ವಿದೇಶಿ ಪ್ರವಾಸಗಳಲ್ಲಿ₹ 20,000 ರುಪಾಯಿಗಳವರೆಗೆ ದರ ಕಡಿತ!
ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಟ್ರಾವೆಲ್ ಸಂಸ್ಥೆಯಾದ ಅಡಿಗಾಸ್ ಯಾತ್ರಾ ಇದೀಗ ತನ್ನ ಪ್ರವಾಸಿಗರಿಗೆ ಬಂಪರ್ ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಿಸಿದೆ. ವಿದೇಶ ಪ್ರವಾಸದಲ್ಲಿ ಅದ್ದೂರಿ, ಅತ್ಯಾಧುನಿಕ ಸೌಲಭ್ಯಗಳು, ಪುಷ್ಕಳ ಊಟೋಪಚಾರ ಮತ್ತು ಅದ್ಭುತ ಪ್ರವಾಸಿ ಅನುಭವವನ್ನು ಕಟ್ಟಿಕೊಡುವುದರಲ್ಲಿ ಸದಾ ಮುಂದಿರುವ ಅಡಿಗಾಸ್ ಯಾತ್ರಾ, ತನ್ನ ಅಂತಾರಾಷ್ಟ್ರೀಯ ಪ್ರವಾಸಗಳ ದರಗಳಲ್ಲಿ ಭಾರಿ ರಿಯಾಯಿತಿಯನ್ನು ಪ್ರಕಟಿಸಿದೆ.
ಸಂಸ್ಥೆಯ ‘ನಮ್ಮ ಗ್ಯಾರಂಟಿ’ ಯೋಜನೆಯ ಅಡಿಯಲ್ಲಿ, ಎಲ್ಲ ವಿದೇಶಿ ಪ್ರವಾಸಗಳಿಗೆ ₹2000 ದಿಂದ ಗರಿಷ್ಟ ₹20,000 ರುಪಾಯಿಗಳವರೆಗೆ ಡಿಸ್ಕೌಂಟ್ ದರದ ಅನುಕೂಲವನ್ನು ಪ್ರವಾಸಿಗರು ಪಡೆಯಬಹುದು.
ಒಂದು ವೇಳೆ ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಗರಿಷ್ಟ ಡಿಸ್ಕೌಂಟ್ ಅನ್ನು ಬಳಸದಿದ್ದರೆ, ದೇಶೀಯ ಪ್ರವಾಸದಲ್ಲಿ ಅದರ ಜೊತೆಗೆ ₹5,000 ರುಪಾಯಿಗಳ ಹೆಚ್ಚುವರಿ ಕೊಡುಗೆಯನ್ನೂ ಯಾವುದೆ ಸ್ವದೇಶಿ ಅಥವಾ ವಿದೇಶಿ ಪ್ರವಾಸಗಳಲ್ಲಿ ರಿಯಾಯತಿ ಪಡೆಯಬಹುದು! ಅಡಿಗಾಸ್ ಯಾತ್ರಾ ಸೀಮಿತ ಅವಧಿಗೆ ಈ ಕೊಡುಗೆಯನ್ನು ನೀಡುತ್ತಿದ್ದು, ಕೂಡಲೇ ಇದರ ಪ್ರಯೋಜನವನ್ನು ಪಡೆಯುವಂತೆ ಸಂಸ್ಥೆಯ ಸ್ಥಾಪಕರಾದ ಕೆ. ನಾಗರಾಜ ಅಡಿಗ ಅವರು ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

“ಕಳೆದೊಂದು ವರ್ಷದಿಂದೀಚೆಗೆ ನಾನಾ ಜಾಗತಿಕ ಬಿಕ್ಕಟ್ಟು, ರುಪಾಯಿ ಮೌಲ್ಯ ಕುಸಿತ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್- ಅಮೆರಿಕ ಯುದ್ಧ ಸೇರಿದಂತೆ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದುಬಾರಿಯಾಗಿದೆ. ಹೀಗಿದ್ದರೂ, ಪ್ರವಾಸಿಗರಿಗೆ ದೇಶ-ವಿದೇಶಗಳ ಸಂದರ್ಶನ, ಮೋಜು-ಮಸ್ತಿಯ ಸಮೃದ್ಧ ಅನುಭವಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಡಿಗಾಸ್ ಯಾತ್ರಾ ಈ ವಿಶೇಷ ಡಿಸ್ಕೌಂಟ್ ಆಫರ್ ಅನ್ನು ನೀಡುತ್ತಿದೆ. ಸೀಮಿತ ಅವಧಿಗೆ ಲಭ್ಯವಿರುವ ಈ ಕೊಡುಗೆಯನ್ನು ಪ್ರವಾಸಿಗರು ಬಳಸಿಕೊಳ್ಳಬೇಕು,” ಎಂದು ಕೆ. ನಾಗರಾಜ ಅಡಿಗ ಅವರು ತಿಳಿಸಿದ್ದಾರೆ.
ಯಾವೆಲ್ಲ ದೇಶಗಳಿಗೆ ಆಫರ್ ಲಭ್ಯ
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಯುರೋಪ್, ಸಿಂಗಾಪುರ, ಮಲೇಷ್ಯ, ಥಾಯ್ಲೆಂಡ್, ಸೌತ್ ಆಫ್ರಿಕಾ, ವಿಯೆಟ್ನಾಂ, ಕಾಂಬೋಡಿಯಾ, ಬಾಲಿ, ಶ್ರೀಲಂಕಾ, ನೇಪಾಳ-ಮುಕ್ತಿನಾಥ, ಕೈಲಾಸ ಮಾನಸ ಸರೋವರ ಯಾತ್ರಾಗೆ ರಿಯಾಯಿತಿಯ ಪ್ರಯೋಜನವನ್ನು ಪಡೆಯಬಹುದು.

“ಅಡಿಗಾಸ್ ಯಾತ್ರಾ ಈ ಹಿಂದಿನಿಂದಲೂ ಪ್ರವಾಸಿಗರಿಗೆ ಒದಗಿಸುವ ಸೇವೆಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡುವುದಿಲ್ಲ. ಪ್ರವಾಸಿಗರೇ ಪ್ರಭುಗಳು” ಎನ್ನುತ್ತಾರೆ ನಾಗರಾಜ ಅಡಿಗರು. ವಿದೇಶಿ ಪ್ರವಾಸದಲ್ಲಿ ವೈಭವಯುತ ತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ, ಶ್ರೇಷ್ಠ ಮತ್ತು ವೈವಿಧ್ಯಮಯ ಊಟೋಪಚಾರಗಳು, ವಿಶ್ವವಿಖ್ಯಾತ ತಾಣಗಳಲ್ಲಿ ಪ್ರವಾಸಿ ಟಿಕೆಟ್ ದುಬಾರಿಯಾಗಿದ್ದರೂ, ಬಿಡದೆ ಪ್ರವಾಸಿಗರಿಗೆ ಒದಗಿಸಿ ಅದ್ಭುತ ಪ್ರವಾಸದ ಅನುಭವಗಳನ್ನು ಕಟ್ಟಿಕೊಡುವುದರಲ್ಲಿ ಅಡಿಗಾಸ್ ಯಾತ್ರಾ ಮನೆಮಾತಾಗಿದೆ. ಹಾಗಿದ್ದರೆ ಈಗಲೇ ತ್ವರೆ ಮಾಡಿ, ಭಾರಿ ಡಿಸ್ಕೌಂಟ್ ಆಫರ್ ಅನ್ನೂ ನಿಮ್ಮದಾಗಿಸಿ!
ಆಸಕ್ತರು ಹೆಚ್ಚಿನ ಮಾಹಿತಿಗೆ ನೇರವಾಗಿ ನಮ್ಮ ಎಲ್ಲ ಕಚೇರಿಗಳನ್ನು ಅಥವಾ ದೂರವಾಣಿ 080-26616678 / 7022259008 / 9449478944 ಸಂಪರ್ಕಿಸಿ ಅಥವಾ ನಮ್ಮ ವೆಬ್‌ಸೈಟ್ : www. adigasyatra.com ವನ್ನು ಸಂದರ್ಶಿಸಬೇಕೆಂದು ವ್ಯವಸ್ಥಾಪಕಿ ಆಶಾ ಎನ್ ಅಡಿಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
