ಅಡಿಗಾಸ್ ಯಾತ್ರಾ

ಅಡಿಗಾಸ್‌ ಯಾತ್ರಾದಿಂದ ಆಸ್ಟ್ರೇಲಿಯಾ ಪ್ರವಾಸದ ಸೂಪರ್‌ ಪ್ಯಾಕೇಜ್!‌

ಬೆಂಗಳೂರು: ನೀವು ಕಾಂಗಾರೂಗಳ ನಾಡು, ನಯನಮನೋಹರ ನಿಸರ್ಗ ದೃಶ್ಯಾವಳಿಯ, ಅತ್ಯಾಧುನಿಕ, ಸುಸಜ್ಜಿತ ಆಸ್ಟ್ರೇಲಿಯಾದ ಸೊಬಗನ್ನು, ಆತಿಥ್ಯವನ್ನು ಸವಿಯಲು ಪ್ರವಾಸ ಮಾಡಬೇಕೆಂದು ಬಯಸುತ್ತೀರಾ? ಹಾಗಾದರೆ ರಾಜ್ಯದ ಪ್ರತಿಷ್ಠಿತ ಟ್ರಾವೆಲ್‌ ಸಂಸ್ಥೆಯಾದ ಅಡಿಗಾಸ್‌ ಯಾತ್ರಾ ನಿಮಗಾಗಿ ಆಸ್ಟ್ರೇಲಿಯಾ ಪ್ರವಾಸದ ಅದ್ಭುತ ಪ್ಯಾಕೇಜ್‌ ಅನ್ನು ಸಿದ್ಧಪಡಿಸಿದೆ.

ಒಟ್ಟು 13 ದಿನಗಳ ಆಸ್ಟ್ರೇಲಿಯಾ ಪ್ರವಾಸವನ್ನು ಅಡಿಗಾಸ್‌ ಯಾತ್ರಾ ಕಲ್ಪಿಸಿದೆ

ಈ ಪ್ರವಾಸದಲ್ಲಿ ನೀವು ಹೆಲಿಕಾಪ್ಟರ್‌ ನಲ್ಲಿ ಹಾರಾಟ ನಡೆಸಬಹುದು. ಹಡಗಿನಲ್ಲಿ ಡಿನ್ನರ್‌ ಸವಿಯಬಹುದು. ಸಿಡ್ನಿ ನಗರವನ್ನು ಸಂದರ್ಶಿಸಬಹುದು. ವಿಶ್ವವಿಖ್ಯಾತ ಒಪೆರಾ ಹೌಸ್‌ನಲ್ಲಿ ವಾಕ್ ಮಾಡಬಹುದು. ಅಲ್ಲಿನ ಅದ್ಭುತ ವೈಲ್ಡ್‌ ಲೈಫ್‌ ಅನ್ನು ವೀಕ್ಷಿಸಬಹುದು. ಬ್ಲೂ ಮೌಂಟೇನ್‌ನ ಸೌಂದರ್ಯವನ್ನು ನೋಡಬಹುದು. ಪ್ರಖ್ಯಾತ ಬೀಚ್‌ಗಳಲ್ಲಿ ನಡೆದು ಆಸ್ವಾದಿಸಬಹುದು. ಮೆಲ್ಬೋರ್ನ್‌ನ ಸಂಸ್ಕೃತಿ ಮತ್ತು ಕಲೆಗಳ ಕೇಂದ್ರ, ಗೋಲ್ಡ್‌ ಕೋಸ್ಟ್‌ನ ಸುಂದರ ಕಡಲ ತೀರಗಳನ್ನು ಎಂಜಾಯ್‌ ಮಾಡಬಹುದು.

ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿರುವ ಸಿಡ್ನಿ ಹಾರ್ಬರ್‌ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಬಂದರಾಗಿದೆ. ಇಲ್ಲಿ ಹಡಗಿನಲ್ಲಿ ಆತಿಥ್ಯದ ಜತೆಗೆ ಸುಂದರ ಸೂರ್ಯಾಸ್ತದ ದೃಶ್ಯವನ್ನು ಆನಂದಿಸಬಹುದು. ವಿಶ್ವ ಪ್ರಸಿದ್ಧ ಸಿಡ್ನಿ ಹಾರ್ಬರ್‌ ಬ್ರಿಡ್ಜ್‌ ಅನ್ನು ವೀಕ್ಷಿಸಬಹುದು. ಸಿಡ್ನಿಯ ಒಪೆರಾ ಹೌಸ್‌ ಕೂಡ ಬಲು ಸುಂದರವಾಗಿದೆ.

ಸಿಡ್ನಿಯ ನಗರವೂ ನೈಸರ್ಗಿಕ ಸೌಂದರ್ಯ ಮತ್ತು ಅಧುನಿಕತೆಯ ಸಮ್ಮಿಳನವಾಗಿದ್ದು, ಮನೋಜ್ಞ ಅನುಭವ ನೀಡುತ್ತದೆ. ಅಲ್ಲಿ ಸೀ ಲೈಫ್‌ ಅಕ್ವೇರಿಯಂ, ಸಿಡ್ನಿ ಟವರ್‌, ವೈಲ್ಡ್‌ ಲೈಫ್‌ ಝೂ, ಮಡಾಮ್‌ ತುಸ್ಸಾಡ್ಸ್‌ ಮ್ಯೂಸಿಯಂ ವೀಕ್ಷಿಸಬಹುದು. ಕೇಬಲ್‌ ವೇ, ಸ್ಕೈವೇ ಮತ್ತು ರೈಲ್ವೆಯಲ್ಲಿ ಪ್ರವಾಸದ ಮಜಾ ಅನುಭವಿಸಬಹುದು. ಆಸ್ಟ್ರೇಲಿಯಾದ ನಾರ್ತ್‌ ಕ್ವೀನ್ಸ್‌ಲ್ಯಾಂಡ್‌ ವಲಯದ ಕುರಾಂಡದಿಂದ ಕೈರ್ನ್ಸ್‌ ತನಕ ಇಡೀ ದಿನದ ಪ್ರಯಾಣವು ನಿಮಗೆ ಆಸ್ಟ್ರೇಲಿಯಾದ ಅದ್ಭುತ ಮಳೆ ಕಾಡುಗಳ, ಗ್ರಾಮೀಣ ಭಾಗದ ದರ್ಶನ ಮಾಡಿಸುತ್ತದೆ.

ಗೋಲ್ಡ್‌ ಕಾಸ್ಟ್‌ನಲ್ಲಿ ಸಮುದ್ರ ಜೀವಿಗಳ ದರ್ಶನ ಪಡೆಯಬಹುದು. ಮನರಂಜನೆ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆಯ ಅರಿವೂ ಆಗುತ್ತದೆ. ಫಿಲಿಪ್‌ ದ್ವೀಪದಲ್ಲಿ ಪೆಂಗ್ವಿನ್‌ಗಳ ಪರೇಡ್‌ ವೀಕ್ಷಿಸಬಹುದು.

ಅಡಿಗಾಸ್‌ ಯಾತ್ರಾದ ವಿಶೇಷತೆ ಏನೆಂದರೆ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುವುದು. 4 ಸ್ಟಾರ್‌ ಹೋಟೆಲ್‌ಗಳಲ್ಲಿ ವಾಸ್ತವ್ಯ, ಅತ್ಯುತ್ತಮ ಊಟೋಪಚಾರ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್‌, ಸ್ಥಳೀಯ ಪರ್ಮಿಟ್‌, ಟ್ಯಾಕ್ಸ್‌, ಕಾಂಪ್ಲಿಮೆಂಟರಿ ಬ್ರೇಕ್‌ ಫಾಸ್ಟ್‌, ವೀಸಾ ವ್ಯವಸ್ಥೆ, ವಿಮೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸುವುದರಿಂದ ನೆಮ್ಮದಿಯಿಂದ ಪ್ರವಾಸವನ್ನು ಎಂಜಾಯ್‌ ಮಾಡಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗೆ ಅಡಿಗಾಸ್‌ ಯಾತ್ರಾವನ್ನು ಸಂಪರ್ಕಿಸಿ:
📞 7022259008 /9449478944 / 080-26616678
🌐 Website: www.adigasyatra.com

Related posts

‘ಅಡಿಗಾಸ್‌ ಯಾತ್ರಾ’ ಕರ್ನಾಟಕದ ಹೆಮ್ಮೆ: ಟ್ರಾವೆಲ್‌ ಆಪರೇಟರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಮೆಚ್ಚುಗೆ

Adigas Yatra

Hiring: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ!

Adigas Yatra

Karnataka Budget 2026: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದಕ್ಕೆ ಅಡಿಗಾಸ್‌ ಯಾತ್ರಾ ಸ್ವಾಗತ

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page