ಭಾರತ ಪ್ರವಾಸ

ಮದುರೈ – ರಾಮೇಶ್ವರ – ಕನ್ಯಾಕುಮಾರಿ: 4 ದಿನಗಳ ಪ್ರವಾಸಕ್ಕೆ ಪರ್ಫೆಕ್ಟ್‌ ಟೂರ್‌ ಪ್ಲಾನ್‌ ಇಲ್ಲಿದೆ

ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಾದ ಮದುರೈ, ರಾಮೇಶ್ವರ ಮತ್ತು ಕನ್ಯಾಕುಮಾರಿ ಪ್ರವಾಸವು ಆಧ್ಯಾತ್ಮಿಕತೆ ಮತ್ತು ಪ್ರಕೃತಿ ಸೌಂದರ್ಯದ ಅದ್ಭುತ ಸಂಯೋಜನೆಯಾಗಿದೆ. ಕಡಿಮೆ ದಿನಗಳಲ್ಲಿ ಈ ಮೂರೂ ತಾಣಗಳನ್ನು ಭೇಟಿ ಮಾಡಿ ಅದರ ಅನುಭವ ಪಡೆದುಕೊಳ್ಳಲು ಬೇಕಿರುವ 4 ದಿನಗಳ ಪರ್ಫೆಕ್ಟ್‌ ಟೂರ್‌ ಪ್ಲಾನ್ ಇಲ್ಲಿ ನೀಡಲಾಗಿದೆ.

ಮೊದಲ ದಿನ: ಮದುರೈ

ಈ ಪ್ರವಾಸವನ್ನು ಮದುರೈ ನಗರದಿಂದ ಪ್ರಾರಂಭಿಸಬಹುದು. ಇಲ್ಲಿ ಪ್ರಸಿದ್ಧ ಮೀನಾಕ್ಷಿ ಅಮ್ಮನವರ ದೇವಾಲಯವಿದ್ದು, ಅಮ್ಮನವರ ದರ್ಶನ ಪಡೆದು, ದೇವಾಲಯದ ಭವ್ಯ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ವಾತಾವರಣ ಪ್ರವಾಸಿಗರು ಆನಂದಿಸಬಹುದು. ಮಧ್ಯಾಹ್ನದ ನಂತರ ಮದುರೈ ನಗರದ ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡಬಹುದು. ಸಂಜೆ ಸಮಯದಲ್ಲಿ ದೇವಾಲಯದ ಆರತಿ ಕಾರ್ಯಕ್ರಮವನ್ನು ವೀಕ್ಷಿಸುವುದು ಕೂಡ ವಿಶೇಷ ಅನುಭವ ನೀಡುತ್ತದೆ.

ರಾತ್ರಿ ಮದುರೈಯಲ್ಲಿ ವಾಸ್ತವ್ಯ.

ಎರಡನೇ ದಿನ: ರಾಮೇಶ್ವರ

ಬೆಳಗ್ಗೆ ಮದುರೈಯಿಂದ ರಾಮೇಶ್ವರಕ್ಕೆ ಪ್ರಯಾಣ (ಸುಮಾರು 3-4 ಗಂಟೆ ಬೇಕು). ಮಾರ್ಗಮಧ್ಯೆ ಪ್ರಸಿದ್ಧ ಪಂಬನ್‌ ಬ್ರಿಡ್ಜ್‌ ವೀಕ್ಷಿಸಬಹುದು. ರಾಮೇಶ್ವರದಲ್ಲಿ ಪ್ರಮುಖವಾಗಿ ರಾಮನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಬಹುದು. ಇದು ಭಾರತದ ಪ್ರಮುಖ ಜ್ಯೋತಿರ್ಲಿಂಗ ತಾಣಗಳಲ್ಲಿ ಒಂದಾಗಿದೆ. ಇದಲ್ಲದೆ ಧನುಷ್ಕೋಡಿಗೂ ಭೇಟಿ ನೀಡಬಹುದು. ಸಮುದ್ರದ ಮಧ್ಯದಲ್ಲಿರುವ ಈ ಸ್ಥಳವು ವಿಶಿಷ್ಟ ಅನುಭವ ನೀಡುತ್ತದೆ.

ರಾತ್ರಿ ರಾಮೇಶ್ವರದಲ್ಲೇ ಉಳಿಯಬೇಕು.

ಮೂರನೇ ದಿನ: ಕನ್ಯಾಕುಮಾರಿ

ಮೂರನೇ ದಿನ ಬೆಳಗ್ಗೆ ಕನ್ಯಾಕುಮಾರಿಗೆ ಪ್ರಯಾಣ ಮಾಡಿ. ಇಲ್ಲಿ ಮೂರು ಸಮುದ್ರಗಳ ಸಂಗಮವಾಗಿರುವುದು ವಿಶೇಷ. ಪ್ರಮುಖವಾಗಿ ವಿವೇಕಾನಂದ ರಾಕ್‌ ಮೆಮೋರಿಯಲ್‌ ಮತ್ತು ತಿರುವಳ್ಳುವಾರ್‌ ಮೂರ್ತಿಯನ್ನು ವೀಕ್ಷಿಸಬಹುದು. ಸಂಜೆಯ ಸಮಯದಲ್ಲಿ ಕನ್ಯಾಕುಮಾರಿಯ ಅದ್ಭುತ ಸೂರ್ಯಾಸ್ತ (Sunset) ವೀಕ್ಷಿಸುವುದು ಈ ಪ್ರವಾಸದ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ.

ಪ್ರಯಾಣ ಸಲಹೆಗಳು

  • ಅಕ್ಟೋಬರ್‌ ನಿಂದ ಮಾರ್ಚ್‌ವರೆಗೆ ಪ್ರವಾಸಕ್ಕೆ ಸೂಕ್ತ ಸಮಯ.
  • ದೇವಾಲಯಗಳಿಗೆ ಭೇಟಿ ನೀಡುವಾಗ ಸರಳ ಉಡುಪು ಧರಿಸಿ.
  • ಟ್ರಾವೆಲ್ ಪ್ಲಾನ್ ಮುಂಚಿತವಾಗಿ ಬುಕ್ ಮಾಡಿಕೊಳ್ಳಿ.
  • ಕುಟುಂಬದೊಂದಿಗೆ ಪ್ರಯಾಣಕ್ಕೆ ಸೂಕ್ತ ಪ್ಯಾಕೇಜ್ ಆಯ್ಕೆ ಮಾಡಿ.

ಒಟ್ಟಾರೆ 4 ದಿನಗಳ ಒಳಗೆ ಮದುರೈ – ರಾಮೇಶ್ವರ – ಕನ್ಯಾಕುಮಾರಿ ಟ್ರಿಪ್‌ ಆಧ್ಯಾತ್ಮಿಕತೆ, ಇತಿಹಾಸ ಮತ್ತು ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಅತ್ಯುತ್ತಮ ಅವಕಾಶ ಒದಗಿಸಿಕೊಡುತ್ತದೆ.

ಮದುರೈ – ರಾಮೇಶ್ವರ – ಕನ್ಯಾಕುಮಾರಿ ಕಾಂಬೊ ಟ್ರಿಪ್‌ ಪ್ಯಾಕೇಜ್‌ಗಳ ವಿವರಗಳಿಗೆ ಸಂಪರ್ಕಿಸಿ, ಮೊಬೈಲ್-‌ 93641 04366/ 70222 59007/ 70222 59008. ವೆಬ್‌ ಸೈಟ್‌ https://www.adigasyatra.com

Related posts

2025ರಲ್ಲಿ ಭಾರತೀಯರು ಅತೀ ಹೆಚ್ಚು ಹುಡುಕಿದ ಟಾಪ್ 10 ಪ್ರವಾಸಿ ತಾಣಗಳಿವು!

Adigas Yatra

ಗುಜರಾತ್‌ ಪ್ರವಾಸಕ್ಕೆ ಅಡಿಗಾಸ್‌ ಯಾತ್ರಾ ತಂದಿದೆ 9 ದಿನಗಳ ವಿಶೇಷ ಪ್ಯಾಕೇಜ್‌!

Adigas Yatra

ಅಡಿಗಾಸ್‌ ಯಾತ್ರಾದಿಂದ ಕೈಲಾಸ ಮಾನಸ ಸರೋವರ ಯಾತ್ರೆ – Bookings Open!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page