ಬೆಂಗಳೂರು: ಈ ಸಲದ ಬಿಸಿಲ ಝಳಕ್ಕೆ ‘ಉಸ್ಸಪ್ಪಾ, ಸಾಕಪ್ಪಾ ಸಾಕು’ ಅಂತ್ತಿದ್ದೀರಾ. ಹಾಗಾದ್ರೆ ಚಿಂತೆ ಬೇಡ, ಬೇಸಿಗೆಯಲ್ಲಿ ತಂಪಾದ ಸರೋವರಗಳ ಸುಂದರ ನಾಡು ನೈನಿತಾಲ್‌ಗೆ ಹೋಗಿ ಬನ್ನಿ! ಹೊಚ್ಚ ಹೊಸ ಪ್ರವಾಸದ ದಿವ್ಯ ಅನುಭವವನ್ನು ನಿಮ್ಮದಾಗಿಸಿಕೊಂಡು ಕೂಲಾಗಿ ಹಿಂದಿರುಗಿ!
ಉತ್ತರಾಖಂಡ ರಾಜ್ಯದ ಜನಪ್ರಿಯ ಗಿರಿಧಾಮ ನೈನಿತಾಲ್. ಇದನ್ನು ಭಾರತದ ಸರೋವರಗಳ ಜಿಲ್ಲೆ ಎಂದೂ ಕರೆಯುತ್ತಾರೆ. ಹಿಮಾಲಯದ ನೆಕ್ಲೇಸ್‌ನಲ್ಲಿರುವ ಸುಂದರ ರತ್ನವೇ ನೈನಿತಾಲ್ ಎಂಬ ಖ್ಯಾತಿ ಇದಕ್ಕಿದೆ. ಇಲ್ಲಿನ ಮುಖ್ಯವಾದ ಆಕರ್ಷಣೆಯೇ ನೈನಿ ಸರೋವರ. ಅರ್ಧ ಚಂದ್ರಾಕೃತಿಯಲ್ಲಿರುವ ಸಿಹಿ ನೀರಿನ ಸರೋವರ ಇದಾಗಿದೆ. ಸಮುದ್ರಮಟ್ಟದಿಂದ 1,938 ಅಡಿ ಎತ್ತರದಲ್ಲಿದೆ. ಸುತ್ತಲೂ ಉನ್ನತ ಪರ್ವತಗಳಿಂದ ಆವೃತವಾಗಿದೆ. ಇಲ್ಲಿಯ ದೋಣಿ ವಿಹಾರ ಮನಸ್ಸಿಗೆ ಮುದ ನೀಡುತ್ತದೆ. ನೈನಾ ದೇವಿಯ ದೇವಾಲಯವನ್ನೂ ಸಂದರ್ಶಿಸಬಹುದು. ಹಿಮಾಲಯದ ಶ್ರೇಣಿಗಳ ನೋಟ ಮನಸೂರೆಗೊಳ್ಳುತ್ತದೆ.
ನೈನಿತಾಲ್‌ನಲ್ಲಿ ಪ್ರವಾಸಿಗರು ನೋಡಬಹುದಾದ ಸ್ಥಳಗಳಲ್ಲಿ ನೈನಿತಾಲ್ ಸರೋವರ, ನೈನಾದೇವಿ ದೇವಸ್ಥಾನ, ಕೌಸಾನಿ, ರಾಣಿಖೇತ್, ಹನುಮಾನ್‌ಗಢ್, ಭೀಮ್‌ತಾಲ್, ನೌಕಚಿಟಾಲ್, ಸಟ್ಟಾಲ್, ದೇವತಾ ಟೆಂಪಲ್, ಅನಾಸಕ್ತಿ ಆಶ್ರಮ, ಲಕ್ಷ್ಮೀ ಆಶ್ರಮ, ಕೌಸಾನಿ ಟೀ ಎಸ್ಟೇಟ್, ಜುಲಾ ದೇವಿ ದೇವಾಲಯ ಮೊದಲಾದ ತಾಣಗಳಿವೆ.

ನೈನಿತಾಲ್ ಸರೋವರ ನೇತ್ರದ ಆಕಾರವನ್ನು ಬಿಂಬಿಸುವುದರಿಂದ ಆ ಹೆಸರನ್ನು ಗಳಿಸಿದೆ. 1.43 ಕಿಲೋಮೀಟರ್ ಉದ್ದವಿರುವ ಸರೋವರ ಶುದ್ಧ, ಸ್ವಚ್ಛವಾದ ನೀರನ್ನು ಒಳಗೊಂಡಿದೆ. ಸುತ್ತಲೂ ಏಳು ಪರ್ವತ ಶಿಖರಗಳಿಂದ ನೈನಿತಾಲ್ ಆವೃತವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರಿಗೆ ಇದು ಬೇಸಗೆಯ ಕಾಲದ ವಿರಾಮದ ತಾಣವಾಗಿತ್ತು. ಆಗಿನ ವಸಾಹತು ಕಾಲದ ಬಂಗಲೆಗಳು, ಶಾಲಾ ಕಟ್ಟಡಗಳನ್ನು ಇಲ್ಲಿ ಕಾಣಬಹುದು.
ನೈನಿತಾಲ್‌ನಿಂದ 113 ಕಿಲೋಮೀಟರ್ ದೂರದಲ್ಲಿರುವ ಕೌಸಾನಿಯು ಭಾಗೇಶ್ವರ ಜಿಲ್ಲೆಯಲ್ಲಿದೆ. ಇಲ್ಲಿ ತ್ರಿಶೂಲ್, ನಂದಾದೇವಿ, ಪಂಚುಲಿ ಮೊದಲಾದ ಶಿಖರಾಗ್ರಗಳನ್ನು ವೀಕ್ಷಿಸಬಹುದು. ಇದನ್ನು ಭಾರತದ ಸ್ವಿಜರ್ಲೆಂಡ್ ಎಂದು ಕರೆಯುವ ವಾಡಿಕೆ ಇದೆ.
ಕೌಸಾನಿಯಲ್ಲಿ ಅನಾಸಕ್ತಿ ಆಶ್ರಮವಿದೆ. ಇಲ್ಲಿ ಮಹಾತ್ಮಾ ಗಾಂಧೀಜಿಯವರು 1929ರಲ್ಲಿ ಎರಡು ವಾರ ತಂಗಿದ್ದರು. ಆದ್ದರಿಂದ ಗಾಂಧಿ ಆಶ್ರಮವೆಂದೂ ಪ್ರಸಿದ್ಧಿ ಗಳಿಸಿದೆ. ಇಲ್ಲಿ ಗಾಂಧೀಜಿಯವರು ಅನಾಸಕ್ತಿ ಯೋಗವನ್ನು ಜನರಿಗೆ ಉಪದೇಶಿಸಿದ್ದರು. ಇಲ್ಲಿ ಸಣ್ಣ ಪ್ರಾರ್ಥನಾ ಕೊಠಡಿಯೂ ಇದೆ. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪ್ರಾರ್ಥನೆಯೂ ನಡೆಯುತ್ತದೆ.

ರಾಣಿ ಖೇತ್ ಹಿಮಾಲಯದ ಅತ್ಯಂತ ಸುಂದರ, ಶಾಂತಿಯುತ ಪ್ರವಾಸಿತಾಣಗಳಲ್ಲೊಂದು. ನಗರ ಜೀವನದ ಜಂಜಾಟಗಳಿಂದ ಮುಕ್ತಿಪಡೆಯಲು, ಹೊಸ ಚೈತನ್ಯವನ್ನು ತುಂಬಿಕೊಳ್ಳಲು ರಾಣಿಖೇತ್ ಉತ್ತಮ ಸ್ಥಳ. ಪೈನ್ ವೃಕ್ಷಗಳ ಕಾಡು, ಹಿಮಾವೃತ ಪರ್ವತಗಳು, ಹಸಿರು ಹುಲ್ಲುಗಾವಲುಗಳನ್ನು ವೀಕ್ಷಿಸಬಹುದು. ಇದು ಅಲ್ಮೋರಾದಿಂದ 50 ಕಿಲೋಮೀಟರ್ ದೂರದಲ್ಲಿದೆ.
ಅಡಿಗಾಸ್ ಯಾತ್ರಾದಿಂದ ಪ್ರವಾಸಿಗರ ಅನುಕೂಲಕ್ಕಾಗಿ ವರ್ಷಪೂರ್ತಿ ನೈನಿತಾಲ್ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಲಕ್ಸುರಿ, ಕಸ್ಟಮೈಸ್ಡ್ ಮತ್ತು ಸಸ್ಯಾಹಾರಿ ಊಟೋಪಚಾರಗಳೊಂದಿಗೆ ಗ್ರೂಪ್ ಟೂರ್‌ಗಳನ್ನೂ ಮಾಡಬಹುದು.
