ಪ್ರಪಂಚ ಸುತ್ತಾಟ

ದುಬೈ ಸುತ್ತಲು ಎಷ್ಟು ದಿನ ಬೇಕು? ಎಷ್ಟು ಖರ್ಚು? ಇಲ್ಲಿದೆ ಕಂಪ್ಲೀಟ್‌ ಮಾಹಿತಿ!

ಬೆಂಗಳೂರು: ವಿದೇಶ ಪ್ರವಾಸದ ಬಗ್ಗೆ ಯೋಚಿಸಿದಾಗ ಹೆಚ್ಚು ಜನರ ಮೊದಲ ಆಯ್ಕೆಗಳಲ್ಲಿ ದುಬೈ ಪ್ರಮುಖವಾಗಿದೆ. ಲಕ್ಷುರಿ ಜೀವನಶೈಲಿ, ಆಧುನಿಕ ಕಟ್ಟಡಗಳು ಮತ್ತು ಅನೇಕ ಆಕರ್ಷಣೆಗಳೊಂದಿಗೆ ದುಬೈ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತದೆ. ಆದರೆ, ‘ಎಷ್ಟು ದಿನ ಹೋಗಬೇಕು? ಖರ್ಚು ಎಷ್ಟು ಬರುತ್ತದೆ?’ ಎಂಬ ಪ್ರಶ್ನೆಗಳು ಇಲ್ಲಿ ಸಾಮಾನ್ಯ. ಅವೆಲ್ಲದಕ್ಕೂ ಉತ್ತರ ಈ ಲೇಖನದಲ್ಲಿದೆ. ಮರುಭೂಮಿಯಲ್ಲಿ ನಿರ್ಮಿಸಲಾದ ಮಾಯಾನಗರಿಯನ್ನು ಸುತ್ತಲು ನೀವು ಕೂಡ ಬಯಸುತ್ತಿದ್ದರೆ, ಈ ಲೇಖನ ಸಂಪೂರ್ಣ ಓದಿ.

ದುಬೈ ನೋಡಲು ಎಷ್ಟು ದಿನ ಬೇಕು?

ಸಾಮಾನ್ಯವಾಗಿ ದುಬೈ ಪ್ರವಾಸಕ್ಕೆ 4 ರಿಂದ 5 ದಿನಗಳು ಸಾಕಾಗುತ್ತವೆ. ಈ ಅವಧಿಯಲ್ಲಿ ಪ್ರಮುಖ ಸ್ಥಳಗಳನ್ನು ಸುಲಭವಾಗಿ ವೀಕ್ಷಿಸಬಹುದು.

👉 ಮೊದಲ ದಿನ: ನಗರ ಸುತ್ತಾಟ, ವಿಶ್ವ ಪ್ರಸಿದ್ಧ Burj Khalifa ವೀಕ್ಷಣೆ
👉 ಎರಡನೇ ದಿನ : ಡೆಸರ್ಟ್ ಸಫಾರಿ ಮತ್ತು ಕ್ಯಾಂಪ್ ಅನುಭವ
👉 ಮೂರನೇ ದಿನ: ದುಬೈ ಮಾಲ್‌ಗಳು ಮತ್ತು ಅಕ್ವೇರಿಯಂ ವೀಕ್ಷಣೆ ಮತ್ತು ಶಾಪಿಂಗ್
👉 ನಾಲ್ಕನೇ ದಿನ: ಮಿರಾಕಲ್‌ ಗಾರ್ಡನ್‌ ಅಥವಾ ಗ್ಲೋಬಲ್‌ ವಿಲೇಜ್‌ ಭೇಟಿ
👉 ಐದನೇ ದಿನ: ಫ್ರೀ ಟೈಮ್‌ನಲ್ಲಿ ಲೋಕಲ್‌ ರೆಸ್ಟೋರೆಂಟ್‌ ಅಥವಾ ಶಾಪಿಂಗ್ ಮಾಡಬಹುದು

ಅಂದಹಾಗೆ ದುಬೈ ನೋಡಲು ಖರ್ಚು ಎಷ್ಟು?

ದುಬೈ ಪ್ರವಾಸದ ಖರ್ಚು ನಿಮ್ಮ ಆಯ್ಕೆಗಳಿಗೆ ಅವಲಂಬಿತವಾಗಿರುತ್ತದೆ. ಸರಾಸರಿ ಖರ್ಚು ಹೀಗಿರಲಿದೆ:

ವಿಮಾನ ಟಿಕೆಟ್ಸ್‌ : ₹25,000 – ₹40,000
ಹೋಟೆಲ್‌ ವೆಚ್ಚ : ₹3,000 – ₹8,000 ಪ್ರತಿ ದಿನ
ಆಹಾರ : ₹1,000 – ₹2,500 ಪ್ರತಿ ದಿನ
ಸ್ಥಳೀಯ ಟ್ರಾವೆಲ್ ಸಲುವಾಗಿ ದಿನಕ್ಕೆ : ₹1,000 – ₹2,000
ಸಫಾರಿ, ಬುರ್ಜ್‌ ಖಲೀಫಾ ಭೇಟಿಗೆ : ₹5,000 – ₹10,000

👉 ಒಟ್ಟು 4–5 ದಿನಗಳಿಗೆ ₹70,000 ರಿಂದ ₹1.2 ಲಕ್ಷವರೆಗೆ ಖರ್ಚಾಗಬಹುದು.

ಪ್ರವಾಸದ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿಗಳು

  • ಪ್ರವಾಸದ ಮೊದಲು ಬುಕ್ಕಿಂಗ್ ಮಾಡಿದರೆ ಖರ್ಚು ಕಡಿಮೆ.
  • ಬೇಸಿಗೆಯಲ್ಲಿ ದುಬೈ ಪ್ರವಾಸ ಬೇಡ, ಚಳಿಗಾಲದಲ್ಲಿ ಉತ್ತಮವಾಗಿರುತ್ತದೆ.
  • ಕಾಂಬೊ ಪ್ಯಾಕೇಜ್ ತೆಗೆದುಕೊಂಡರೆ ಹಣ ಉಳಿತಾಯ ಆಗುತ್ತದೆ.

ಒಟ್ಟಾರೆ ದುಬೈ ಪ್ರವಾಸ ಕಡಿಮೆ ದಿನಗಳಲ್ಲಿ ಲಕ್ಷುರಿ ಅನುಭವ ನೀಡುವ ಅತ್ಯುತ್ತಮ ತಾಣವಾಗಿದೆ. ಸರಿಯಾದ ಯೋಜನೆಯೊಂದಿಗೆ ನಿಮ್ಮ ಬಜೆಟ್‌ಗೆ ತಕ್ಕಂತೆ ಸುಂದರ ಪ್ರವಾಸವನ್ನು ಅನುಭವಿಸಬಹುದು.

ಸುಖಕರ ದುಬೈ ಪ್ರವಾಸ ಪ್ಯಾಕೇಜ್‌ಗಳ ವಿವರಗಳಿಗೆ ಸಂಪರ್ಕಿಸಿ, ಮೊಬೈಲ್-‌ 93641 04366/ 70222 59007/ 70222 59008. ವೆಬ್‌ ಸೈಟ್‌ https://www.adigasyatra.com

Related posts

ಸಿಂಗಾಪುರ, ಥಾಯ್ಲೆಂಡ್‌-ಮಲೇಷ್ಯಾ ಟ್ರಿಪ್‌: ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್‌!

Adigas Yatra

ಜಪಾನ್‌ ಪ್ರವಾಸಕ್ಕೆ ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಥಳಗಳನ್ನು ಮಿಸ್‌ ಮಾಡ್ಬೇಡಿ!

Adigas Yatra

ಬ್ಯಾಂಕಾಕ್‌ನಲ್ಲಿ ನೋಡಲೇಬೇಕಾದ ದೇವಾಲಯಗಳು ಮತ್ತು ಪ್ರವಾಸಿ ಸ್ಥಳಗಳು ಇಲ್ಲಿವೆ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page