ಟ್ರಾವೆಲ್ ಟಿಪ್ಸ್

ಮಲೇಷ್ಯಾ ಪ್ರವಾಸದಲ್ಲಿ ನೋಡಲೇಬೇಕಾದ ಟಾಪ್ 10 ಸ್ಥಳಗಳು

ಬೆಂಗಳೂರು: ದಕ್ಷಿಣ ಪೂರ್ವ ಏಷ್ಯಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲೇಷ್ಯಾ ತನ್ನ ಪ್ರಕೃತಿ ಸೌಂದರ್ಯ, ಆಧುನಿಕ ನಗರಗಳು, ದ್ವೀಪಗಳು ಮತ್ತು ಐತಿಹಾಸಿಕ ತಾಣಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಮಲೇಷ್ಯಾ ಪ್ರವಾಸವನ್ನು ಅನುಭವಿಸಲು ಭೇಟಿ ನೀಡುತ್ತಾರೆ. ನೀವು ಮಲೇಷ್ಯಾ ಪ್ರವಾಸಕ್ಕೆ ಯೋಜನೆ ಮಾಡುತ್ತಿದ್ದರೆ, ತಪ್ಪದೇ ನೋಡಲೇಬೇಕಾದ ಟಾಪ್ 10 ಸ್ಥಳಗಳು ಇಲ್ಲಿವೆ.

ಕೌಲಾಲಂಪುರ

    ಮಲೇಷ್ಯಾದ ರಾಜಧಾನಿಯಾದ ಕೌಲಾಲಂಪುರ ಆಧುನಿಕ ಕಟ್ಟಡಗಳು ಮತ್ತು ಶಾಪಿಂಗ್ ಮೌಲ್ಸ್‌ಗಳಿಂದ ಪ್ರಸಿದ್ಧವಾಗಿದೆ. ವಿಶೇಷವಾಗಿ Petronas Twin Towers ವಿಶ್ವದ ಪ್ರಸಿದ್ಧ ಗಗನಚುಂಬಿ ಕಟ್ಟಡಗಳಲ್ಲಿ ಒಂದಾಗಿದೆ.

    ಲಾಂಗ್‌ಕವಾಯ್

      ಸುಂದರ ದ್ವೀಪಗಳು ಮತ್ತು ಬೀಚ್‌ಗಳಿಗೆ ಪ್ರಸಿದ್ಧವಾದ ಲಾಂಗ್‌ಕಾವಿ ಪ್ರವಾಸಿಗರ ಪ್ರಿಯ ತಾಣವಾಗಿದೆ. ಇಲ್ಲಿ ಕೇಬಲ್ ಕಾರ್‌ ಪ್ರಯಾಣ ಮತ್ತು ಸ್ಕೈ ಬ್ರಿಡ್ಜ್ ವೀಕ್ಷಣೆ ಅತ್ಯಂತ ಜನಪ್ರಿಯ.

      ಪೆನಾಂಗ್‌

        ಪೆನಾಂಗ್ ತನ್ನ ಐತಿಹಾಸಿಕ ನಗರ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ George Town ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿದೆ.

        ಜೆಂಟಿಂಗ್‌ ಹೈಲ್ಯಾಂಡ್ಸ್‌

          ಪರ್ವತ ಪ್ರದೇಶದಲ್ಲಿರುವ ಈ ಪ್ರವಾಸಿ ತಾಣದಲ್ಲಿ ಥೀಮ್ ಪಾರ್ಕ್‌, ಕ್ಯಾಸಿನೋ ಮತ್ತು ಕೇಬಲ್ ಕಾರ್‌ ಪ್ರಯಾಣ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ.

          ಬತು ಕೇವ್ಸ್‌

            ಕೌಲಾಲಂಪುರ ಸಮೀಪದಲ್ಲಿರುವ ಬತು ಗುಹೆಗಳು ಹಿಂದು ಧಾರ್ಮಿಕ ತಾಣವಾಗಿದ್ದು, ಇಲ್ಲಿ ಭವ್ಯವಾದ ಮುರುಗನ್ ದೇವರ ಪ್ರತಿಮೆ ಪ್ರವಾಸಿಗರ ಗಮನ ಸೆಳೆಯುತ್ತದೆ.

            ಕ್ಯಾಮೆರಾನ್‌ ಹೈಲ್ಯಾಂಡ್ಸ್‌

              ಚಹಾ ತೋಟಗಳು ಮತ್ತು ತಂಪಾದ ಹವಾಮಾನಕ್ಕೆ ಪ್ರಸಿದ್ಧವಾದ ಕ್ಯಾಮೆರನ್ ಹೈಲ್ಯಾಂಡ್ಸ್ ಪ್ರಕೃತಿ ಪ್ರಿಯರಿಗೆ ಅತ್ಯುತ್ತಮ ತಾಣವಾಗಿದೆ.

              ಮಲಕ್ಕಾ

                ಮಲಕ್ಕಾ ನಗರವು ಪೋರ್ಟುಗೀಸ್ ಮತ್ತು ಡಚ್ ಕಾಲದ ಇತಿಹಾಸವನ್ನು ಪ್ರತಿಬಿಂಬಿಸುವ ಐತಿಹಾಸಿಕ ತಾಣವಾಗಿದೆ.

                ಟಿಯೊಮನ್‌ ಐಲ್ಯಾಂಡ್ಸ್‌

                  ಸ್ವಚ್ಛ ನೀರು ಮತ್ತು ಸುಂದರ ಸಮುದ್ರ ತೀರಗಳಿಗೆ ಪ್ರಸಿದ್ಧವಾದ ಟಿಯೊಮನ್ ದ್ವೀಪ ಡೈವಿಂಗ್ ಮತ್ತು ಸ್ನಾರ್ಕಲಿಂಗ್‌ಗೆ ಸೂಕ್ತವಾಗಿದೆ.

                  ಸಭಾ

                    ಸಾಬಾ ರಾಜ್ಯವು ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಮೌಂಟ್‌ ಕಿನಬಾಲು ಪ್ರವಾಸಿಗರನ್ನು ಆಕರ್ಷಿಸುತ್ತದೆ.

                    ಸರವಾಕ್

                      ಸರವಾಕ್ ರಾಜ್ಯವು ತನ್ನ ಅರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ.

                      ಮಲೇಷ್ಯಾ ಪ್ರವಾಸವು ಪ್ರಕೃತಿ, ಸಂಸ್ಕೃತಿ ಮತ್ತು ಆಧುನಿಕತೆಯ ಅದ್ಭುತ ಸಂಯೋಜನೆಯನ್ನು ನೀಡುತ್ತದೆ. ಸರಿಯಾದ ಟೂರ್ ಪ್ಲಾನ್ ಮತ್ತು ವಿಶ್ವಾಸಾರ್ಹ ಟ್ರಾವೆಲ್ ಸಂಸ್ಥೆಯ ಸಹಾಯದಿಂದ ಈ ಪ್ರವಾಸವನ್ನು ಇನ್ನಷ್ಟು ಸುಂದರವಾಗಿ ಅನುಭವಿಸಬಹುದು.

                      ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ, ಮೊಬೈಲ್-‌ 93641 04366/ 70222 59007/ 70222 59008.

                      Related posts

                      ಅಮೆರಿಕ ಪ್ರವಾಸ: ಸಣ್ಣ ತಪ್ಪುಗಳಿಗೆ ಭಾರಿ ದಂಡ ತೆರಬೇಕಾದೀತು ತಿಳಿದಿರಲಿ!

                      Adigas Yatra

                      ವಿದೇಶ ಪ್ರವಾಸ ಮಾಡಲಿದ್ದೀರಾ? ಹೊಸ ಪಾಸ್‌ಪೋರ್ಟ್ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ!

                      Adigas Yatra

                      ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರೇ ಈ 9 ಸಂಗತಿ ತಿಳಿದಿರಿ!

                      Adigas Yatra

                      This message appears for Admin Users only:
                      Please fill the Instagram Access Token. You can get Instagram Access Token by go to this page