ಅಡಿಗಾಸ್ ಯಾತ್ರಾ

ಟೂರ್‌ ಆಪರೇಟರ್‌ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು: ವಿಶ್ವೇಶ್ವರ ಭಟ್‌

ಬೆಂಗಳೂರು: ಪ್ರವಾಸವು ಓದಿಗಿಂತ ಮಿಗಿಲಾದ ಅನುಭವವನ್ನು ಕೊಡುತ್ತದೆ. ಆದರೆ ಟೂರ್‌ ಆಪರೇಟರ್‌ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು. ಸೂಕ್ತವಾದ, ಆಸಕ್ತಿಕರ ಮಾಹಿತಿಯನ್ನೂ ಕೊಡಬೇಕು. ಟೂರ್‌ ಆಪರೇಟರ್‌ ಅನ್ನೋದಕ್ಕಿಂತ ಟೂರ್‌ ಫೆಸಿಲಿಟೇಟರ್‌ ಎನ್ನುವುದು ಸೂಕ್ತ. ಆತ ಕೇವಲ ಪ್ರವಾಸವನ್ನು ನಿರ್ವಹಿಸುವುದಕ್ಕೆ ಸೀಮಿತವಾಗಿರದೆ, ಪ್ರವಾಸದ ಸಂದರ್ಭ ಉತ್ತಮ ಮಾರ್ಗದರ್ಶಕ, ಸ್ನೇಹಿತ ಎಲ್ಲವೂ ಆಗಿರಬೇಕಾಗುತ್ತದೆ. ಪ್ರವಾಸಿಗರಲ್ಲಿ ಅವರು ಊಹಿಸದಿರುವ ಸ್ಥಳಗಳನ್ನು ತೋರಿಸುವುದು, ಅವುಗಳ ವಿಶೇಷತೆಯನ್ನು ತಿಳಿಸುವುದು, ಪ್ರವಾಸಿತನದ ಪ್ರಜ್ಞೆಯನ್ನು ಮೂಡಿಸುವುದು ಟೂರ್‌ ಆಪರೇಟರ್‌ಗಳ ಧ್ಯೇಯವಾಗಿರಬೇಕು ಎಂದು ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ತಿಳಿಸಿದರು.

ಅಡಿಗಾಸ್‌ ಯಾತ್ರಾ ಟ್ರಾವೆಲ್ ಸಂಸ್ಥೆಯ 32ನೇ ವಾರ್ಷಿಕೋತ್ಸವ, ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರವಾಸಿ ಸ್ಥಳಗಳಲ್ಲಿ ಜನ ದಟ್ಟಣೆ

ಇತ್ತೀಚಿನ ವರ್ಷಗಳಲ್ಲಿ ಓವರ್‌ ಟೂರಿಸಂ ಕಾಣಿಸುತ್ತಿದೆ. ಯಾವ ಊರಿನಲ್ಲೂಜನ ದಟ್ಟಣೆ ಕಾಣಿಸುತ್ತಿದೆ. ಆದರೆ ಟೂರ್‌ ಆಪರೇಟರ್‌ ಪ್ರವಾಸಿಗರಿಗೆ ಏಕಾಂತ ಒದಗಿಸುವ, ಪ್ರವಾಸಿಗರ ಹೊಣೆಗಾರಿಕೆ ಹೆಚ್ಚಿಸುವ ಕೆಲಸ ಮಾಡಬೇಕು. ಪ್ರವಾಸಿಗರ ಜ್ಞಾನ , ಮಾಹಿತಿ ಹೆಚ್ಚಿಸಬೇಕು. ಪ್ರವಾಸಿಗರು ಯೋಚನೆಯೇ ಮಾಡಿರದ ತಾಣಗಳ ಪರಿಚಯ ಮಾಡಿಕೊಡಬೇಕು. ಪ್ರವಾಸಿಗರೂ ನೋಡಿದ ಸ್ಥಳಗಳ ಟಿಪ್ಪಣಿ, ನೋಟ್ಸ್‌ ಮಾಡಿಕೊಳ್ಳಬೇಕು.

ನೀವು ಜೋಗ್‌ ಜಲಪಾತ, ನಯಾಗರಾ ಜಲಪಾತ ನೋಡಲು ಹೋದಾಗ ಒಂದೇ ಫೊಟೊವನ್ನೂ ಕ್ಲಿಕ್ಕಿಸದೆ ಜಲಪಾತವನ್ನು ವೀಕ್ಷಿಸಿ ಬಂದರೆ ನಿಜವಾದ ಪ್ರವಾಸವಾಗುತ್ತದೆ. ನಯಾಗರ ನೋಡಲು ಹೋದರೂ, ಮೊಬೈಲ್‌ ನಲ್ಲಿ ಫೊಟೊಗಳನ್ನು ಕ್ಲಿಕ್ಕಿಸುತ್ತಾ ಇರುವವರನ್ನು ಕಾಣಬಹುದು. ಅದು ನಿಜವಾದ ಪ್ರವಾಸದ ಅನುಭೂತಿಯನ್ನು ಕಟ್ಟಿಕೊಡಲಾರದು. ಎರಡನೆಯದಾಗಿ ಪ್ರವಾಸಕ್ಕೆ ಹೋದಾಗ ನಿಮಗೆ ನಿಮ್ಮೂರಿನಲ್ಲಿ, ನಿಮ್ಮ ಮನೆಯಲ್ಲಿ ಸಿಗುವ ಆಹಾರವೇ ಸಿಗಬೇಕು ಎಂದು ಭಾವಿಸಬಾರದು.

ಬೇರೆ ಪ್ರದೇಶಕ್ಕೆ ತೆರಳಿದಾಗ ಅಲ್ಲಿನ ಆಹಾರವನ್ನು ಸೇವಿಸಿದರೆ ಮಾತ್ರ ಆ ಊರಿನ ನೈಜ ಪರಿಚಯವಾದಂತಾಗುತ್ತದೆ. ಆ ಪ್ರದೇಶ ನಿಮ್ಮನ್ನು ಬಿಟ್ಟುಕೊಂಡಂತಾಗುತ್ತದೆ. ಲೋಕಲ್‌ ಫುಡ್‌ ಸೇವಿಸಲು ಹಿಂಜರಿಕೆ ಬೇಡ, ರೊಟ್ಟಿ ಸಿಕ್ಕಿಲ್ಲ, ಪಲ್ಯ ಸಿಗಲಿಲ್ಲ ಎಂದು ಬೇಸರಪಟ್ಟು ಕೊಳ್ಳಬಾರದು, ಆ ರೀತಿಯ ಸಹನೆಯ ಮನಸ್ಥಿತಿ ಬೆಳೆಯಿಸಿಕೊಳ್ಳುವುದು ಮುಖ್ಯ ವಿಶ್ವೇಶ್ವರ ಭಟ್‌ ಅವರು ಪ್ರವಾಸಿಗರಿಗೂ ಕಿವಿ ಮಾತು ಹೇಳಿದರು.

ನಾಗರಾಜ್‌ ಅಡಿಗ ಅವರು ಸ್ವತಃ ಉತ್ತಮ ಪ್ರವಾಸಿಗರು. ಹೀಗಾಗಿ ಅವರಿಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಟೂರ್‌ ಪ್ರೋಗ್ರಾಮ್‌ ಗಳನ್ನು ಮಾಡಿಸಲು ಸಾದ್ಯವಾಗಿದೆ. ಪ್ರವಾಸೋದ್ಯಮದ ಬಗ್ಗೆ ಅವರಿಗೆ ಇರುವ ಅಪರಿಮಿತ ಆಸಕ್ತಿ ದೊಡ್ಡದು. ವಿಶ್ವವಾಣಿ ಪತ್ರಿಕೆಯ ವತಿಯಿಂದ ಆಯೋಜಿಸಿದ್ದ ಪ್ರವಾಸಿ ಕಾರ್ಯಕ್ರಮಗಳಲ್ಲಿಯೂ ಅಡಿಗರು ಆಸಕ್ತಿಯಿಂದ ಭಾಗವಹಿಸಿದ್ದರು. ಇದು ಅವರಲ್ಲಿನ ಕಲಿಕೆಯ ಆಸಕ್ತಿಯನ್ನು ಬಿಂಬಿಸುತ್ತದೆ ಎಂದು ಹೇಳಿದರು.

ಒಳ್ಳೆಯ ಪ್ರವಾಸಿಗ ಮಾತ್ರ ಉತ್ತಮ ಟೂರ್‌ ಆಪರೇಟರ್‌ ಆಗಬಲ್ಲ. ಪ್ರವಾಸ ಎಂದರೆ ಊರಿಗೆ ದೂರವಾಗುವುದದಲ್ಲ, ಆ ಊರಿಗೆ ಹತ್ತಿರವಾಗುವುದು. ಆಗ ಮಾತ್ರ ನೀವು ಒಳ್ಳೆಯ ಪ್ರವಾಸಿಗರಾಗುತ್ತೀರಿ. ಟೂರ್‌ ಆಪರೇಟರ್‌ ಅನ್ನೋದೇ ಕ್ರೂಡ್‌ ಆಗಬಹುದು. ನಿಜವಾದ ಟೂರ್‌ ಆಪರೇಟರ್‌ ಎಂದರೆ ಪ್ರವಾಸಿಗರ ಟೂರ್‌ ಗೈಡ್‌, ಫೆಸಿಲಿಟೇಟರ್‌ ಕೂಡ ಆಗಿರುತ್ತಾರೆ. ಮನೆಯ ಯಜಮಾನ ಇದ್ದ ಹಾಗೆ ಎಲ್ಲರ ಯೋಗಕ್ಷೇಮಗಳನ್ನು ವಿಚಾರಿಸುತ್ತಾರೆ ಎಂದು ವಿವರಿಸಿದರು.

ಟೂರ್‌ ಗೈಡ್‌ ಅಂದ್ರೆ ಮಾಹಿತಿ ಕೋಶ: ಒಬ್ಬ ಟೂರ್‌ ಗೈಡ್‌ ಎಂದರೆ ಸಕಲ ಮಾಹಿತಿಗಳ ಕೋಶವಾಗಿರಬೇಕು. 14 ವರ್ಷಗಳ ಹಿಂದೆ ರವಾಂಡಾ ಪ್ರವಾಸಕ್ಕೆ ಹೋಗಿದ್ದಾಗ ಟೂರ್‌ ಗೈಡ್‌ ಅದ್ಭುತವಾದ ಗೊರಿಲ್ಲಾ ಟ್ರಕ್ಕಿಂಗ್‌ ಮಾಡಿಸಿದ್ದ. ಬೆಳಗ್ಗೆ 4 ಗಂಟೆಯಿಂದಲೇ ಆರಂಭವಾಗುವ ಪ್ರವಾಸವದು. ಆತ ಗೊರಿಲ್ಲಾಗಳ ಸಂಜ್ಞೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ. ಗೊರಿಲ್ಲಾ ಕುಟುಂಬಗಳ ಸಮಗ್ರ ಮಾಹಿತಿ ಆತನಲ್ಲಿತ್ತು.

ನಿಜವಾದ ಗೈಡ್‌ ಮಾಹಿತಿಪೂರ್ಣನಾಗಿರಬೇಕು. ಉದಾಹರಣೆಗೆ ನೀವು ತಾಜ್‌ ಮಹಲ್‌ಗೆ ಹೋಗಿದ್ದೀರಿ ಎಂದು ಭಾವಿಸಿ. ಟೂರ್‌ ಗೈಡ್‌ ತಾಜ್‌ ಮಹಲ್‌ ಕಟ್ಟಿದ ಶಿಲ್ಪಿಯ ಮನೆ ಇಲ್ಲೇ ಸಮೀಪ ಇದೆ, ನೋಡೋಣ ಬನ್ನಿ ಎಂದು ಕರೆದು ತೋರಿಸಿದರೆ ಪ್ರವಾಸಿಗರಿಗೆ ಆ ಪ್ರವಾಸ ಅನಿರೀಕ್ಷಿತ ಅಚ್ಚರಿಯ ನೆನಪಾಗಿ ಉಳಿಯಬಲ್ಲುದು. ಈ ರೀತಿ ಟೂರ್‌ ಗೈಡ್‌ಗಳು ವಿಸ್ಮಯಕಾರಿ ಮಾಹಿತಿಗಳ ಕೋಶವಾಗಿರಬೇಕು ಎಂದು ವಿವರಿಸಿದರು.

ಐಫೆಲ್‌ ಟವರ್‌ ಕಥೆ, ಪೋಯೆಟ್ರಿ ಬ್ರೋಥೆಲ್!‌

ಪ್ರವಾಸದಿಂದ ತಿಳಿಯುವ ರೋಚಕ, ಸ್ವಶರಸ್ಯಕರ ಸಂಗತಿಗಳ ಬಗ್ಗೆ ಕೆಲವು ಉದಾಹರಣೆಗಳನ್ನೂ ವಿಶ್ವೇಶ್ವರ ಭಟ್‌ ಅವರು ನೀಡಿದರು. ಉದಾಹರಣೆಗೆ ಪ್ಯಾರಿಸ್‌ನಲ್ಲಿ ಐಫೆಲ್‌ ಟವರ್‌ ವಿಶ್ವವಿಖ್ಯಾತ. ಆದರೆ ಈ ಗೋಪುರದ ತುದಿಯಲ್ಲಿ ಪ್ಯಾರಿಸ್‌ನ ನೋಟ ಮಾತ್ರವಲ್ಲದೆ, ಐಫೆಲ್‌ ಜೀವನಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಕಾಣಬಹುದು. ಐಫೆಲ್‌ ಟವರ್‌ ರಚನೆಯಾದಾಗ ತೀವ್ರ ಟೀಕೆಗಳೂ ಬಂದಿತ್ತು. ಇದು ವೇಸ್ಟ್‌, ಹೆಚ್ಚು ಕಾಲ ಇರದು ಎಂದು ಹಲವರು ಟೀಕಿಸಿದ್ದರು. ಆದರೆ ನೂರಾರು ವರ್ಷಗಳಿಂದ ಐಫೆಲ್‌ ಟವರ್‌ ಐತಿಹಾಸಿಕ ಸಂಕೇತವಾಗಿ ಉಳಿದಿದೆ.

ಇಂಥ ಸಂಗತಿಗಳನ್ನು ಪ್ರವಾಸಿಗರಿಗೆ ಟೂರ್‌ ಆಪರೇಟರ್‌ ತಿಳಿಸಬೇಕು. ಪ್ಯಾರಿಸ್‌ನಲ್ಲಿ ಪೋಯೆಟ್ರಿ ಬ್ರೋಥೆಲ್‌ ಇದೆ. ಆದರೆ ಇದನ್ನು ಅಪಾರ್ಥ ಮಾಡಿಕೊಳ್ಳಬೇಕಿಲ್ಲ. ಇಲ್ಲಿ ಕಾಲ್‌ ಗರ್ಲ್ಸ್‌ ಬಂದು ಖ್ಯಾತ ಕವಿಗಳ ಕವನಗಳನ್ನು ಓದುತ್ತಾರೆ. ಶೆಲ್ಲಿ, ಕೀಟ್ಸ್‌ ಮೊದಲಾದ ಖ್ಯಾತ ಕವಿಗಳ ಕವನಗಳನ್ನು ಒಂದೆರಡು ಗಂಟೆ ಕಾಲ ಓದುತ್ತಾರೆ. ಪ್ರವಾಸಿಗರಿಗೆ ಇದು ಸ್ವಾರಸ್ಯಕರ, ಅಚ್ಚರಿಯ ಅನುಭವ ಕೊಡಬಲ್ಲುದು ಎಂದರು.

ಜಪಾನಿನಲ್ಲಿ ಪ್ರವಾಸಿಗರನ್ನು ಆದರದಿಂದ ಕಾಣುತ್ತಾರೆ. ಯಾರಾದರೂ ದಾರಿ ಗೊತ್ತಿಲ್ಲ ಎಂದರೆ, ಅವರನ್ನು ಗಮ್ಯದ ತನಕ ಬಿಟ್ಟು ಬರುವ ಉದಾರತೆ ಅವರಲ್ಲಿದೆ. ನಮ್ಮಲ್ಲೂ ಇಂಥ ಉತ್ತಮ ಪ್ರವಾಸಿ ಸಂಸ್ಕೃತಿಗೆ ಉತ್ತೇಜನ ನೀಡಬೇಕು ಎಂದು ವಿವರಿಸಿದರು.

ಅಡಿಗಾಸ್‌ ಯಾತ್ರಾದ ಪ್ರವಾಸ ಕಾರ್ಯಕ್ರಮಗಳಿಗೆ ಸಂಪರ್ಕಿಸಿ: Contact: 9449478944 / 7022259008 / 080-26616678.

Related posts

Karnataka Budget 2026: ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದಕ್ಕೆ ಅಡಿಗಾಸ್‌ ಯಾತ್ರಾ ಸ್ವಾಗತ

Adigas Yatra

ಕೇವಲ 4 ಗಂಟೆಯಲ್ಲೇ ಮಧುರೈ-ಕನ್ಯಾಕುಮಾರಿ-ರಾಮೇಶ್ವರಂ ಟೂರ್ ಫೈನಲ್‌, ಅಡಿಗಾಸ್‌ ಯಾತ್ರಾಗೆ ಪ್ರವಾಸಿಗರು ಫಿದಾ!

Adigas Yatra

ADIGAS YATRA: ಗುಜರಾತ್‌ನ “ರೋಡ್‌ ಆಫ್‌ ಹೆವೆನ್ಸ್‌ʼ ನೀವೂ ವೀಕ್ಷಿಸಿ! ರಣ್‌ ಆಫ್‌ ಕಛ್‌ ಪ್ರವಾಸಕ್ಕೆ ಕೆಲವೇ ಸೀಟ್‌ ಲಭ್ಯ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page