ಭಾರತ ಪ್ರವಾಸ

ಕಾಶ್ಮೀರದ ಟುಲಿಪ್‌ ಗಾರ್ಡನ್‌! ಸ್ವರ್ಗಸದೃಶ ಪಾರ್ಕ್ ನೋಡಲು ಮರೆಯದಿರಿ!‌

ಬೆಂಗಳೂರು: ಕಾಶ್ಮೀರದ ವಿಶ್ವವಿಖ್ಯಾತ ಟುಲಿಪ್‌ ಗಾರ್ಡನ್‌ ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸ್ವಿಜರ್ಲೆಂಡ್‌ ಅನ್ನೂ ಮೀರಿಸುವ ನಿಸರ್ಗ ರಮಣೀಯ ಕಾಶ್ಮೀರ ಕಣಿವೆಯಲ್ಲಿರುವ ಟುಲಿಪ್‌ ಗಾರ್ಡನ್‌, ಏಷ್ಯಾದಲ್ಲೇ ಅತಿ ದೊಡ್ಡದು ಎಂಬ ದಾಖಲೆಗೆ ಪಾತ್ರವಾಗಿದೆ.

ಜಮ್ಮುಕಾಶ್ಮೀರ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ಇತ್ತೀಚೆಗೆ ಟುಲಿಪ್‌ ಗಾರ್ಡನ್‌ ಅನ್ನು ಸಾರ್ವಜನಿಕರ ವೀಕ್ಷಣೆಗೆ 2026ರ ಮಾರ್ಚ್‌ 16ರಂದು ಉದ್ಘಾಟನೆ ಮಾಡಿದ ಸಂದರ್ಭ, ಮೊದಲ ದಿನವೇ ಸಾವಿರಾರು ವೀಕ್ಷಕರು ಉತ್ಸಾಹದಿಂದ ಆಗಮಿಸಿದ್ದರು. ‌

18 ಲಕ್ಷ ಟುಲಿಪ್‌ ಹೂಗಿಡಗಳ ತೋಟ!

ಕಾಶ್ಮೀರದ ಪ್ರವಾಸ ಕೈಗೊಳ್ಳುವವರಿಗೆ ಟುಲಿಪ್‌ ಗಾರ್ಡನ್‌ ಸಸ್ಯಕಾಶಿ ಪ್ರಮುಖ ಆಕರ್ಷಣೆಯಾಗಿದೆ. 2025ರಲ್ಲಿ ಈ ವಿಸ್ತಾರವಾದ ಹೂತೋಟ ವೀಕ್ಷಿಸಲು 8,25,000 ಪ್ರವಾಸಿಗರು ವೀಕ್ಷಿಸಿದ್ದರು. ಈ ಸಲ 18 ಲಕ್ಷ ಟುಲಿಪ್ಸ್‌ ಗಿಡಗಳನ್ನು ನೆಡಲಾಗಿದ್ದು, ವರ್ಣಮಯ ಹೂವುಗಳನ್ನು ಬಿಟ್ಟು ಕಂಗೊಳಿಸುತ್ತಿದೆ. ಜತೆಗೆ ಇತರ ಒಂದು ಲಕ್ಷ ಹೂ ಗಿಡಗಳನ್ನು ನೆಟ್ಟು ಅಲಂಕರಿಸಲಾಗಿದೆ. ಕೆಂಪು, ಗುಲಾಬಿ, ಬಿಳಿ, ಹಳದಿ, ಕೇಸರಿ ವರ್ಣಗಳ ಟುಲಿಪ್‌ ಹೂವುಗಳ ಸೊಬಗು ವರ್ಣಿಸಲಸದಳವಾಗಿರುತ್ತದೆ.

ಜಮ್ಮು ಕಾಶ್ಮೀರ ಈಗ ಅತ್ಯಂತ ಸುರಕ್ಷಿತವಾಗಿದ್ದು, ಪ್ರವಾಸಿಗರನ್ನು ಅಲ್ಲಿನ ಜನ ಆದರದಿಂದ ಸ್ವಾಗತಿಸುತ್ತಾರೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ಅತ್ಯಂತ ಸುಂದರವಾದ ಹೂವುಗಳ ಚಿತ್ತಾರದ ಬೃಹತ್‌ ಉದ್ಯಾನ, ತಂಪಾದ ಹವಾಮಾನ, ನೀರಿನ ಚಿಲುಮೆಗಳು, ಕಾರಂಜಿಗಳು ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ. ಟುಲಿಪ್‌ ಗಾರ್ಡನ್‌ನಲ್ಲಿ ಅದ್ಭುತವಾದ ನಿಸರ್ಗದ ನಡುವೆ ರೀಲ್ಸ್‌, ಸೆಲ್ಫಿಗಳನ್ನು ತೆಗೆದು ಆನಂದಿಸಬಹುದು.

ಟುಲಿಪ್‌ ಗಾರ್ಡನ್‌ ಎಲ್ಲಿದೆ?

ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದ ಸಿರಾಜ್‌ ಬಾಗ್ ನಲ್ಲಿ ಟುಲಿಪ್‌ ಗಾರ್ಡನ್‌ ಇದೆ. ಏಪ್ರಿಲ್‌ ಮಧ್ಯಭಾಗದ ತನಕ ವೀಕ್ಷಣೆಗೆ ಉತ್ತಮ ಸಮಯವಾಗಿದೆ.

ಅಡಿಗಾಸ್‌ನಿಂದ ಕಾಶ್ಮೀರ ಪ್ರವಾಸ ಪ್ಯಾಕೇಜ್

ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್‌ ಯಾತ್ರಾ ಟ್ರಾವೆಲ್‌ ಸಂಸ್ಥೆಯು ಎನ್ಚಾಂಟಿಂಗ್‌ ಕಾಶ್ಮೀರ ಎಂಬ ಕಾರ್ಯಕ್ರಮ ಆಯೋಜಿಸಿದೆ. 6 ದಿನಗಳ ಕಾಶ್ಮೀರ ಪ್ರವಾಸ ಇದಾಗಿದ್ದು, ಕರ್ನಾಟಕದ ಪ್ರವಾಸಿಗರು ಟುಲಿಪ್‌ ಗಾರ್ಡನ್‌ ಸೇರಿದಂತೆ ಕಾಶ್ಮೀರದ ಸುಂದರ ಪ್ರವಾಸವನ್ನು ಕೈಗೊಳ್ಳಬಹುದು.

ಈ ಟೂರ್‌ ಪ್ಯಾಕೇಜ್‌ನಲ್ಲಿ ಸೋನ್ಮಾರ್ಗ್‌, ಶ್ರೀನಗರ, ದಾಲ್‌ ಲೇಕ್‌, ಗುಲ್ಮಾರ್ಗ್‌, ಪಹಲ್‌ ಗಾಂವ್‌ ವೀಕ್ಷಿಸಬಹುದು. ಮಾರ್ಚ್‌ 18ರಿಂದ ಡಿಸೆಂಬರ್‌ 16ರ ತನಕ ಈ ಟೂರ್‌ ಕಾರ್ಯಕ್ರಮಗಳು ಇರುತ್ತವೆ.

ಶ್ರೀಶಂಕರಾಚಾರ್ಯ ದೇವಾಲಯ

ಶ್ರೀನಗರದಲ್ಲಿ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ ಸ್ಥಳ ಮತ್ತು ದೇವಾಲಯವನ್ನು ಸಂದರ್ಶಿಸಬಹುದು. ಇಲ್ಲಿ ಸೇನೆಯ ಭದ್ರತಾ ವ್ಯವಸ್ಥೆ ಇದ್ದು, ನಿಗದಿತ ವೇಳೆಯಲ್ಲಿ ದೇಗುಲವನ್ನ ಸಂದರ್ಶಿಸಬಹುದು. ಜತೆಗೆ ದಾಲ್‌ ಲೇಕ್‌ನಲ್ಲಿ ದೋಣಿ ವಿಹಾರವನ್ನು ಆಸ್ವಾದಿಸಬಹುದು.

ಅಡಿಗಾಸ್‌ ಯಾತ್ರಾದಿಂದ ಪ್ರವಾಸಿಗರ ಅನುಕೂಲಕ್ಕಾಗಿ ವರ್ಷಪೂರ್ತಿ ಜಮ್ಮು ಕಾಶ್ಮೀರ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಲಕ್ಷುರಿ, ಕಸ್ಟಮೈಸ್ಡ್‌ ಮತ್ತು ಸಸ್ಯಾಹಾರಿ ಊಟೋಪಚಾರಗಳೊಂದಿಗೆ ಗ್ರೂಪ್‌ ಟೂರ್‌ಗಳನ್ನೂ ಮಾಡಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ: 080-26616678 /7022259008 /9449478944
Website: www. adigasyatra.com

Related posts

ವಿದೇಶ ಸುತ್ತಲು ಸಾಧ್ಯವಾಗದಿದ್ರೆ ಸ್ವದೇಶ ನೋಡಿ: ಪ್ರವಾಸಿಗರಿಗೆ ಸೂಪರ್ ಆಫರ್‌ ಕೊಟ್ಟ ನಾಗರಾಜ್‌ ಅಡಿಗ

Adigas Yatra

ಅಮರನಾಥ ಯಾತ್ರೆ 2026 – ಅಡಿಗಾಸ್ ಯಾತ್ರಾ ಜೊತೆ ದೈವಿಕ ಅನುಭವ

Adigas Yatra

ಅಯೋಧ್ಯಾ – ಕಾಶಿ – ಗಯಾ ಯಾತ್ರೆಗೆ ಅಡಿಗಾಸ್ ಯಾತ್ರಾದ ವಿಶೇಷ ಪ್ಯಾಕೇಜ್!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page