ಪ್ರಪಂಚ ಸುತ್ತಾಟ

ಸ್ವಿಟ್ಜರ್‌‌ಲೆಂಡ್ ಪ್ರವಾಸಕ್ಕೆ ಪ್ಲಾನ್‌ ಮಾಡಿದ್ದೀರಾ? ಹಾಗಾದ್ರೆ ಈ ಎಲ್ಲಾ ಸ್ಥಳಗಳ ಬಗ್ಗೆ ಗೊತ್ತಿರಲಿ!

ಬೆಂಗಳೂರು: ಸ್ವಿಟ್ಜರ್‌‌ಲೆಂಡ್ ಫೋಟೋಗ್ರಾಫರ್‌ಗಳಿಗೆ ಕನಸಿನ ತಾಣ. ಅಪ್ಸರೆಯರು ಕಥೆಯಿಂದ ಹೊರಬಂದಂತಿರುವ ಮನಮೋಹಕ ದೃಶ್ಯಗಳು ಇಲ್ಲಿ ಎಲ್ಲೆಂದರಲ್ಲಿ ಕಾಣಿಸುತ್ತವೆ. ಆಲ್ಪ್ಸ್ ಪರ್ವತ ಶ್ರೇಣಿ, ಸುಂದರ ಕಣಿವೆಗಳು, ಮನಮೋಹಕ ಸರೋವರಗಳಿಂದ ಹಿಡಿದು ಮಧ್ಯಕಾಲಿನ ಐತಿಹಾಸಿಕ ನಗರಗಳವರೆಗೆ ಎಲ್ಲವೂ ಇನ್‌ಸ್ಟಾಗ್ರಾಂಗೆ ಹೇಳಿ ಮಾಡಿಸಿದಂತಹ ಸ್ಥಳಗಳೇ.

ನೀವು ಹೊಸ ಫೋಟೋಗ್ರಾಫರ್ ಆಗಿರಲಿ ಅಥವಾ ವೃತ್ತಿಪರರೇ ಆಗಿರಲಿ ಸ್ವಿಟ್ಜರ್‌‌ಲೆಂಡ್‌ನ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಸ್ಮಾರಕಗಳು ಮತ್ತು ಮನಮೋಹಕ ನೋಟಗಳು ರಮಣೀಯ ದೃಶ್ಯಗಳ ಹಬ್ಬದಂತೆ ಕಾಣಿಸುತ್ತವೆ. ಈ ಸುಂದರ ದೇಶದ ಪ್ರತಿಯೊಂದು ಮೂಲೆ ಪ್ರಕೃತಿಯ ವೈಭವ ಮತ್ತು ಮಾನವ ಕೌಶಲ್ಯವನ್ನು ಸಂಭ್ರಮಿಸುತ್ತದೆ. ನಿಮ್ಮ ಪ್ರವಾಸವನ್ನು ಮರೆಯಲಾಗದ ಪ್ರಯಾಣವಾಗಿಸಲು ಇಲ್ಲಿವೆ ಸ್ವಿಟ್ಜರ್‌‌ಲೆಂಡ್‌ನ ಟಾಪ್ 10 ಸ್ಥಳಗಳು.

ಲೌಟರ್‌ಬ್ರುನ್ನೆನ್ ಕಣಿವೆ

ಸ್ವಿಟ್ಜರ್‌‌ಲೆಂಡ್‌ನ ಲೌಟರ್‌ಬ್ರುನ್ನೆನ್ ಕಣಿವೆ ಅಕ್ಷರಶಃ ಸ್ವರ್ಗದಂತೆ ಕಾಣುತ್ತದೆ. ಬರ್ನೀಸ್ ಆಲ್ಪ್ಸ್‌ನಲ್ಲಿ ಇರುವ ಈ ಕಣಿವೆ ಎತ್ತರದ ಬಂಡೆಗಳು, ಹಸಿರು ಮೆದಾನಗಳು ಮತ್ತು 72 ಜಲಪಾತಗಳಿಗೆ ಪ್ರಸಿದ್ಧ. ಯುರೋಪಿನ ಅತಿ ಎತ್ತರದಿಂದ ಬೀಳುವ ಜಲಪಾತಗಳಲ್ಲಿ ಒಂದಾದ ಸ್ಟೌಬಾಕ್ ಫಾಲ್ಸ್ ಇಲ್ಲಿಯ ವಿಶೇಷ ಆಕರ್ಷಣೆ. ಹಿಮದಿಂದಾವರಿಸಿದ ಶಿಖರಗಳೊಂದಿಗೆ ಹಸಿರು ಪರಿಸರವು ಸ್ವಿಟ್ಜರ್‌‌ಲೆಂಡ್‌ನ ಅಚ್ಚುಮೆಚ್ಚಿನ ನೈಸರ್ಗಿಕ ಸೌಂದರ್ಯವನ್ನು ತೋರಿಸುತ್ತದೆ. ಲೌಟರ್‌ಬ್ರುನ್ನೆನ್ ಹಳ್ಳಿ, ವೆಂಗೆನ್ (ಕಾರ್ ರಹಿತ ಗ್ರಾಮ), ಮುರೆನ್, ಸ್ಟೆಚೆಲ್‌ಬರ್ಗ್ ಮತ್ತು ಗಿಮ್ಮೆಲ್ವಾಲ್ಡ್ ಇಲ್ಲಿ ಭೇಟಿ ನೀಡಬೇಕಾದ ಸ್ಥಳಗಳಗಳಾಗಿದ್ದು, ಪ್ರತಿಯೊಂದು ಹಳ್ಳಿಯೂ ವಿಭಿನ್ನ ಅನುಭವವನ್ನು ನೀಡುತ್ತದೆ.

ಇಲ್ಲಿ ತಲುಪುವುದು ಹೇಗೆ?

ಜ್ಯೂರಿಕ್ ವಿಮಾನದಲ್ಲಿ ತೆರಳಿ ಅಲ್ಲಿಂದ ರೈಲಿನಲ್ಲಿ ಇಂಟರ್‌ಲಾಕನ್ ಒಸ್ಟ್‌ಗೆ ಬರಬೇಕು, ಅಲ್ಲಿಂದ ರೈಲನ್ನು ಬದಲಿಸಿ ನೇರವಾಗಿ ಲೌಟರ್‌ಬ್ರುನ್ನೆನ್ ತಲುಪಬಹುದಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಲು ಮೇನಿಂದ ಸೆಪ್ಟೆಂಬರ್‌ವರೆಗೆ ಸೂಕ್ತ ಸಮಯವಾಗಿರುತ್ತದೆ.

ಅದ್ಭುತ ಜ್ಯೂರಿಕ್ ನಗರ

ಜ್ಯೂರಿಕ್ ಪುರಾತನ ಮತ್ತು ಆಧುನಿಕತೆಯನ್ನೊಳಗೊಂಡ ಅದ್ಭುತ ನಗರ. ಕಲ್ಲು ಬೀದಿಗಳಿರುವ ಹಳೆಯ ಪಟ್ಟಣ. ಲಿಮ್ಮಾಟ್ ನದಿಯ ರಾತ್ರಿ ಪ್ರತಿಬಿಂಬಗಳು ಮತ್ತು ಗ್ರೋಸ್ಮುನ್‌ಸ್ಟರ್ ಚರ್ಚ್ ಇಲ್ಲಿಯ ಪ್ರಮುಖ ಆಕರ್ಷಣೆಗಳಾಗಿವೆ. ಜ್ಯೂರಿಕ್-ವೆಸ್ಟ್ ಪ್ರದೇಶವು ಆಧುನಿಕ ಕಲಾ ದೃಶ್ಯಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಹಳೆಯ ಪಟ್ಟಣ, ಬಾನ್‌ಹೋಫ್‌ಸ್ಟ್ರಾಸ್, ಜ್ಯೂರಿಕ್ ಸರೋವರ, ಲಿಂಡೆನ್‌ಹೋಫ್, ಕುನ್ಸ್‌ಟ್ಹೌಸ್ ಮ್ಯೂಸಿಯಂ ಮುಂತಾದ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. ಮೇನಿಂದ ಸೆಪ್ಟೆಂಬರ್‌ವರೆಗೆ ಜ್ಯೂರಿಕ್‌ಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಅಂದಹಾಗೆ ದೆಹಲಿಯಿಂದ ಜ್ಯೂರಿಕ್‌ಗೆ ನೇರ ವಿಮಾನಗಳು ಲಭ್ಯವಿದೆ.

ಲೇಕ್ ಲ್ಯೂಸೇನ್

ಪರ್ವತಗಳಿಂದ ಆವರಿಸಲ್ಪಟ್ಟಿರುವ ಲೇಕ್ ಲ್ಯೂಸೇನ್ ಸ್ವಿಟ್ಜರ್‌‌ಲೆಂಡ್‌ನ ಅತಿ ಸುಂದರ ಸರೋವರಗಳಲ್ಲಿ ಒಂದು. ದಿನದ ಬೆಳಕಿನೊಂದಿಗೆ ನೀರಿನ ಬಣ್ಣ ಬದಲಾಗುತ್ತಾ ಕಣ್ಣಿಗೆ ಮುದ ನೀಡುತ್ತದೆ. ಇಲ್ಲಿ ಲ್ಯೂಸೇನ್ ನಗರ, ಚಾಪೆಲ್ ಬ್ರಿಡ್ಜ್, ಮೌಂಟ್ ರಿಗಿ, ಮೌಂಟ್ ಪಿಲಾಟಸ್, ಬುರ್ಗೆನ್‌ಸ್ಟಾಕ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಈ ಸ್ಥಳಕ್ಕೂ ಸಹ ತೆರಳು ಮೇನಿಂದ ಸೆಪ್ಟೆಂಬರ್‌ವರೆಗೆ ಉತ್ತಮ ಸಮಯವಾಗಿದ್ದು, ದೆಹಲಿಯಿಂದ ಜ್ಯೂರಿಕ್‌ಗೆ ವಿಮಾನದಲ್ಲಿ ಆಗಮಿಸಿ ಅಲ್ಲಿಂದ ರೈಲಿನಲ್ಲಿ ಲೇಕ್ ಲ್ಯೂಸೇನ್‌ಗೆ ತಲುಪಬಹುದಾಗಿದೆ.

ಗ್ರ್ಯಾಂಡ್ ಟೂರ್ ಆಫ್ ಸ್ವಿಟ್ಜರ್‌‌ಲೆಂಡ್‌ನ

1600 ಕಿ.ಮೀ ಉದ್ದದ ಈ ಪ್ರವಾಸ ಮಾರ್ಗ ಸ್ವಿಟ್ಜರ್ಲ್ಯಾಂಡ್‌ನ ವೈವಿಧ್ಯಮಯ ಪ್ರಕೃತಿಯನ್ನು ತೋರಿಸುತ್ತದೆ. ಸರೋವರಗಳು, ಹಿಮಪರ್ವತಗಳು, ಹಳ್ಳಿಗಳು. ಗ್ರೂಯೆರ್ಸ್, ಆಂಡರ್‌ಮ್ಯಾಟ್ ಮೊದಲಾದ ಸ್ಥಳಗಳು ಇಲ್ಲಿಯ ವಿಶೇಷ. ಮೇನಿಂದ ಸೆಪ್ಟೆಂಬರ್‌ವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ನೀವು ಕೂಡ ಕುಟುಂಬದವರೊಡನೆ, ಬಂಧುಗಳು, ಸ್ನೇಹಿತರೊಡನೆ ಸ್ವಿಟ್ಜರ್ಲ್ಯಾಂಡ್‌ನ ಪ್ರವಾಸ ಮಾಡೋ ಆಲೋಚನೆಯಲ್ಲಿ ಇದ್ದೀರಾ? ಪ್ರಾಪರ್‌ ಟೂರ್‌ ಗೈಡ್‌, ಪ್ಲಾನ್‌, ಮತ್ತು ಪ್ಯಾಕೇಜ್‌ ಪಡೆಯಲು ಅಡಿಗಾಸ್‌ ಯಾತ್ರಾದ ಈ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ: 7022259008
ಅಡಿಗಾಸ್‌ ಯಾತ್ರಾ ವೆಬ್‌ ಸೈಟ್ ಐಡಿ:‌ www.adigasyatra.com ಭೇಟಿ ನೀಡಿ.

Related posts

ಪ್ರಕೃತಿ ಮತ್ತು ಇತಿಹಾಸದ ಅದ್ಭುತ ಸಂಗಮ: ವಿಯೆಟ್ನಾಮ್‌–ಕಾಂಬೋಡಿಯಾ ಪ್ರವಾಸ ವಿಶೇಷ

Adigas Yatra

ಶ್ರೀಲಂಕಾ ರಾಮಾಯಣ ಟೂರ್‌: ಅಡಿಗಾಸ್‌ ಯಾತ್ರಾದ ವಿಶೇಷ ಪ್ಯಾಕೇಜ್‌!

Adigas Yatra

8 ದಿನಗಳ ಭೂತಾನ್‌ ಪ್ಯಾಕೇಜ್ – ‘ದಿ ಲ್ಯಾಂಡ್ ಆಫ್ ಹ್ಯಾಪಿನೆಸ್’ ಅನುಭವಿಸಿ!

Adigas Yatra

This message appears for Admin Users only:
Please fill the Instagram Access Token. You can get Instagram Access Token by go to this page