ಬೆಂಗಳೂರು: ಭಾರತ ದೇಶವು ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ವಿಭಿನ್ನವಾದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿದೆ. ಪ್ರವಾಸೋದ್ಯಮವು ಪ್ರಖ್ಯಾತ ಹೊಂದಿದ್ದು ಇಲ್ಲಿನ ಜನರು ಅಂತರಾಷ್ಟ್ರೀಯ ಪ್ರಯಾಣದ ಅನುಭವ ಪಡೆಯಲು ಮತ್ತು ಬಜೆಟ್ ಸ್ನೇಹಿ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು.
ಅಂತೆಯೇ 2025ರ ಪ್ರವಾಸೋದ್ಯಮವು ಭಾರತೀಯರ ಬದಲಾಗುತ್ತಿರುವ ಅಭಿರುಚಿಯನ್ನು ಎತ್ತಿ ಹಿಡಿದಿದ್ದು ಆಧ್ಯಾತ್ಮಿಕತೆ, ಅಂತರಾಷ್ಟ್ರೀಯ ಪ್ರಯಾಣ ಮತ್ತು ಬಜೆಟ್ ಸ್ನೇಹಿ ಕಡಲತೀರಗಳು ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಗೂಗಲ್ ಟ್ರೆಂಡ್ಸ್ ವರದಿಯಂತೆ 2025 ರಲ್ಲಿ ಭಾರತೀಯರು ಹುಡುಕಿದ ಪ್ರಮುಖ ಪ್ರಯಾಣ ತಾಣಗಳು ಇಲ್ಲಿವೆ.
ಮಹಾ ಕುಂಭಮೇಳ, ಪ್ರಯಾಗ್‌ರಾಜ್ (ಉತ್ತರ ಪ್ರದೇಶ)
ಮಹಾ ಕುಂಭಮೇಳವು 2025 ರಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಿದ ಸ್ಥಳಗಳಲ್ಲಿ ಒಂದು. ಭಾರತದ ಶ್ರೀಮಂತ ಸಂಪ್ರದಾಯ, ಕಲೆ ಮತ್ತು ಸಂಸ್ಕೃತಿಯ ಏಕತೆಯನ್ನು ಪ್ರದರ್ಶಿಸುವ ಮತ್ತು ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳ 2025ರಲ್ಲಿ ಭಾರತೀಯರ ಅತೀ ಹೆಚ್ಚು ಆಕರ್ಷಣೆಯ ಸ್ಥಳವಾಯಿತು. ಮಹಾಕುಂಭವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆ, ಇದು ಭಾರತ ಸೇರಿದಂತೆ ಇಡೀ ಜಗತ್ತನ್ನೇ ಪ್ರತಿಬಿಂಬಿಸಿದೆ.

ಫಿಲಿಪೈನ್ಸ್ (Philippines)
ಫಿಲಿಪೈನ್ಸ್ ತನ್ನ ಪ್ರಾಚೀನ ಕಡಲತೀರ, ಹವಳದ ಬಂಡೆ ಮತ್ತು ಕೈಗೆಟುಕುವ ದ್ವೀಪ ತಾಣಗಳಿಗಾಗಿ 2025 ರಲ್ಲಿ ಭಾರತೀಯ ಪ್ರಯಾಣಿಕರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇನ್ನೊಂದು ಮುಖ್ಯ ಆಕರ್ಷಣೆ ಏನಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಫಿಲಿಪೈನ್ಸ್ ಮೊದಲ ಸ್ಥಾನ ಗಳಿಸಲು ಮುಖ್ಯ ಕಾರಣ ವೀಸಾ ಮುಕ್ತ ಪ್ರವೇಶವಾಗಿದೆ. ಹಾಗಾಗಿ ಬಜೆಟ್ ಪ್ಲೆಂಡ್ಲಿಯಾಗಿ ಇಲ್ಲಿ ಪ್ರಯಾಣ ಮಾಡಲು ಉತ್ತಮ ಆಯ್ಕೆ ಆಗಿದೆ. ಫಿಲಿಪೈನ್ಸ್ ಸ್ಥಳವನ್ನು ಕೂಡ ಭಾರತೀಯರು ಅತೀ ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಜಾರ್ಜಿಯಾ (Georgia)
ರಮಣೀಯ ಭೂದೃಶ್ಯಗಳಿಂದಾಗಿ ಜಾರ್ಜಿಯಾ 2025 ರಲ್ಲಿ ಭಾರತೀಯ ಪ್ರಯಾಣಿಕರಿಗೆ ನೆಚ್ಚಿನ ತಾಣವಾಗಿ ಹೊರ ಹೊಮ್ಮಿದೆ. ಇದು ಸಾಂಸ್ಕೃತಿಕ ಮತ್ತು ಪ್ರಕೃತಿ ಪ್ರಿಯರಿಗೆ ಸೂಕ್ತವಾಗಿದ್ದು ಸುಲಭ ವೀಸಾ ಪ್ರಕ್ರಿಯೆ ಮತ್ತು ಕಡಿಮೆ ವಿಮಾನ ಪ್ರಯಾಣದ ಅವಧಿಯು ಭಾರತೀಯ ಪ್ರವಾಸಿಗರನ್ನು ಸೆಳೆದಿದೆ.
ಮಾರಿಷಸ್ (Mauritius)
ಕುಟುಂಬದೊಂದಿಗೆ ಪ್ರಯಾಣ ಕೈಗೊಳ್ಳುವವರಿಗೆ ಮಾರಿಷಸ್ ಮೊದಲ ಆಯ್ಕೆಯಾಯಾಗಿದೆ. ಇದು ತನ್ನ ಸುಂದರವಾದ ಕಡಲತೀರಗಳು, ಆವೃತ ಪ್ರದೇಶಗಳು, ಎತ್ತರದ ಪರ್ವತಗಳು, ದಟ್ಟವಾದ ಕಾಡುಗಳು, ನದಿಗಳು, ಜಲಪಾತಗಳನ್ನು ಹೊಂದಿರುವ ಅದ್ಭುತ ದೇಶವಾಗಿದೆ. ಭಾರತೀಯರಿಗೆ ಮಾರಿಷಸ್‌ಗೆ ವೀಸಾ ಮುಕ್ತ ಪ್ರವೇಶ ನೀಡಲಾಗುತ್ತದ್ದು ಕುಟುಂಬ ಸಮೇತರಾಗಿ ಹೋಗಲು ಪ್ರವಾಸಕ್ಕೆ ಯೋಗ್ಯ ಸ್ಥಳವಾಗಿದೆ.

ಕಣಿವೆ ರಾಜ್ಯ ಕಾಶ್ಮೀರ
ಕಾಶ್ಮೀರವು ಹಿಮಾಲಯ ಪರ್ವತಗಳ ತಪ್ಪಲಿನಲ್ಲಿರುವ ಒಂದು ಸುಂದರ ಭೌಗೋಳಿಕ ಪ್ರದೇಶ ವಾಗಿದ್ದು ಭಾರತೀಯರ ಅತೀ ಹೆಚ್ಚು ಹುಡುಕಾಟದ ಸ್ಥಳ ಇದು ಕೂಡ ಆಗಿದೆ. ದೇಶೀಯ ಪ್ರವಾಸೋದ್ಯಮದಲ್ಲಿ ಕಾಶ್ಮೀರ ತನ್ನ ಪ್ರಾಬಲ್ಯ ಮುಂದುವರಿಸಿದೆ. ಗುಲ್ಮಾರ್ಗ್‌ನಲ್ಲಿ ಸ್ಕೀಯಿಂಗ್ ಮತ್ತು ಶ್ರೀನಗರದ ದಾಲ್ ಲೇಕ್ ನಲ್ಲಿ ಹೌಸ್‌ಬೋಟ್ ಅನುಭವಕ್ಕಾಗಿ ಜನರು ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ.
ಫೂ ಕ್ವೋಕ್, ವಿಯೆಟ್ನಾಂ (Phu Quoc)
ಭಾರತೀಯರ ಅತ್ಯಂತ ನೆಚ್ಚಿನ ವಿದೇಶ ಪ್ರವಾಸಗಳಲ್ಲಿ ವಿಯೆಟ್ನಾಂ ಕೂಡ ಒಂದಾಗಿದೆ.. ಹ್ಯಾಲೊಂಗ್ ಬೇ, ಮೈ ಸನ್ ಅಭಯಾರಣ್ಯ, ಕು ಚಿ ಸುರಂಗಗಳು, ಫಾಂಗ್ ನ್ಹಾ ಕೆ ಬ್ಯಾಂಗ್ ರಾಷ್ಟ್ರೀಯ ಉದ್ಯಾನವನ, ಬಾನ್ ಜಿಯೋಕ್ ಜಲಪಾತ, ಸಾಪಾ ಥಾಂಗ್ ಲಾಂಗ್‌ನ ಇಂಪೀರಿಯಲ್ ಸಿಟಾಡೆಲ್ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ವೀಸಾ ಮುಕ್ತ ನಿಯಮ ಮತ್ತು ಥೈಲ್ಯಾಂಡ್‌ಗಿಂತ ಕಡಿಮೆ ದರದಲ್ಲಿ ಸಿಗುವ ಐಷಾರಾಮಿ ಸೌಲಭ್ಯಗಳು ಇಲ್ಲಿನ ಪ್ಲಸ್ ಪಾಯಿಂಟ್ ಕೂಡ ಆಗಿದೆ.

ಫುಕೆಟ್, ಥೈಲ್ಯಾಂಡ್ (Phuket)
ಥೈಲ್ಯಾಂಡ್ ಇಂದಿಗೂ ಭಾರತೀಯರ ನೆಚ್ಚಿನ ತಾಣ. ಇಲ್ಲಿನ ನೈಟ್ ಲೈಫ್, ವಾಟರ್ ಸ್ಪೋರ್ಟ್ಸ್ ಮತ್ತು ಸುಲಭ ಪ್ರವೇಶಾತಿ ಕಾರಣಕ್ಕಾಗಿ ಇದು 7ನೇ ಸ್ಥಾನದಲ್ಲಿದೆ. ಇಲ್ಲಿನ ಸಾಹಸಮ ಕ್ರೀಡೆ, ಆಹಾರ ಮತ್ತು ಮನರಂಜನೆಯ ಚಟುವಟಿಕೆಗಳು ಭಾರತೀಯರಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಶ್ವಾಸಾರ್ಹ ಆಯ್ಕೆಯಾಗಿದೆ.
ಮಾಲ್ಡೀವ್ಸ್ (Maldives)
ಮಾಲ್ಡೀವ್ಸ್ ಒಂದು ಸುಂದರವಾದ ದೇಶವಾಗಿದೆ. ಅಂದ ಹಾಗೆ ಇಲ್ಲಿ ಐಷಾರಾಮಿ ರೆಸಾರ್ಟ್‌ಗಳಲ್ಲಿ ಕಾಲ ಕಳೆಯಲು ಉತ್ತಮ ಸ್ಥಳ ಆಗಿದೆ. ಹನಿಮೂನ್ ಮತ್ತು ರೊಮ್ಯಾಂಟಿಕ್ ಪ್ರವಾಸಗಳಿಗೆ ಮಾಲ್ಡೀವ್ಸ್ ತನ್ನ ಜನಪ್ರಿಯತೆ ಉಳಿಸಿಕೊಂಡಿದ್ದು ಐಷಾರಾಮಿ ಅನುಭವಕ್ಕಾಗಿ ಜನರು ಇಲ್ಲಿಗೆ ಹೋಗಲು ಇಷ್ಟಪಟ್ಟಿದ್ದಾರೆ.

ಸೋಮನಾಥ, ಗುಜರಾತ್
ಸೋಮನಾಥ ದೇವಾಲಯವು ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ವೆರಾವಲ್‌ನ ಪ್ರಭಾಸ್ ಪಟನ್‌ನ ಕಡಲತೀರದಲ್ಲಿದೆ. ಇದು ಧಾರ್ಮಿಕ ಪ್ರವಾಸೋದ್ಯಮದ ಭಾಗವಾಗಿದ್ದು ದಿನದಿಂದ ದಿನಕ್ಕೆ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಸುಧಾರಿತ ಮೂಲಸೌಕರ್ಯ ಮತ್ತು ಆಧ್ಯಾತ್ಮಿಕ ಒಲವು ಇಲ್ಲಿನ ಹುಡುಕಾಟ ಹೆಚ್ಚಾಗಲು ಕಾರಣವಾಗಿದೆ.

ಪಾಂಡಿಚೇರಿ (Pondicherry)
ಪಾಂಡಿಚೇರಿ ಅಥವಾ ಪುದುಚೇರಿ ಗೋವಾದಂತೆ ಹೆಚ್ಚು ಜನಪ್ರಿಯವಾಗಿರುವ ಸ್ಥಳವಾಗಿದೆ.ಯೋಗ ಮತ್ತು ವಿಶ್ರಾಂತಿ ಬಯಸುವವರಿಗೆ ಇದು ನೆಚ್ಚಿನ ತಾಣ. ಇಲ್ಲಿನ ಪ್ಯಾರಡೈಸ್ ಬೀಚ್ , ಓಲ್ಡ್ ಲೈಟ್ಹಾಸ್, ಅರೋವಿಲ್ಲೆ ಇತ್ಯಾದಿ ಆಕರ್ಷಣಿಯ ಕೇಂದ್ರವಾಗಿದೆ. ಈ ಪ್ರೇಕ್ಷಣೀಯ ಸ್ಥಳವನ್ನು ಕೂಡ ಭಾರತೀಯರು ಹೆಚ್ಚು ಹುಡುಕಾಟ ನಡೆಸಿದ್ದಾರೆ.
