ಬೆಂಗಳೂರು: ಥಾಯ್ಲೆಂಡ್‌ನ ರಾಜಧಾನಿಯಾದ ಬ್ಯಾಂಕಾಕ್ ತನ್ನ ವೈಭವಯುತ ದೇವಾಲಯಗಳು, ಸಂಸ್ಕೃತಿ ಮತ್ತು ಆಧುನಿಕ ನಗರ ಜೀವನದ ಸಂಯೋಜನೆಯಿಂದ ವಿಶ್ವದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ವಿಶೇಷವಾಗಿ ಇಲ್ಲಿರುವ ಬುದ್ಧನ ದೇವಾಲಯಗಳು ಶಾಂತಿ ಮತ್ತು ಆಧ್ಯಾತ್ಮಿಕತೆಯ ಅನುಭವವನ್ನು ನೀಡುತ್ತವೆ. ಹೀಗಾಗಿ ಬ್ಯಾಂಕಾಕ್ ಪ್ರವಾಸದವೇಳೆ ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾದ ದೇವಾಲಯಗಳು ಮತ್ತು ಪ್ರವಾಸಿ ತಾಣಗಳ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.
Wat Phra Kaew (ವಾಟ್ ಫ್ರಾ ಕೇವ್)
ಎಮರಾಲ್ಡ್ ಬುದ್ಧನ ಮಂದಿರವೆಂದೇ ಪ್ರಸಿದ್ಧಿ ಪಡೆದ ಈ ದೇವಾಲಯವು ಥೈಲ್ಯಾಂಡ್‌ನ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದರ ಸೊಗಸಾದ ವಾಸ್ತುಶಿಲ್ಪ ಪ್ರವಾಸಿಗರನ್ನು ಆಕರ್ಷಿಸುತ್ತದೆ.
Wat Arun (ವಾಟ್ ಅರುಣ್)
ಚಾವ್ ಪ್ರಾಯಾ ನದಿಯ ತೀರದಲ್ಲಿರುವ ಈ ದೇವಾಲಯವು “ಟೆಂಪಲ್ ಆಫ್ ಡಾನ್” ಎಂದೇ ಪ್ರಸಿದ್ಧಿ. ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಇದರ ಸೌಂದರ್ಯ ಇನ್ನಷ್ಟು ಹೆಚ್ಚಾಗುತ್ತದೆ.
Wat Pho (ವಾಟ್ ಫೋ)
ಇಲ್ಲಿ ಇರುವ ವಿಶಾಲವಾದ ರಿಕ್ಲೈನಿಂಗ್ ಬುದ್ಧ ಪ್ರತಿಮೆ ವಿಶ್ವದಾದ್ಯಂತ ಪ್ರಸಿದ್ಧ. ಇದು ಮಸಾಜ್ ತರಬೇತಿ ಕೇಂದ್ರಕ್ಕೂ ಹೆಸರುವಾಸಿ.

Grand Palace Bangkok (ಗ್ರ್ಯಾಂಡ್ ಪ್ಯಾಲೇಸ್ ಬ್ಯಾಂಕಾಕ್)
ಥಾಯ್ಲೆಂಡ್‌ನ ರಾಜರ ಹಳೆಯ ನಿವಾಸವಾಗಿದ್ದ ಈ ಅರಮನೆ ತನ್ನ ಸೊಬಗು ಮತ್ತು ಇತಿಹಾಸದಿಂದ ಗಮನ ಸೆಳೆಯುತ್ತದೆ.
Chatuchak Market (ಚತೂಚಾಕ್ ಮಾರ್ಕೆಟ್)
ವಿಶ್ವದಲ್ಲೇ ಅತಿ ದೊಡ್ಡ ವಾರಾಂತ್ಯ ಮಾರುಕಟ್ಟೆಗಳಲ್ಲಿ ಒಂದಾದ ಚತೂಚಾಕ್ ಮಾರ್ಕೆಟ್‌ನಲ್ಲಿ ಶಾಪಿಂಗ್ ಮತ್ತು ಸ್ಥಳೀಯ ಆಹಾರಗಳ ರುಚಿಯನ್ನು ಸವಿಯಬಹುದು.
Khao San Road (ಖಾವೊ ಸಾನ್ ರೋಡ್)
ಯುವ ಪ್ರವಾಸಿಗರ ನೆಚ್ಚಿನ ಸ್ಥಳವಾಗಿರುವ ಇದು ರಾತ್ರಿ ಜೀವನ ಮತ್ತು ಮನರಂಜನೆಗೆ ಹೆಚ್ಚು ಪ್ರಸಿದ್ಧ.

ಒಟ್ಟಾರೆ ಬ್ಯಾಂಕಾಕ್ ನಗರವು ದೇವಾಲಯಗಳ ಆಧ್ಯಾತ್ಮಿಕತೆ ಮತ್ತು ಆಧುನಿಕ ಜೀವನದ ವೈವಿಧ್ಯತೆಯನ್ನು ಒಂದೇ ಸ್ಥಳದಲ್ಲಿ ನೀಡುತ್ತದೆ. ಈ ಪ್ರಮುಖ ಸ್ಥಳಗಳನ್ನು ಭೇಟಿ ಮಾಡಿದರೆ, ನಿಮ್ಮ ಪ್ರವಾಸ ಅನುಭವ ಇನ್ನಷ್ಟು ರಂಗುರಂಗಾಗಿರುತ್ತದೆ.
