ಅಡಿಗಾಸ್ ಯಾತ್ರಾ

ADIGAS YATRA: ಗುಜರಾತ್‌ನ “ರೋಡ್‌ ಆಫ್‌ ಹೆವೆನ್ಸ್‌ʼ ನೀವೂ ವೀಕ್ಷಿಸಿ! ರಣ್‌ ಆಫ್‌ ಕಛ್‌ ಪ್ರವಾಸಕ್ಕೆ ಕೆಲವೇ ಸೀಟ್‌ ಲಭ್ಯ!

ಬೆಂಗಳೂರು: ಗುಜರಾತ್‌ನ ರಣ್‌ ಆಫ್‌ ಕಛ್‌ ಪ್ರವಾಸದ ಅದ್ಭುತ ಅನುಭವವನ್ನು ನಿಮ್ಮದಾಗಿಸಲು ಈಗ ಸುವರ್ಣಾವಕಾಶ. ಅಡಿಗಾಸ್‌ ಯಾತ್ರಾದ ಸ್ಥಾಪಕರಾದ ನಾಗರಾಜ್‌ ಅಡಿಗ ಅವರೀಗ ರಣ್‌ ಆಫ್‌ ಕಛ್‌ ಪ್ರವಾಸದಲ್ಲಿದ್ದು, ಅಲ್ಲಿಂದಲೇ ಈ ಪ್ರವಾಸದ ವಿವರಗಳನ್ನು ನೀಡಿದ್ದಾರೆ.
ರಣ್‌ ಆಫ್‌ ಕಛ್‌ ಗುಜರಾತ್‌ ಪ್ರವಾಸ ಕಾರ್ಯಕ್ರಮವು ಫೆಬ್ರವರಿ ಕೊನೆಯತನಕ ಲಭ್ಯವಿರುತ್ತದೆ. ಬಳಿಕ ಮುಂದಿನ ವರ್ಷ ನವೆಂಬರ್‌ ತನಕ ಕಾಯಬೇಕಾಗುತ್ತದೆ. ಆದ್ದರಿಂದ ತಕ್ಷಣ ಈ ಪ್ರವಾಸದ ಸೀಟುಗಳನ್ನು ಬುಕ್ ಮಾಡುವುದು ಒಳಿತು.

ಈ ಪ್ರವಾಸದಲ್ಲಿ, ಕೇವಾಡಿಯಾದಲ್ಲಿರುವ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ವಿಶ್ವದ ಅತಿ ದೊಡ್ಡ ಏಕತಾ ಪ್ರತಿಮೆಯನ್ನು ವೀಕ್ಷಿಸಬಹುದು. ಭಾವನಗರದ ಬಳಿ ಇರುವ ನಿಷ್ಕಳಂಕ ಮಹಾದೇವ ದೇವಾಲಯವನ್ನು ಸಂದರ್ಶಿಸಬಹುದು. ಗೀರ್‌ ನ ಅಭಯಾರಣ್ಯದಲ್ಲಿ ಸಿಂಹಗಳನ್ನು ವೀಕ್ಷಿಸಬಹುದು. ಸೋಮನಾಥ ಹಾಗೂ ನಾಗೇಶ್ವರ ಜ್ಯೋತಿರ್ಲಿಂಗವನ್ನು ನೋಡಬಹುದು.

ಅದೇ ರೀತಿ ದ್ವಾರಕೆಯಲ್ಲಿ ರುಕ್ಮಿಣಿ ಮಂದಿರ, ದ್ವಾರಕಾಧೀಶ ಮಂದಿರ, ಬೇಟ್‌ ದ್ವಾರಕಾ ವೀಕ್ಷಿಸಬಹುದು. ಭುಜ್‌ ಮ್ಯೂಸಿಯಂ, ಮಾಂಡವಿ ಬೀಚ್‌, ನಾರಾಯಣ ಸರೋವರ, ಮಾತಾ ನಾಮದ್‌ ದೇವಸ್ಥಾನ ಮತ್ತು ಕೋಟೇಶ್ವರವನ್ನು ಸಂದರ್ಶಿಸಬಹುದು.

ಎಲ್ಲೆಲ್ಲೂ ಬಿಳಿ ಉಪ್ಪಿನ ರಾಶಿ! ನಿಸರ್ಗದ ಈ ಚಮತ್ಕಾರವನ್ನು ರಣ್‌ ಆಫ್‌ ಕಛ್‌ನಲ್ಲಿ ವೀಕ್ಷಿಸಬಹುದು. ಭಾರತದ ಅತಿ ದೊಡ್ಡ ಉಪ್ಪಿನ ಮರುಭೂಮಿ ಎಂದು ಈ ಸಮುದ್ರ ಭಾಗವನ್ನು ಕರೆಯುತ್ತಾರೆ.

ರೋಡ್‌ ಟು ಹೆವೆನ್ಸ್‌ ವಿಶೇಷ ಏನು ಗೊತ್ತಾ?

ಪ್ರವಾಸಿಗರಿಗೆ ಗುಜರಾತಿನ ಕಸ್ಟಮೈಸ್ಡ್‌ ಪ್ರವಾಸದ ವ್ಯವಸ್ಥೆಯನ್ನೂ ಅಡಿಗಾಸ್‌ ಯಾತ್ರಾದಲ್ಲಿ ಆಯೋಜಿಸಲಾಗಿದೆ. ಕಸ್ಟಮೈಸ್ಡ್‌ ಟೂರ್‌ನಲ್ಲಿ ನಿಮಗಿಷ್ಟವಾದ ನಿರ್ದಿಷ್ಟ ಸ್ಥಳಗಳನ್ನು ನೀವು ಆಯ್ಕೆ ಮಾಡಬಹುದು. ಅದರಲ್ಲೂ ರಣ್‌ ಆಫ್‌ ಕಛ್‌ನಲ್ಲಿರುವ ಪ್ರಾಚೀನ ಧೊಲೆವಿರಾ ಸ್ಥಳವನ್ನು ನೋಡಬಹುದು.

ಇದು ಹರಪ್ಪ ಸಂಸ್ಕೃತಿಯ ತಾಣ. ಇಲ್ಲಿನ ಅತ್ಯಂತ ಸುಂದರವಾದ ರಸ್ತೆಯನ್ನು ರೋಡ್‌ ಟು ಹೆವೆನ್ಸ್‌ ಎಂದು ಕರೆಯುತ್ತಾರೆ. ಇಲ್ಲಿ 30 ಕಿಲೋಮೀಟರ್‌ ಉದ್ದದ ರಸ್ತೆಯ ಎರಡೂ ಬದಿಯಲ್ಲಿ ಸಮುದ್ರದ ನೀರಿನ ಅಲೆಗಳನ್ನು ಆಸ್ವಾದಿಸಬಹುದು. ಅಲ್ಲಿ ಹಾರಾಟ ನಡೆಸುತ್ತಿರುವ ಪಕ್ಷಿಗಳ ವೀಕ್ಷಣೆಯೂ ಮನಮೋಹಕವಾಗಿರುತ್ತದೆ. ಇದು ಯುನೆಸ್ಕೊದ ವಿಶ್ವ ಪರಂಪರೆಯ ತಾಣವಾಗಿದ್ದು, ಪ್ರವಾಸಿಗರಿಗೆ ಅದ್ಭುತ, ಅವಿಸ್ಮರಣೀಯ ಛಾಯಾಗ್ರಹಣಕ್ಕೂ ಅವಕಾಶವಿದೆ. ಇದು ಅಂಟಾರ್ಕ್‌‌‌ಟಿಕಾದ ಹಿಮದ ಸಾಗರದಂತೆ ಕಾಣುತ್ತದೆ. ಆದರೆ ಇದು ಹಿಮವಲ್ಲ, ಘನೀಕೃತ ಉಪ್ಪಿನ ಸಮುದ್ರ!

ನೀವು ಈ ಅಪೂರ್ವ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸಿದರೆ ದಯವಿಟ್ಟು ಸಂಪರ್ಕಿಸಿ: 7022259008, 9449478944

Related posts

ವಿದೇಶ ಸುತ್ತಲು ಸಾಧ್ಯವಾಗದಿದ್ರೆ ಸ್ವದೇಶ ನೋಡಿ: ಪ್ರವಾಸಿಗರಿಗೆ ಸೂಪರ್ ಆಫರ್‌ ಕೊಟ್ಟ ನಾಗರಾಜ್‌ ಅಡಿಗ

Adigas Yatra

Adigas Yatra: ನಾಡಿನ ಮನೆಮಾತು ಅಡಿಗಾಸ್‌ ಯಾತ್ರಾ, 32 ವರ್ಷಗಳ ಯಶಸ್ವಿ ಪಯಣ!

Adigas Yatra

Hiring: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page