ಭಾರತ ಪ್ರವಾಸ

ಅಡಿಗಾಸ್‌ ಯಾತ್ರಾದಿಂದ ಕೈಲಾಸ ಮಾನಸ ಸರೋವರ ಯಾತ್ರೆ – Bookings Open!

ಬೆಂಗಳೂರು: ನೀವು ಭವ್ಯ ದಿವ್ಯ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಮಾಡಲು ಆಲೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸಿಹಿ ಸುದ್ದಿ! ಕೇಂದ್ರ ಸರಕಾರದ “ಅನುಭವಿ ಸೇವಾ ಪೂರೈಕೆದಾರʼ ಎಂಬ ಮಾನ್ಯತೆ ಗಳಿಸಿರುವ ಅಡಿಗಾಸ್‌ ಯಾತ್ರಾ ಟ್ರಾವೆಲ್‌ ಸಂಸ್ಥೆಯು ಈ ಯಾತ್ರೆಯನ್ನು ಆಯೋಜಿಸಿದೆ.

ಕೈಲಾಸ ಮಾನಸ ಸರೋವರ ಯಾತ್ರೆ 2026ರ ಮೇ ತಿಂಗಳಿನಿಂದ ಆರಂಭವಾಗುತ್ತದೆ. ವಿಮಾನ ಮತ್ತು ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಕಲ್ಪಿಸಿರುವುದರಿಂದ 10 ದಿನಗಳಲ್ಲಿ ಸುಲಭ ಮತ್ತು ಸುರಕ್ಷಿತ ಯಾತ್ರೆ ಕೈಗೊಳ್ಳಬಹುದು. ಭಾರತದ ಗಡಿಯಿಂದ 50 ಕಿಲೋಮೀಟರ್‌ ದೂರದಲ್ಲಿ ಚೀನಾ-ಟಿಬೆಟ್‌ ಗಡಿಯನ್ನು ದಾಟಿದರೆ ಕೈಲಾಸ ಮಾನಸ ಸರೋವರಕ್ಕೆ ತಲುಪಬಹುದು.

ಬೆಂಗಳೂರಿಂದ ಒಂದು ದಿನದ ಪ್ರಯಾಣ

ಬೆಂಗಳೂರಿನಿಂದ ಲಖನೌ ತನಕ ವಿಮಾನದಲ್ಲಿ ಪ್ರಯಾಣ. ಲಖನೌದಿಂದ ನೇಪಾಳ ಗಂಝ್‌ಗೆ 180 ಕಿಲೋಮೀಟರ್‌ ತನಕ ರಸ್ತೆ ಪ್ರಯಾಣ ಮಾಡಿ ಮೊದಲ ದಿನ ರಾತ್ರಿ ಅಲ್ಲಿ ತಂಗಲಾಗುವುದು. ಎರಡನೇ ದಿನ ನೇಪಾಳ ಗಂಜ್‌ನಿಂದ ಸೆಮಿಕೋಟ್‌ ತನಕ ವಿಮಾನ ಪ್ರಯಾಣ. ಸೆಮಿಕೋಟ್‌ನಿಂದ ಟಿಬೆಟ್-ನೇಪಾಳ ಗಡಿ ಭಾಗದ ಹಿಲ್ಸಾ ಎಂಬಲ್ಲಿಗೆ ಹೆಲಿಕಾಪ್ಟರ್‌ ಮೂಲಕ ಯಾತ್ರೆ. ಹೀಗೆ ಲಖನೌದಿಂದ ಟಿಬೆಟ್-ನೇಪಾಳ ಗಡಿಭಾಗಕ್ಕೆ ಒಂದೇ ದಿನದಲ್ಲಿ ತಲುಪಲಾಗುವುದು.

ದಾರ್ಚೆನ್‌ನಲ್ಲಿ ವಾಸ್ತವ್ಯ

ಹಿಲ್ಸಾ ಬಿಟ್ಟ ನಂತರ ಎರಡನೇ ರಾತ್ರಿ ಪುರಾಂಗ್‌ ಎಂಬಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡುತ್ತಾರೆ. ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಮತ್ತೊಂದು ದಿನ ಅಲ್ಲಿಯೇ ತಂಗಲಾಗುವುದು. ನಾಲ್ಕನೇ ದಿನ ಪುರಾಂಗ್‌ನಿಂದ ಪವಿತ್ರ ಮಾನಸ ಸರೋವರಕ್ಕೆ ಪ್ರಯಾಣ. ಇದು ಅತಿ ಎತ್ತರ ಪ್ರದೇಶದಲ್ಲಿರುವ ಸಿಹಿ ನೀರಿನ ಸರೋವರ ಆಗಿದೆ. ಕೈಲಾಸ ಪರ್ವತದ ದಕ್ಷಿಣ ಭಾಗದಲ್ಲಿದೆ. ಅಲ್ಲಿ ಒಂದು ರಾತ್ರಿ ಪ್ರವಾಸಿಗರು ತಂಗುತ್ತಾರೆ.
ಮಾನಸ ಸರೋವರದ ಪಕ್ಕದಲ್ಲೇ ರಾಕ್ಷಸ ಸರೋವರ್ ಎಂಬ ಉಪ್ಪಿನ ನೀರಿನ ಸರೋವರವಿದೆ. ಇದನ್ನೆಲ್ಲ ವೀಕ್ಷಿಸಿದ ಬಳಿಕ ಕೈಲಾಸ ಪರ್ವತದ ಬುಡದಲ್ಲಿರುವ ದಾರ್ಚೆನ್‌ ಎಂಬಲ್ಲಿಗೆ ತೆರಳಿ ವಾಸ್ತವ್ಯ ಮಾಡಲಾಗುವುದು.

3 ದಿನಗಳ ಕೈಲಾಸ ಪರ್ವತ ಪರಿಕ್ರಮ

ಬಳಿಕ ಮೂರು ದಿನಗಳ ಕೈಲಾಸ ಪರ್ವತದ ಪರಿಕ್ರಮ ಆರಂಭವಾಗುತ್ತದೆ. ಪರಿಕ್ರಮದ ಮೊದಲ ದಿನ ಕೈಲಾಸ ಪರ್ವತದ ಪ್ರವೇಶ ಸ್ಥಳವಾದ ಯಮದ್ವಾರದ ತನಕ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ತೆರಳಲಾಗುತ್ತದೆ. ಯಮದ್ವಾರದಿಂದ ದೇರಾಪುಕ್‌ ತನಕ 12 ಕಿಲೋಮೀಟರ್‌ ನಡಿಗೆ ಇರುತ್ತದೆ. ದೇರಾಪುಕ್‌ನಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ. ದೇರಾಪುಕ್‌ನಿಂದ ಎರಡನೇ ದಿನದ ಪರಿಕ್ರಮ ಜುತುಲ್‌ಪುಕ್‌ ತನಕ ಪ್ರಯಾಣ ಬೆಳೆಸಬೇಕಾಗುತ್ತದೆ. ಮೂರನೇ ದಿನ ಮತ್ತೆ ದಾರ್ಚೆನ್‌ಗೆ ತಲುಪಲಾಗುತ್ತದೆ. ಅಲ್ಲಿಗೆ ಕೈಲಾಸ ಪರ್ವತದ ಪರಿಕ್ರಮ ಮುಕ್ತಾಯವಾಗುತ್ತದೆ.

ಪಾಸ್‌ ಪೋರ್ಟ್‌ ಇರಬೇಕು

18-70 ವರ್ಷ ವಯೋಮಾನದವರು ಕೈಲಾಸ ಮಾನಸ ಸರೋವರ ಯಾತ್ರೆ ಮಾಡಬಹುದು. ಪಾಸ್‌ ಪೋರ್ಟ್‌ ಇರಬೇಕು. ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಅಡಿಗಾಸ್‌ ಆಯೋಜಿಸಿದೆ. ಸಸ್ಯಾಹಾರಿ ಊಟೋಪಚಾರ, ನುರಿತ ಮಾರ್ಗದರ್ಶನ, ಡೀಲಕ್ಸ್‌ ಬಸ್‌, ಸ್ಟ್ಯಾಂಡರ್ಡ್‌ ರೂಮ್‌, ಟ್ರಾವೆಲ್‌ ವಿಮೆಯನ್ನು ಒದಗಿಸಲಾಗುತ್ತಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ, ಮೊಬೈಲ್-‌ 93641 04366/ 70222 59007/ 70222 59008.

Related posts

ಬೇಸಿಗೆ ದಿನಗಳಲ್ಲಿ ಡಾರ್ಜಿಲಿಂಗ್‌, ಸಿಕ್ಕಿಂ ಪ್ರವಾಸ ಬೆಸ್ಟ್‌ – ಅಡಿಗಾಸ್‌ ಯಾತ್ರಾದಿಂದ ವಿಶೇಷ ಪ್ಯಾಕೇಜ್!

Adigas Yatra

ಅಸ್ಸಾಂ, ಅರುಣಾಚಲ, ಮೇಘಾಲಯ ಸುತ್ತಿಬರಲು ಅಡಿಗಾಸ್ ಯಾತ್ರಾದ 13 ದಿನಗಳ ವಿಶೇಷ ಪ್ಯಾಕೇಜ್!

Adigas Yatra

ನೀವು ಭೇಟಿ ನೀಡಲೇಬೇಕಾದ ಉತ್ತರ ಭಾರತದ 10 ಪ್ರವಾಸಿ ತಾಣಗಳು

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page