ ವರ್ಷಪೂರ್ತಿ ಹಿಮಾಚಲ ಪ್ರದೇಶದ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಲಕ್ಸುರಿ, ಕಸ್ಟಮೈಸ್ಡ್ ಮತ್ತು ಸಸ್ಯಾಹಾರಿ ಊಟೋಪಚಾರಗಳೊಂದಿಗೆ ಗ್ರೂಪ್ ಟೂರ್‌ಗಳನ್ನೂ ಮಾಡಬಹುದು.
