ಟ್ರಾವೆಲ್ ಟಿಪ್ಸ್

ಟೆನ್ಶನ್‌ ಫ್ರೀ – ಆರಾಮದಾಯಕ ಪ್ರವಾಸಕ್ಕೆ ಗಮನಿಸಬೇಕಾದ ಸಂಗತಿಗಳು!

ಬೆಂಗಳೂರು: ಪ್ರವಾಸದ ಸಂದರ್ಭದಲ್ಲಿ ನಾವು ಕೆಲವೊಂದು ಅಗತ್ಯ ವಿಷಯಗಳನ್ನು ಮರೆಯುತ್ತೇವೆ. ಇದು ಸಾಮಾನ್ಯವಾದರೂ ಸ್ನೇಹಿತರು, ಬಂಧುಗಳ ನಡುವೆ ಕೆಲವೊಮ್ಮೆ ಮುಜುಗರವನ್ನು ಉಂಟು ಮಾಡುತ್ತದೆ. ಹೀಗಾಗದೆ ಇರಲು ಪ್ರವಾಸದ ಯೋಜನೆ ಮಾಡುವಾಗಲೇ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಇದರಿಂದ ಪ್ರವಾಸವನ್ನು ಖುಷಿ ಖುಷಿಯಿಂದ ಅನುಭವಿಸಲು ಸಾಧ್ಯವಾಗುತ್ತದೆ. ಯಾವುದೋ ಒಂದು ಎಡವಟ್ಟು ಪ್ರವಾಸದ ಸಂಪೂರ್ಣ ಅನುಭವವನ್ನು ಕಹಿ ಮಾಡಬಾರದು ಅಲ್ಲವೇ? ಅದಕ್ಕಾಗಿ ಪ್ರವಾಸದ ಯೋಜನೆ ರೂಪಿಸುವಾಗ ಏನೆಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎನ್ನುವ ಕಿರು ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಟೂರ್‌ ಪ್ಲಾನ್‌ ಮಾಡುವಾಗ ಎಲ್ಲವನ್ನೂ ಸರಿಯಾಗಿ ಯೋಜನೆ ಮಾಡಬೇಕು. ಇದರಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ, ಭೇಟಿ ನೀಡಬೇಕಾದ ಸ್ಥಳಗಳ ವಿವರ, ಬ್ಯಾಗ್‌ನಲ್ಲಿ ಏನು ಪ್ಯಾಕ್ ಮಾಡಬೇಕು ಇತ್ಯಾದಿ ಮುಖ್ಯವಾಗುತ್ತದೆ.

ಹಣ, ದಾಖಲೆ ಜತೆಯಲ್ಲಿರಲಿ

ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರವಾಸ ಮಾಡುವಾಗ ಗುರುತಿನ ಪುರಾವೆ, ಪ್ರಯಾಣ ಟಿಕೆಟ್‌ಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಮತ್ತು ಅದರ ಪ್ರತಿಗಳನ್ನು ಜತೆಯಲ್ಲೇ ಇಟ್ಟುಕೊಳ್ಳಬೇಕು. ಇದು ಸಾಕಷ್ಟು ಬಾರಿ ಸಹಾಯಕ್ಕೆ ಬರುತ್ತದೆ. ಕೆಲವೊಂದು ಸ್ಥಳಗಳಲ್ಲಿ ಈ ದಾಖಲೆಗಳಿಲ್ಲದಿದ್ದರೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ.

ಪ್ಯಾಕಿಂಗ್ ಪಟ್ಟಿ ಹೀಗಿರಲಿ

ಪ್ರವಾಸದ ವೇಳೆ ಹೆಚ್ಚು ಕಿರಿಕಿರಿ ಕೊಡುವುದು ಪ್ಯಾಕಿಂಗ್. ಇದರಲ್ಲಿ ನಾವು ತೀರಾ ಅಗತ್ಯದ ವಸ್ತುಗಳಿಗೆ ಮೊದಲ ಆದ್ಯತೆ ಕೊಡಬೇಕು. ಬಳಿಕ ಬೇಕಿದ್ದರೆ ಮಾತ್ರ ಎನ್ನುವಂತಹ ವಸ್ತುಗಳಿರಬೇಕು. ಔಷಧಗಳು, ಒಣ ಹಣ್ಣುಗಳು ಇವುಗಳನ್ನು ಜತೆಗಿಟ್ಟುಕೊಳ್ಳಿ. ವಾತಾವರಣಕ್ಕೆ ತಕ್ಕಂತೆ ಬಟ್ಟೆಗಳು ಲಗೇಜ್ ಬ್ಯಾಗ್‌ನಲ್ಲಿರಲಿ.

ಹಿಂದಿನ ಪ್ರಯಾಣಗಳ ಅನುಭವದಿಂದ ಕಲಿಯಿರಿ

ಪ್ರತಿ ಬಾರಿಯೂ ಪ್ರಯಾಣ ಮಾಡುವಾಗ ಒಂದಷ್ಟು ಒಳ್ಳೆಯ, ಕೆಟ್ಟ ಅನುಭವಗಳು ಆಗೇ ಆಗುತ್ತದೆ. ಅವುಗಳನ್ನು ನೆನಪಿಡಿ ಮತ್ತು ತಪ್ಪಿನಿಂದ ಪಾಠ ಕಲಿಯಿರಿ. ಪ್ರತಿ ಪ್ರಯಾಣದಲ್ಲೂ ದೇಹ, ಮನಸ್ಸು ಮತ್ತು ಆದ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಇದು ಮುಂದಿನ ಪ್ರಯಾಣವನ್ನು ಇನ್ನಷ್ಟು ಸ್ಮರಣೀಯಗೊಳಿಸುತ್ತದೆ.

ತುರ್ತು ಸಂಖ್ಯೆ ನೆನಪಿನಲ್ಲಿರಲಿ

ಪ್ರಯಾಣಿಸುತ್ತಿರುವ ಸ್ಥಳದ ತುರ್ತು ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಪೊಲೀಸ್, ಆಸ್ಪತ್ರೆ ಸೇರಿದಂತೆ ಸಂಪರ್ಕ ಸಂಖ್ಯೆ ನೆನಪಿನಲ್ಲಿದ್ದರೆ ಅಗತ್ಯ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತದೆ. ಇದು ಪ್ರವಾಸ ಸ್ಥಳದಲ್ಲಿ ಹೆಚ್ಚು ಸಂತೋಷದಿಂದ ಸಮಯ ಕಳೆಯಲು ಸಹಾಯ ಮಾಡುತ್ತದೆ.

ಸ್ಥಳೀಯರನ್ನು ಗೌರವಿಸಿ

ಪ್ರವಾಸ ಸ್ಥಳದಲ್ಲಿ ಸ್ಥಳೀಯರು ಮತ್ತು ಸ್ಥಳವನ್ನು ಗೌರವಿಸಬೇಕು. ಇದರಿಂದ ಸಾಕಷ್ಟು ಹೊಸ ಅನುಭವ ದೊರೆಯುತ್ತದೆ. ಎಲ್ಲಿದ್ದರೂ, ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಕೂಡ ಸ್ಥಳ ಮತ್ತು ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸಬೇಕು. ಇದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಆಹಾರ, ಶಿಷ್ಟಾಚಾರ, ಸಂಪ್ರದಾಯದ ಬಗ್ಗೆ ಟೀಕೆ ಮಾಡಲು ಹೋಗಬೇಡಿ. ಬೇಡವಾದರೆ ನಯವಾಗಿ ನಿರಾಕರಿಸಿ.

ಪ್ರತಿ ಕ್ಷಣವನ್ನೂ ಆನಂದಿಸಿ

ಪ್ರವಾಸದ ಪ್ರತಿ ಕ್ಷಣವನ್ನು ಆನಂದಿಸಿ ಮತ್ತು ಎಲ್ಲದಕ್ಕೂ ಸಿದ್ಧರಾಗಿರಿ. ಪ್ರವಾಸವು ಇಚ್ಛೆಯಂತೆ ನಡೆಯದಿದ್ದರೆ ಬೇಸರ ಪಟ್ಟುಕೊಳ್ಳಬೇಡಿ. ಅದರಿಂದ ಏನು ಕಲಿತಿರಿ ಎಂಬುದನ್ನು ತಿಳಿದುಕೊಳ್ಳಿ. ಪ್ರವಾಸದಲ್ಲಿ ಸುರಕ್ಷತೆಯೇ ಮೊದಲ ಆದ್ಯತೆ ಎಂಬುದನ್ನು ಮರೆಯದಿರಿ. ಈ ಎಲ್ಲ ಅಂಶಗಳನ್ನು ನೆನಪಿನಲ್ಲಿಟ್ಟಿಕೊಂಡರೆ ಖಂಡಿತಾ ಪ್ರವಾಸ ಅನುಭವ ಅತ್ಯಂತ ಖುಷಿಯಾಗಿರುತ್ತದೆ.

Related posts

ಕಡಿಮೆ ಬಜೆಟ್‌ನಲ್ಲಿ ವಿದೇಶ ಪ್ರವಾಸ ಮಾಡೋದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

Adigas Yatra

ವಿದೇಶ ಪ್ರವಾಸ ಮಾಡಲಿದ್ದೀರಾ? ಹೊಸ ಪಾಸ್‌ಪೋರ್ಟ್ ನಿಯಮಗಳ ಬಗ್ಗೆ ನಿಮಗೆ ತಿಳಿದಿರಲಿ!

Adigas Yatra

2026ರ ಟ್ರೆಂಡಿಂಗ್ ವಿದೇಶ ಪ್ರವಾಸಿ ತಾಣಗಳು: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page